ಗೂಗಲ್ ವೈಫೈ ಮತ್ತು ನೆಸ್ಟ್ ವೈಫೈ ನಿರ್ವಹಿಸಲು ಗೂಗಲ್ ವೈಫೈ ಮತ್ತು ಗೂಗಲ್ ಹೋಂ ಎನ್ನುವ ಎರಡು ಪ್ರತ್ಯೇಕ ಆ್ಯಪ್ಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಇದರಲ್ಲಿ ಬದಲಾವಣೆ ಮಾಡಲು ಗೂಗಲ್ ಯೋಚಿಸಿದ್ದು, ಒಂದೇ ಆ್ಯಪ್ನಲ್ಲಿ ನಿಯಂತ್ರಣವನ್ನು ತರುವ ಆಲೋಚನೆಯಲ್ಲಿದೆ. 9to5Google ನ ವರದಿಯ ಪ್ರಕಾರ, ಎಲ್ಲಾ ಗೂಗಲ್ ವೈಫೈ ಮತ್ತು ನೆಸ್ಟ್ ವೈಫೈ ನೆಟ್ವರ್ಕ್ ಮಾಲೀಕರಿಗೆ ಈ ಬಗ್ಗೆ ಇ- ಮೇಲ್ ಕಳುಹಿಸಿದ್ದು, ಗೂಗಲ್ ಮೇ 25 ರಿಂದ ಗೂಗಲ್ ವೈಫೈ ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಗೂಗಲ್ ಹೋಂನಿಂದ ರೂಟರ್ ಇನ್ನೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲಿದ್ದು, ಝೂಮ್ ಕಾಲ್, ಅಸಿಸ್ಟಂಟ್ ಆಧಾರಿತ ವಾಯ್ಸ್ ಕಂಟ್ರೋಲರ್ ಡಿವೈಸ್ ನೋಟಿಫಿಕೇಷನಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ.
ಗೂಗಲ್ ಈ ವರ್ಷದ ಮೇ ಕೊನೆಯಲ್ಲಿ ತನ್ನ ಗೂಗಲ್ ವೈಫೈ ಆ್ಯಪ್ ಕಾರ್ಯಸ್ಥಗಿತಗೊಳಿಸಲು ನಿರ್ಧರಿಸಿದ್ದು, ಕಂಪನಿಯು ನಂತರ ಗೂಗಲ್ ವೈಫೈ ಮತ್ತು ಆನ್ಹಬ್ ರೂಟರ್ಗಳ ಕಾರ್ಯ ನಿಯಂತ್ರಣವನ್ನು ಗೂಗಲ್ ಹೋಂನಲ್ಲಿ ಸೇರಿಸಲು ಚಿಂತನೆ ನಡೆಸುತ್ತಿದೆ.
ಗೂಗಲ್ ತನ್ನ ಗೂಗಲ್ ವೈಫೈ ಆ್ಯಪ್ನಿಂದ ಸ್ಮಾರ್ಟ್ ರೂಟರ್ಗಳ ಕಾರ್ಯ ನಿಯಂತ್ರಣವನ್ನು ತೆಗೆದುಹಾಕಲು ಯೋಚಿಸುತ್ತಿದೆ. ನಂತರ ಇದನ್ನು ಗೂಗಲ್ ಹೋಂ ಆ್ಯಪ್ಗೆ ವರ್ಗಾವಣೆ ಮಾಡಲು ಚಿಂತನೆ ನಡೆಸಿದೆ. ಈ ಕಾರ್ಯ ನಿಯಂತ್ರಣವು ಗೂಗಲ್ ವೈಫೈ ಮತ್ತು ಆನ್ಹಬ್ ರೂಟರ್ಗಳನ್ನು ಒಳಗೊಂಡಿದ್ದು ಸದ್ಯ ವೈಫೈ ಆ್ಯಪ್ ಮೂಲಕ ಕಾನ್ಫಿಗರ್ ಮಾಡಬಹುದಾಗಿದೆ. ಇದಲ್ಲದೇ ಬಳಕೆದಾರರಿಗೆ ಬೇರೆ ಬೇರೆ ರೀತಿಯ ಸೆಟ್ಟಿಂಗ್ಗಳನ್ನು ಆಲ್ಟರ್ ಮಾಡಲು ಅವಕಾಶವನ್ನು ನೀಡಿದೆ. ಅದರಲ್ಲಿ ವೈಫೈ ಆನ್ ಮತ್ತು ಆಫ್, ಇಂಟರ್ನೆಟ್ ಸ್ಪೀಡ್, ವೈಫೈ ಪಾಸ್ವರ್ಡ್ ಡಿಸ್ಪ್ಲೇ ಸೇರಿದಂತೆ ಹಲವಾರು ಆಯ್ಕೆಗಳಿವೆ. The Verge states ವರದಿ ಪ್ರಕಾರ ಆ್ಯಪ್ ಮೇ 25 ರಿಂದ ಕಾರ್ಯ ಸ್ಥಗಿತಗೊಳಿಸಬಹುದು.
ಅಲ್ಲದೇ ಈಗಾಗಲೇ ಗೂಗಲ್ ವೈಫೈ ಮತ್ತು ಆನ್ ಹಬ್ ರೂಟರ್ ಹೊಂದಿರುವ ಗ್ರಾಹಕರು ಮೇ 25 ರ ನಂತರ ಈ ಆ್ಯಪ್ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಮೇ 25 ರ ನಂತರ ನೆಟ್ವರ್ಕ್ ಸ್ಟೇಟಸ್ ತೋರಿಸುವುದಕ್ಕಷ್ಟೇ ಆ್ಯಪ್ ಸೀಮಿತವಾಗಿರುತ್ತದೆ. ಅಲ್ಲದೇ ಕಂಪನಿಯು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ನಿಂದ ಆ್ಯಪ್ ಅನ್ನು ತೆಗೆದು ಹಾಕುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ ಸಂಪೂರ್ಣ ನಿಯಂತ್ರಣ ಗೂಗಲ್ ಹೋಂ ಆ್ಯಪ್ಗೆ ವರ್ಗಾವಣೆಯಾಗುತ್ತದೆ. ಬ್ಲಾಗ್ನಲ್ಲಿ ಗೂಗಲ್ ಈ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಿದೆ. ಗೂಗಲ್ ಹೋಂನಿಂದ ಗೂಗಲ್ ವೈಫೈ ಕಾರ್ಯ ನಿರ್ವಹಣೆ ಮ್ಯಾನೇಜ್ ಮಾಡಬಹುದಾಗಿದೆ. ಈಗ ಚಾಲ್ತಿಯಲ್ಲಿರುವ ಗೂಗಲ್ ವೈಫೈ ನೆಟ್ವರ್ಕ್ಗೆ ನೆಸ್ಟ್ ವೈಫೈ ಜೊತೆಗೆ ನೆಸ್ಟ್ ವೈಫೈ ರೂಟರ್ ಕೂಡ ಸೇರಿಸಬಹುದಾಗಿದೆ.
ಗೂಗಲ್ ಹೋಂ ಆ್ಯಪ್ಗೆ ಸಂಪೂರ್ಣ ನಿಯಂತ್ರಣ ವರ್ಗಾವಣೆಯಾಗುವುದು. ಅಲ್ಲದೇ ವೈಫೈ ಡಿವೈಸ್ಗೆ ರೀ ನೇಮ್, ವೈಫೈ ಡಿವೈಸ್ ರೂಂ ಬದಲಿಸುವುದು, ಅಲ್ಲದೇ ಬಳಕೆದಾರರು ವೈಫೈ ಬದಲಿಸುವುದು ಮತ್ತು ಸೇರಿಸುವುದು ಹೀಗೆ ಹಲವಾರು ಅಂಶಗಳಿಗೆ ಇಲ್ಲಿ ಅವಕಾಶವಿದೆ.
ಮೊದಲ ಬಾರಿಗೆ ಗೂಗಲ್ ವೈಫೈಗೆ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ಕೂಡ ನೀಡಲಾಗುತ್ತಿದೆ. ಬಳಕೆದಾರರು ವೈಫೈ ವಾಯ್ಸ್ ಕಮಾಂಡ್ಸ್ ಬಳಸಿಕೊಂಡು ಸೆಟ್ಟಿಂಗ್ಸ್ ಗೆ ಸಂಬಂಧಿಸಿದಂತೆ ಆನ್, ಆಫ್ , ಇಂಟರ್ನೆಟ್ ಸ್ಪೀಡ್, ವೈಫೈ ಪಾಸ್ವರ್ಡ್ ತೋರಿಸುವುದು, ಅತಿಥಿಗಳಿಗೆ ನೆಸ್ಟ್ ಡಿಸ್ಪ್ಲೇ ತೋರಿಸುವುದು ಈ ರೀತಿಯ ಹಲವಾರು ಪ್ರಯೋಜನವನ್ನು ಪಡೆಯಬಹುದು.
ಗೂಗಲ್ ವೈಫೈ ಡಿವೈಸ್ ಮತ್ತು ಗೂಗಲ್ ವೈಫೈ ಸೆಟ್ಟಿಂಗ್ಸ್ಗಳನ್ನು ಗೂಗಲ್ ಹೋಂ ಸೇರಿಸಿದ ಬಳಿಕ ಗೂಗಲ್ ಆ್ಯಪ್ನಿಂದ ನಿಯಂತ್ರಣವನ್ನು ತೆಗೆದುಹಾಕಲಾಗುತ್ತದೆ. ಒಮ್ಮೆ ಅದನ್ನು ಗೂಗಲ್ ವೈಫೈ ಆ್ಯಪ್ನಿಂದ ತೆಗೆದ ಮೇಲೆ ಮತ್ತೆ ಅದನ್ನು ಸೇರಿಸುವುದು ಅಥವಾ ತೆಗೆಯುವುದನ್ನು ಮಾಡಲು ಸಾಧ್ಯವಿಲ್ಲ. ಬದಲಿಗೆ ಬಳಕದಾರರು ಗೂಗಲ್ ಹೋಂ ಆ್ಯಪ್ ಸದಸ್ಯರೆಂದು ಆ್ಯಡ್ ಮಾಡಿದರೆ ಮಾತ್ರ ವೈ ಫೈ ಡಿವೈಸ್ಗೆ ಆ್ಯಕ್ಸೆಸ್ ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ