Google: ಗೂಗಲ್ ಪ್ಲೇ ಸ್ಟೋರ್‌ನಿಂದ ಹಳೆಯ ಅಪ್ಲಿಕೇಶನ್‍ಗಳನ್ನು ಮರೆಮಾಚಲಿದೆ ಗೂಗಲ್!

Google Play Store: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿಭಿನ್ನ ಬಗೆಯ ಅಪ್ಲಿಕೇಶನ್‍ಗಳಿಗಂತೂ ಯಾವುದೇ ಕೊರತೆ ಇಲ್ಲ. ಆದರೆ, ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ಕೆಲವು ಅಪ್ಲಿಕೇಶನ್‍ಗಳು ನಿಮಗೆ ಕಾಣ ಸಿಗುವುದಿಲ್ಲವಂತೆ.

ಗೂಗಲ್ ಪ್ಲೇ ಸ್ಟೋರ್  / Google Play Store

ಗೂಗಲ್ ಪ್ಲೇ ಸ್ಟೋರ್ / Google Play Store

  • Share this:
    ಗೂಗಲ್ ಪ್ಲೇ ಸ್ಟೋರ್ (Google Play Store) ಲಕ್ಷಾಂತರ ಅಪ್ಲಿಕೇಶನ್‍ಗಳ ಖಜಾನೆ. ಅಲ್ಲಿ, ನಿಮಗೆ ಇಷ್ಟಬಂದ ಅಪ್ಲಿಕೇಶನ್‍ಗಳನ್ನು ಆರಿಸಿಕೊಳ್ಳಲು ಲೆಕ್ಕವಿಲ್ಲದಷ್ಟು ಆಯ್ಕೆಗಳಿವೆ. ಹಾಗಂತ ಎಲ್ಲವೂ ಉಚಿತವಲ್ಲ. ಕೆಲವು ಅಪ್ಲಿಕೇಶನ್‍ಗಳನ್ನು (Applications) ಉಚಿತವಾಗಿ ಬಳಸಬಹುದು ಮತ್ತು ಇನ್ನು ಕೆಲವನ್ನು ಖರೀದಿಸಬೇಕಾಗುತ್ತದೆ. ಅದೇನೇ ಇದ್ದರೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಿಭಿನ್ನ ಬಗೆಯ ಅಪ್ಲಿಕೇಶನ್‍ಗಳಿಗಂತೂ ಯಾವುದೇ ಕೊರತೆ ಇಲ್ಲ. ಆದರೆ, ಇನ್ನು ಮುಂದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ಕೆಲವು ಅಪ್ಲಿಕೇಶನ್‍ಗಳು ನಿಮಗೆ ಕಾಣ ಸಿಗುವುದಿಲ್ಲವಂತೆ. ಏಕೆಂದರೆ, ಅವು ಬಳಕೆದಾರರು ಡೌನ್‍ಲೋಡ್ (Download) ಮಾಡಲು ಅನರ್ಹವಾದ, ಔಟ್‍ಡೇಟೆಡ್ (Outdated) ಆಗಿರುವ, ನೂತನ ಗೌಪ್ಯತೆ ಮತ್ತು ಭದ್ರತಾ ಫೀಚರ್‌ಗಳನ್ನು ಹೊಂದಿರದ ಅಪ್ಲಿಕೇಶನ್‍ಗಳಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸದ್ಯದಲ್ಲಿಯೇ, ಹಳೆದಾಗಿರುವ ಮತ್ತು ಪ್ಲೇ ಸ್ಟೋರ್‌ನ ಸುರಕ್ಷತಾ ಮಾನದಂಡಗಳಿಗೆ ಹೊಂದಿಕೆಯಾಗದ ಅಪ್ಲಿಕೇಶನ್‍ಗಳನ್ನು ಮರೆಮಾಚಲು ಪ್ರಾರಂಭಿಸುವುದಾಗಿ ಗೂಗಲ್ ಘೋಷಿಸಿದೆ.

    ಸ್ಟಾಟಿಸ್ಟಾದ ವರದಿಯೊಂದು ಹೇಳಿರುವ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ , 3.5 ಮಿಲಿಯನ್ ಅಪ್ಲಿಕೇಶನ್‍ಗಳನ್ನು ಹೊಂದಿದೆ. ಹಾಗಾಗಿ, ಅದರಲ್ಲಿ ಬಹಳಷ್ಟು ಹಳೆಯದಾದ ಅಪ್ಲಿಕೇಶನ್‍ಗಳು ಕೂಡ ಇರಬಹುದು. ಅದರರ್ಥ, ಹಳೆಯ ಅಪ್ಲಿಕೇಶನ್‍ಗಳು ತುಂಬಾ ಹಾನಿಕಾರಕ ಎಂದಲ್ಲ. ಆದರೂ ಆ್ಯಂಡ್ರಾಯ್ಡ್‌ ಬಳಕೆದಾರರು, ಅಪ್ಲಿಕೇಶನ್‍ಗಳನ್ನು ಬಳಸುವಾಗ ಸುರಕ್ಷಿತವಾದ ಅನುಭವವನ್ನು ಹೊಂದಬೇಕು ಎಂದು ಗೂಗಲ್ ಬಯಸುತ್ತದೆ. ಅದ್ದರಿಂದ ಈ ನವೆಂಬರ್‌ನಿಂದ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗೂಗಲ್ ತನ್ನ ಕಂಪೆನಿಯ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

    “2022 ನೇ ನವೆಂಬರ್ 1 ರಿಂದ, ಹೊಸ ಪ್ರಮುಖ ಆ್ಯಂಡ್ರಾಯ್ಡ್‌ ಬಿಡುಗಡೆ ಆವೃತ್ತಿಯ ಎರಡು ವರ್ಷಗಳ ಒಳಗೆ ಎಪಿಐ ಮಟ್ಟವನ್ನು ಗುರಿಯಾಗಿಸಿಕೊಳ್ಳದ, ಅಸ್ಥಿತ್ವದಲ್ಲಿ ಇರುವ ಅಪ್ಲಿಕೇಶನ್‍ಗಳು, ಅಪ್ಲಿಕೇಶನ್‍ಗಳ ಗುರಿಯ ಎಪಿಐ ಮಟ್ಟಕ್ಕಿಂತ ಹೆಚ್ಚಿನ ಆ್ಯಂಡ್ರಾಯ್ಡ್‌ ಓಎಸ್ ಆವೃತ್ತಿಗಳನ್ನು ಚಾಲನೆ ಮಾಡುವ ಡಿವೈಸ್‍ಗಳಲ್ಲಿ, ಹೊಸ ಬಳಕೆದಾರರಿಗೆ ಹುಡುಕಲು ಅಥವಾ ಇನ್‍ಸ್ಟಾಲ್ ಮಾಡಿಕೊಳ್ಳಲು ಲಭ್ಯ ಇರುವುದಿಲ್ಲ” ಎಂದು ಗೂಗಲ್ ಆ ಪೋಸ್ಟ್‌ನಲ್ಲಿ ಹೇಳಿದೆ.

    ಈ ವರ್ಷದ ಅಂತ್ಯದ ಒಳಗೆ ಈ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಈಗಾಗಲೇ ನಿಮ್ಮ ಫೋನ್‍ನಲ್ಲಿ ಇರುವ ಹಳೆಯ ಅಪ್ಲಿಕೇಶನ್‍ಗಳನ್ನು ಬಳಸಲು ಸಾಧ್ಯವಾಗುವುದಿಲ್ಲವೇನೋ ಎಂದು ನೀವು ಚಿಂತಿಸಬೇಕಿಲ್ಲ. ಏಕೆಂದರೆ, ಗೂಗಲ್ ಕೇವಲ ಅಪ್ಲಿಕೇಶನ್‍ಗಳನ್ನು ಮರೆಮಾಡಲು ನಿರ್ಧರಿಸಿದೆ, ಅಂದರೆ ಅವು ಪ್ಲೇಸ್ಟೋರ್ ತೆರೆದ ಕೂಡಲೆ ನಿಮಗೆ ಕಾಣಿಸುವುದಿಲ್ಲ ಅಷ್ಟೆ, ಆದರೆ ನೀವು ಪ್ಲೇಸ್ಟೋರ್‌ನಲ್ಲಿ ತುಂಬಾ ಆಳವಾಗಿ ಹುಡುಕಾಡಿದಾಗ ಅವು ನಿಮಗೆ ಕಾಣ ಸಿಗುತ್ತವೆ.

    ಇದನ್ನೂ ಓದಿ: OnePlus 10 Pro: ಡಿಸ್​​ಪ್ಲೇ ವೈಶಿಷ್ಟ್ಯದಿಂದಲೇ ಗೆದ್ದ ಒನ್‌ಪ್ಲಸ್‌ 10 ಪ್ರೋ… ಸಖತ್ತಾಗಿದೆ ಈ ಸ್ಮಾರ್ಟ್​ಫೋನ್​

    ಅಲ್ಲದೆ, ನೀವು ಒಂದು ವೇಳೆ ಯಾವುದಾದರೂ ಅಪ್ಲಿಕೇಶನನ್ನು ತೆಗೆದು ಹಾಕಲು ನಿರ್ಧರಿಸಿದರೆ ಮತ್ತು ಇನ್ಯಾವುದೋ ಕಾರಣಕ್ಕಾಗಿ ಅದನ್ನು ಮತ್ತೆ ರೀ-ಇನ್‍ಸ್ಟಾಲ್ ಮಾಡಲು ಬಯಸಿದರೆ, ಆಗಲೂ ನೀವು ಅದನ್ನು ಡೌನ್‍ಲೋಡ್ ಮಾಡಿಕೊಳ್ಳುವುದು ಸಾಧ್ಯವಿದೆ. ಆದರೆ, ಗೂಗಲ್‍ನಿಂದ ಹಳೆಯದು ಎಂದು ಪರಿಗಣಿಸಲ್ಪಟ್ಟ ಯಾವುದಾದರೂ ಅಪ್ಲಿಕೇಶನನ್ನು ನೀವು ಯಾವತ್ತೂ ಬಳಸಿಯೇ ಇಲ್ಲ ಎಂದುಕೊಳ್ಳಿ. ಹಾಗಿದ್ದಲ್ಲಿ ನೀವು ಅದನ್ನು ಪ್ಲೇಸ್ಟೋರ್‌ನಲ್ಲಿ ಹುಡುಕಲು ಸಾಧ್ಯವಾಗುವುದಿಲ್ಲ.

    ನೂತನ ಪ್ರಮುಖ ಆ್ಯಂಡ್ರಾಯ್ಡ್‌ ಬಿಡುಗಡೆ ಆವೃತ್ತಿಯ ಎರಡು ವರ್ಷಗಳ ಒಳಗೆ, ಎಪಿಐ ಮಟ್ಟವನ್ನು ಗುರಿಯಾಗಿಸಿಕೊಳ್ಳದ ಪ್ಲೇಸ್ಟೋರ್‌ನಲ್ಲಿ ಇರುವ ಎಲ್ಲಾ ಅಪ್ಲಿಕೇಶನ್‍ಗಳು, ಈ ಬದಲಾವಣಾ ನೀತಿಗೆ ಒಳಗಾಗಲಿವೆ.

    ಇದನ್ನೂ ಓದಿ: Video: ಬೆಂಗಳೂರಿನಲ್ಲಿ ಅತಿ ಕಡಿಮೆ ಬೆಲೆಗೆ ಸೆಕೆಂಡ್​ ಹ್ಯಾಂಡ್​ ಐಫೋನ್​ ಇಲ್ಲಿ ಸಿಗುತ್ತೆ!

    ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ, ಆ್ಯಂಡ್ರಾಯ್ಡ್‌ 10 ಮತ್ತು ಹಳೆಯ ಆವೃತ್ತಿಗಳನ್ನು ಗುರಿಯಾಗಿಸಿಕೊಂಡಿರುವ ಅಪ್ಲಿಕೇಶನ್‍ಗಳನ್ನು ಹೊಸ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಹುಡುಕಲು ಮತ್ತು ಅವುಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

    “ಬಳಕೆದಾರರಿಗೆ , ತನ್ನ ವೈಶಿಷ್ಟ್ಯಗಳು ಮತ್ತು ನೀತಿಗಳ ಮೂಲಕ ಸುರಕ್ಷಿತ ಅನುಭವವನ್ನು ಒದಗಿಸುತ್ತಿರುವ ಗೂಗಲ್ ಪ್ಲೇ ಸ್ಟೋರ್, ಪ್ರತೀ ಆ್ಯಂಡ್ರಾಯ್ಡ್‌ ಓಎಸ್ ಆವೃತ್ತಿ ಅಪ್‍ಡೇಟ್‍ನಲ್ಲಿ, ಗೌಪ್ಯತೆ, ಭದ್ರತೆ ಮತ್ತು ಬಳಕೆದಾರರ ಅನುಭವದಲ್ಲಿ ಸುಧಾರಣೆಗಳನ್ನು ತರುತ್ತದೆ. ಈ ಹೊಸ ವೈಶಿಷ್ಟ್ಯಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿರುವುದನ್ನು ಬಳಕೆದಾರರು ಅರಿತುಕೊಳ್ಳುವುದನ್ನು ಖಾತರಿ ಪಡಿಸಲು ಹೊಸ ಆ್ಯಂಡ್ರಾಯ್ಡ್‌ ಆವೃತ್ತಿಗಳಲ್ಲಿ ಅಪ್ಲಿಕೇಶನ್‍ಗಳು ಯಾವುದೇ ಅಡೆತಡೆ ಇಲ್ಲದೆ ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತಪಡಿಸಲು ನಾವು ಡೆವಲಪರ್‌ಗಳೊಂದಿಗೆ ಸೇರಿ ಕೆಲಸ ಮಾಡುತ್ತೇವೆ” ಎಂದು ಗೂಗಲ್ ತಿಳಿಸಿದೆ.
    Published by:Harshith AS
    First published: