Google Chrome ಬಳಕೆದಾರರಿಗೆ ಗಂಭೀರ ಭದ್ರತಾ ಅಪಾಯದ ಕುರಿತು ಎಚ್ಚರಿಕೆ; ಅಪ್‌ಡೇಟ್ ಸಲಹೆ ನೀಡಿದ ಟೆಕ್ ದೈತ್ಯ

Google Chrome Update: ಹೊಸ ಬ್ಲಾಗ್ ಪೋಸ್ಟ್‌ನಲ್ಲಿರುವ ದುರ್ಬಲತೆಯನ್ನು ಗೂಗಲ್ ಒಪ್ಪಿಕೊಂಡಿದೆ. ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿಯೇ ಕ್ರೋಮ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿದೆ. CVE-2021-37973 ಹೆಸರಿನ ಭದ್ರತಾ ಲೋಪವು ಬ್ಲಾಗ್‌ನಲ್ಲಿದ್ದು ಲಿನಕ್ಸ್, ಮ್ಯಾಕ್‌ಓಎಸ್ ಹಾಗೂ ವಿಂಡೋಸ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

Google Chrome

Google Chrome

  • Share this:
    Google Chrome: ಕ್ರೋಮ್ ಒಳಗೊಂಡಿರುವ ಗಂಭೀರ ಭದ್ರತಾ ದೋಷವನ್ನು ಗೂಗಲ್ ಒಪ್ಪಿಕೊಂಡಿದೆ. ಟೆಕ್ ದೈತ್ಯ ದೋಷವನ್ನು ಸರಿಪಡಿಸುವ ಸಲುವಾಗಿಯೇ ಪ್ರಮುಖ ಭದ್ರತಾ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದ್ದು ಕ್ರೋಮ್ ಬಳಕೆದಾರರು ತಮ್ಮ ಬ್ರೌಸರ್ ಅನ್ನು ಈ ಅಪ್‌ಡೇಟ್ ಮಾಡುವಂತೆ ತಿಳಿಸಲಾಗಿದೆ.ಕ್ರೋಮ್ ಗಂಭೀರವಾದ ಭದ್ರತಾ ಸಮಸ್ಯೆಗಳಿಗೆ ಒಳಪಟ್ಟಿದೆ ಎಂಬ ಅಂಶವನ್ನು ಗೂಗಲ್ ದೃಢೀಕರಿಸಿದ್ದು ತನ್ನ ಬಳಕೆದಾರರಿಗೆ ವೆಬ್ ಬ್ರೌಸರ್‌ನ ಇತ್ತೀಚಿನ ಆವೃತ್ತಿಯೊಂದಿಗೆ ಅಪ್‌ಡೇಟ್ ಮಾಡಿಕೊಳ್ಳುವಂತೆ ವಿನಂತಿಸಿಕೊಂಡಿದೆ. ಭದ್ರತಾ ವೈಫಲ್ಯಗಳನ್ನು ಗಂಭೀರ ಎಂದು ಪರಿಗಣಿಸಲಾಗಿದ್ದು ಏಕೆಂದರೆ ಗೂಗಲ್ ಈ ಸಮಸ್ಯೆನ್ನು ಸರಿಪಡಿಸುವ ಮುನ್ನವೇ ಹ್ಯಾಕರ್‌ಗಳು ಕ್ರೋಮ್ ಅನ್ನು ವಶಪಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ

    ಹೊಸ ಬ್ಲಾಗ್ ಪೋಸ್ಟ್‌ನಲ್ಲಿರುವ ದುರ್ಬಲತೆಯನ್ನು ಗೂಗಲ್ ಒಪ್ಪಿಕೊಂಡಿದೆ. ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿಯೇ ಕ್ರೋಮ್ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿದೆ. CVE-2021-37973 ಹೆಸರಿನ ಭದ್ರತಾ ಲೋಪವು ಬ್ಲಾಗ್‌ನಲ್ಲಿದ್ದು ಲಿನಕ್ಸ್, ಮ್ಯಾಕ್‌ಓಎಸ್ ಹಾಗೂ ವಿಂಡೋಸ್ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಅಪಾಯದಿಂದ ಬಳಕೆದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗೂಗಲ್ ಕ್ರೋಮ್ 94.0.4606.61 ಸ್ಥಿರ ಚಾನಲ್ ಅನ್ನು ವಿಂಡೋಸ್, ಮ್ಯಾಕ್ ಹಾಗೂ ಲಿನಕ್ಸ್‌ಗೆ ಬಿಡುಗಡೆ ಮಾಡುತ್ತಿದೆ.ಭದ್ರತಾ ಅಪಾಯವನ್ನು ಶೂನ್ಯ ದುರ್ಬಲತೆ ಎಂದು ಪರಿಗಣಿಸಲಾಗಿದ್ದು ಗೂಗಲ್ ಇದನ್ನು ಸರಿಪಡಿಸುವ ಮುನ್ನವೇ ಹ್ಯಾಕರ್‌ಗಳ ಸಕ್ರಿಯ ದಾಳಿಗೆ ಒಳಪಟ್ಟಿದೆ ಎಂಬ ಅಂಶ ನಿಚ್ಚಳವಾಗಿದೆ. ಗೂಗಲ್ ಬ್ಲಾಗ್ ಒಂದರಲ್ಲಿ ಈ ಭದ್ರತಾ ದೋಷವನ್ನು ದೃಢೀಕರಿಸಿದ್ದು CVE-2021-37973 ದೋಷ ಅಸ್ತಿತ್ವದಲ್ಲಿದೆ ಎಂದು ನಮೂದಿಸಿದೆ. ಇದು ನಿಯಮಿತ ಭದ್ರತಾ ದೋಷಗಳಿಗಿಂತ ಹೆಚ್ಚು ಅಪಾಯಕಾರಿ ಎಂಬುದಾಗಿ ಪರಿಗಣಿತವಾಗಿದ್ದು ಇದು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಅಪಾಯದ ಮಟ್ಟವನ್ನು ಹೆಚ್ಚಿಸಿದೆ.

    ಗೂಗಲ್ ಈ ಭದ್ರತಾ ನ್ಯೂನತೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ಗೂಗಲ್ ತನ್ನ ಕ್ರೋಮ್ ಬಳಕೆದಾರರ ಬೇಸ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ್ದು ಈ ದೋಷಗಳು ಹೊಸ ಅಪ್‌ಗ್ರೇಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ದೃಢಪಟ್ಟ ನಂತರವೇ ಲೋಪದೋಷದ ಕುರಿತು ಇನ್ನಷ್ಟು ಮಾಹಿತಿಗಳನ್ನು ಗೂಗಲ್ ನೀಡಲಿದೆ ಎಂಬುದು ತಿಳಿದುಬಂದಿದೆ. ಈ ದುರ್ಬಲತೆಯನ್ನು ಗೂಗಲ್ Use-After-Free (UAF) ಎಂದು ಹೆಸರಿಸಿದೆ. ಪ್ರೊಗ್ರಾಮ್ ಕಾರ್ಯಾಚರಣೆಯ ಸಮಯದಲ್ಲಿ ಡೈನಾಮಿಕ್ ಮೆಮೊರಿಯ ತಪ್ಪಾದ ಬಳಕೆಯಿಂದಾಗಿ ಇಂತಹ ಲೋಪದೋಷಗಳು ಉದ್ಭವಗೊಳ್ಳುತ್ತವೆ ಎಂಬುದು ಗೂಗಲ್ ತಿಳಿಸಿರುವ ಅಂಶವಾಗಿದೆ. ಕ್ಯಾಸ್ಪರ್ಸ್ಕಿಯು ತಿಳಿಸಿರುವಂತೆ ಮೆಮೊರಿಗೆ ಪಾಯಿಂಟರ್ ಅನ್ನು ಕ್ಲಿಯರ್ ಮಾಡದೇ ಇದ್ದರೆ ಮೆಮೊರಿ ಲೊಕೇಶನ್ ಅನ್ನು ಮುಕ್ತಗೊಳಿಸಿಕೊಂಡು ಹ್ಯಾಕರ್‌ಗಳು ಈ ದೋಷವನ್ನು ತಮಗೆ ಬೇಕಾದಂತೆ ಬಳಸಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

    Read Also: WhatsApp: 1 ತಿಂಗಳು ಬಾಕಿ…ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯ ನಿರ್ವಹಿಸುವುದಿಲ್ಲ!

    ಎಲ್ಲಾ ಕ್ರೋಮ್ ಬಳಕೆದಾರರು ತಮ್ಮ ಕ್ರೋಮ್ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡುವ ಮೂಲಕ ದೋಷಗಳಿಗೆ ಹೊಸ ಭದ್ರತಾ ಫಿಕ್ಸ್ ಅನ್ನು ಅನ್ವಯಿಸಬೇಕು ಎಂದು ಗೂಗಲ್ ಎಚ್ಚರಿಸಿದೆ. ಬಳಕೆದಾರರು ತಮ್ಮ ಪ್ರಸ್ತುತ ಕ್ರೋಮ್ ಆವೃತ್ತಿಯನ್ನು ಪರಿಶೀಲಿಸಲು ಸೆಟ್ಟಿಂಗ್‌ಗಳು> ಸಹಾಯ> Google Chrome ಇಲ್ಲಿ ನ್ಯಾವಿಗೇಟ್ ಮಾಡಬಹುದು. ಕ್ರೋಮ್ ಆವೃತ್ತಿ 94.0.4606.61 ಅಥವಾ ಹೆಚ್ಚಿನದಾಗಿದ್ದರೆ, ಭದ್ರತಾ ಫಿಕ್ಸ್ ಲಭ್ಯವಿದ್ದು ಮತ್ತು ಕಾರ್ಯನಿರ್ವಹಿಸುತ್ತಿದೆ. ಈ ಆವೃತ್ತಿಗಿಂತ ಕೆಳಗಿನ ಆವೃತ್ತಿಯನ್ನು ಹೊಂದಿದ್ದರೆ ಫಿಕ್ಸ್ ಅನ್ನು ಅನ್ವಯಿಸಲು ಬ್ರೌಸರ್ ಅನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ.
    First published: