Chrome: ಈಗಲೇ ನಿಮ್ಮ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿ, ಇಲ್ಲವಾದಲ್ಲಿ ಹ್ಯಾಕ್ ಆಗೋದು ಪಕ್ಕಾ

ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರೋಮ್‌ ಅನ್ನು ಪ್ರಸ್ತುತ ನವೀಕರಿಸುವಂತೆ ಬಳಕೆದಾರರಿಗೆ ಗೂಗಲ್‌ (Google) ಎಚ್ಚರಿಕೆ ನೀಡಿದೆ. ಹ್ಯಾಕಿಂಗ್ ನಂತಹ ಅಪಾಯವನ್ನು ತಪ್ಪಿಸಲು ಕ್ರೋಮ್ ಅನ್ನು ತ್ವರಿತವಾಗಿ ನವೀಕರಿಸಲು ಗೂಗಲ್‌ ಕೇಳಿಕೊಂಡಿದೆ.

ಕ್ರೋಮ್

ಕ್ರೋಮ್

  • Share this:
ಜಗತ್ತಿನಾದ್ಯಂತ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ವೆಬ್ ಬ್ರೌಸರ್‌ಗಳಲ್ಲಿ (Web browser) ಕ್ರೋಮ್ (Chrome) ಒಂದು. ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರೋಮ್‌ ಅನ್ನು ಪ್ರಸ್ತುತ ನವೀಕರಿಸುವಂತೆ ಬಳಕೆದಾರರಿಗೆ ಗೂಗಲ್‌ (Google) ಎಚ್ಚರಿಕೆ ನೀಡಿದೆ. ಹ್ಯಾಕಿಂಗ್ ನಂತಹ ಅಪಾಯವನ್ನು ತಪ್ಪಿಸಲು ಕ್ರೋಮ್ ಅನ್ನು ತ್ವರಿತವಾಗಿ ನವೀಕರಿಸಲು ಗೂಗಲ್‌ ಕೇಳಿಕೊಂಡಿದೆ.  ʼCVE-2022-3075' ಹೆಸರಿನ ಬಗ್ ಕಾಣದಂತೆ ಇದ್ದು, ಇದರಿಂದ ಬಳಕೆದಾರರಿಗೆ ಅಪಾಯವಿದೆ ಎಂದು ಹೆಸರು ಹೇಳಲು ಬಯಸದ ಟೆಕ್ ದೈತ್ಯರೊಬ್ಬರು ತಿಳಿಸಿದ್ದಾರೆ. "ಮೊಜೊದಲ್ಲಿ ಸಾಕಷ್ಟು ಡೇಟಾ ಮೌಲ್ಯೀಕರಣ" (Insufficient data validation in Mojo) ಎಂಬ ಸಂದೇಶವನ್ನು ಇದು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಹ್ಯಾಕಿಂಗ್ ನಿಂದ ಪಾರಾಗಲು ಕ್ರೋಮ್ ಅಪ್ಡೇಟ್ ಗೆ ಸೂಚನೆ
ಹ್ಯಾಕರ್​ಗಳು ಹ್ಯಾಕಿಂಗ್​ ಪ್ರಯತ್ನಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಕ್ರೋಮ್​ ಬ್ರೌಸರ್​​ನ ಹೊಸ ಸೆಕ್ಯೂರಿಟಿ ಅಪ್ಡೇಟ್ ಅನ್ನು ತಕ್ಷಣವೇ ಇನ್​ಸ್ಟಾಲ್ ಮಾಡಿಕೊಳ್ಳಿ ಎಂದು ಗೂಗಲ್ ತನ್ನ ಬಳಕೆದಾರರಿಗೆ ಸೂಚಿಸಿದೆ. ಗೂಗಲ್ ಕ್ರೋಮ್ ಬಳಸುವ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್​ ಬಳಕೆದಾರರಿಗಾಗಿ ಗೂಗಲ್ ಈ ಹೊಸ ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ಯಾಚ್ ಎಲ್ಲರಿಗೂ ಶೀಘ್ರದಲ್ಲಿಯೇ ಲಭ್ಯವಾಗಲಿದೆ.

ಇದನ್ನೂ ಓದಿ:  Google Pay: ಗೂಗಲ್​ ಪೇ ಬಳಸುತ್ತಿದ್ದೀರಾ? ಯುಪಿಐ ಪಿನ್​ ಬದಲಾಯಿಸಲು ಹೀಗೆ ಮಾಡಿ

ಬಹುತೇಕ ಬಳಕೆದಾರರಿಗಾಗಿ ಈ ಸಮಸ್ಯೆಯನ್ನು ಅಪ್ಡೇಟ್ ಮೂಲಕ ನಿರ್ಬಂಧಿಸಬಹುದು ಮತ್ತು ಇತರೆ ಥರ್ಡ್​ ಪಾರ್ಟಿ ಲೈಬ್ರರಿಗಳಲ್ಲಿ ಈ ಬಗ್ ಉಳಿದುಕೊಂಡಿರುವುದು ಕಂಡು ಬಂದಲ್ಲಿ, ನಾವು ನಿರ್ಬಂಧಗಳನ್ನು ಮುಂದುವರಿಸಲಿದ್ದೇವೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಇತರ ಪ್ರಾಜೆಕ್ಟ್‌ಗಳ ಮೇಲೆ ಅವಲಂಬಿತವಾಗಿರುವ ಥರ್ಡ್ ಪಾರ್ಟಿ ಲೈಬ್ರರಿಯಲ್ಲಿ ದೋಷವು ಅಸ್ತಿತ್ವದಲ್ಲಿದ್ದರೆ ನಾವು ನಿರ್ಬಂಧಗಳನ್ನು ಉಳಿಸಿಕೊಳ್ಳುತ್ತೇವೆ" ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ ಗೂಗಲ್.

ಈ ವರ್ಷದಲ್ಲಿ ಆರನೇ ಬಾರಿ ಎದುರಾದ ಸಮಸ್ಯೆ
ಗೂಗಲ್‌ ಕ್ರೋಮ್‌ ನಲ್ಲಿ ಈ ಸಮಸ್ಯೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹವು ಬಾರಿ ಈ ಅಪಾಯದ ಬಗ್ಗೆ ಬಳಕೆದಾರರಿಗೆ ಗೂಗಲ್‌ ಎಚ್ಚರಿಸಿದೆ. ಇದು ಈ ವರ್ಷದಲ್ಲಿ ಕ್ರೋಮ್ ಎದುರಿಸುತ್ತಿರುವ ಆರನೇ ಝೀರೋ ಡೇ ವಲ್ನರೇಬಿಲಿಟಿ (zero-day vulnerability) ಅಪಾಯವಾಗಿದೆ.

ಇತ್ತೀಚಿನ ಭದ್ರತಾ ನವೀಕರಣವನ್ನು ಸಕ್ರಿಯಗೊಳಿಸಲು ಕ್ರೋಮ್ ಬಳಕೆದಾರರು ಇದೀಗ ತಮ್ಮ ಬ್ರೌಸರ್ ಅನ್ನು ಮರುಪ್ರಾರಂಭಿಸಬೇಕು. ಆಗಸ್ಟ್ 30 ರಂದು ಗೂಗಲ್ ಕ್ರೋಮ್​ನ 105ನೇ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಈಗ ಅಪ್ಡೇಟ್ ನೀಡಲಾಗುತ್ತಿದೆ. "ಸುರಕ್ಷತಾ ದೋಷಗಳು ಸ್ಥಿರವಾದ ಚಾನಲ್ ಅನ್ನು ತಲುಪುವುದನ್ನು ತಡೆಯಲು ಅಭಿವೃದ್ಧಿ ಕೆಲಸದಲ್ಲಿ ನಮ್ಮೊಂದಿಗೆ ಕೆಲಸ ಮಾಡಿದ ಎಲ್ಲಾ ಭದ್ರತಾ ಸಂಶೋಧಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ" ಎಂದು ಕಂಪನಿ ಹೇಳಿದೆ.

ಗೂಗಲ್‌ ಕ್ರೋಮ್‌ (GOOGLE CHROME) ಅಪ್‌ಡೇಟ್: ಹೇಗೆ ಮಾಡುವುದು?
ತೀರಾ ಇತ್ತೀಚಿನ ಭದ್ರತಾ ನವೀಕರಣವನ್ನು ಅನ್ವಯಿಸಲು, Chrome ಬಳಕೆದಾರರು ತಮ್ಮ ಬ್ರೌಸರ್‌ಗಳನ್ನು ಮರುಪ್ರಾರಂಭಿಸಬೇಕು. ಕ್ರೋಮ್ ಆವೃತ್ತಿ 105 ರ ಆಗಸ್ಟ್ 30 ರ ಬಿಡುಗಡೆಯ ನಂತರ, ಗೂಗಲ್ ಈ ಇತ್ತೀಚಿನ ಅಪ್‌ಗ್ರೇಡ್ ಅನ್ನು ನೀಡಿತು.

ಇದನ್ನೂ ಓದಿ: Iphone​ ಜೊತೆಗೆ ಚಾರ್ಜರ್​ ನೀಡದಿದ್ರೆ ಮಾರಾಟವನ್ನು ಸ್ಥಗಿತ ಮಾಡಿ; ಆ್ಯಪಲ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬ್ರೆಜಿಲ್​

  • ನಿಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ, ಕ್ರೋಮ್ ಅನ್ನು ಪ್ರಾರಂಭಿಸಿ.

  • ಬಳಕೆದಾರರು ಮೇಲಿನ ಬಲ ಮೂಲೆಯಲ್ಲಿ ಮೂರು ಚುಕ್ಕೆಗಳ ವಿಭಾಗದಲ್ಲಿ ಕ್ಲಿಕ್ ಮಾಡಿ.

  • ಮುಂದೆ, "ಕಸ್ಟ್‌ ಮೈಸ್‌ ಗೂಗಲ್‌ ಎಂಡ್‌ ಕಂಟ್ರೋಲ್‌ ಗೂಗಲ್‌ ಕ್ರೋಮ್ (‌ Customise and Google Chrome) ಅನ್ನು ಆಯ್ಕೆಮಾಡಿ.

  • ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ "ಅಬೌಟ್‌ ಕ್ರೋಮ್" ಆಯ್ಕೆಮಾಡಿ.

  • ನಂತರ Google Chrome ನವೀಕರಣ (Google Chrome Update) ವನ್ನು ಆಯ್ಕೆಮಾಡಿ.  ನಿಮಗೆ ಈ ಆಯ್ಕೆ ಸಿಗದಿದ್ದರೆ ನೀವು ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವಿರಿ ಎಂದರ್ಥ.

  • ಕೊನೆಯದಾಗಿ ರೀಲಾಂಚ್ (Relaunch) ಒತ್ತಿರಿ.

Published by:Ashwini Prabhu
First published: