HOME » NEWS » Tech » GOOGLE YOUTUBE GMAIL DOWN IN INDIA GOOGLE SUFFERS SERVER OUTAGE HG

Google YouTube Gmail Down: ಯ್ಯೂಟೂಬ್, ಜಿಮೇಲ್ ಸರ್ವರ್ ಡೌನ್!

ಮಾಹಿತಿಗಳ ಪ್ರಕಾರ, ಸಂಜೆ 5 ಗಂಟೆಯಿಂದ ಸರ್ವರ್​ ಡೌನ್​ ಆಗಿರುವುದು ಬೆಳಿಕಿಗೆ ಬಂದಿದೆ ಎಂದು ಡೌನ್​ಡಿಟೆಕ್ಟರ್ ತಿಳಿಸಿದೆ.

news18-kannada
Updated:December 14, 2020, 7:00 PM IST
Google YouTube Gmail Down: ಯ್ಯೂಟೂಬ್, ಜಿಮೇಲ್ ಸರ್ವರ್ ಡೌನ್!
youtube
  • Share this:
ಟೆಕ್​ ದೈತ್ಯ ಗೂಗಲ್​ ಸೇರಿದಂತೆ  ಜಿಮೇಲ್​, ಯ್ಯೂಟೂಬ್​ ಸರ್ವರ್​ ಡೌನ್​ ಆಗಿದ್ದು,  ಭಾರತೀಯ ಬಳಕೆದಾರರು ಕೆಲ ಹೊತ್ತುಗಳ ಕಾಲ ಈ ಸಮಸ್ಯೆ ಎದುರಿಸಿದ್ದರು ಎಂದು ಡೌನ್​ಡಿಟೆಕ್ಟರ್​ ಸಂಸ್ಥೆ ತಿಳಿಸಿದೆ.

ಜಿಮೇಲ್​, ಯ್ಯೂಟೂಬ್ ಮತ್ತು ಗೂಗಲ್​ ಆ್ಯಪ್​ಗಳನ್ನು ಬಳಸಲು ಸಾಧ್ಯವಾಗದೆ ತಡಕಾಡಿದ್ದಾರೆ. ಅನೇಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕುವ ಮೂಲಕ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಯಾಕಾಗಿ ಜಿಮೇಲ್​, ಯ್ಯೂಟೂಬ್​ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬರೆದು ಪ್ರಶ್ನೆ ಮಾಡಿದ್ದಾರೆ.

ಮಾಹಿತಿಗಳ ಪ್ರಕಾರ, ಸಂಜೆ 5 ಗಂಟೆಯಿಂದ ಸರ್ವರ್​ ಡೌನ್​ ಆಗಿರುವುದು ಬೆಳಿಕಿಗೆ ಬಂದಿದೆ ಎಂದು ಡೌನ್​ಡಿಟೆಕ್ಟರ್ ತಿಳಿಸಿದೆ. ಆದರೆ ಗೂಗಲ್​ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. ಆದರೀಗ ಎಲ್ಲಾ ಸರ್ವರ್​ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಅನೇಕರಿಗೆ ಆ್ಯಂಡ್ರಾಯ್ಡ್​ ಮೂಲಕ ಯ್ಯೂಟೂಬ್​ ಆ್ಯಪ್​ ತೆರೆದಾಗ ‘ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ’  ಎಂದು  ಮೇಲ್ನೋಟಕ್ಕೆ ಕಾಣಿಸಿದೆ. ಜೊತೆಗೆ ಐಒಎಸ್​ ಒಳಕೆದಾರರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರು.
Youtube Video

ಗೂಗಲ್​  ಮತ್ತು ಯ್ಯೂಟೂಬ್​, ಜಿಮೇಲ್​ ಸರ್ವರ್​ ಡೌನ್​ ಆಗಲು ನಿಜವಾದ ಕಾರಣವೇನೆಂದು ತಿಳಿದುಬಂದಿಲ್ಲ. ಸದ್ಯ ಕೊರೋನಾ ಸಮಯದಲ್ಲಿ ಇಂಟರ್​ನೆಟ್​ ಬಳಕೆ ಹೆಚ್ಚಾಗಿದೆ. ಮತ್ತೊಂದೆಡೆ ಮನೆಯಿಂದಲೇ ಆಫೀಸು ಕೆಲಸ ಮಾಡುವವರ ಸಂಖ್ಯೆ ಜಾಸ್ತಿಯೇ ಇದೆ. ಹೀರುವಾಗ ಸರ್ವರ್​ ಡೌನ್​ ಆಗಿರುವ ಸಾಧ್ಯತೆ ಹೆಚ್ಚಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಆದರೀಗ
First published: December 14, 2020, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories