news18-kannada Updated:April 2, 2021, 9:12 AM IST
ಸುದ್ದಿ (Photo:google)
ಇಂಟರ್ನೆಟ್ನಲ್ಲಿ ಆಗಾಗ ನಕಲಿ ಸುದ್ದಿಗಳು ಅಥವಾ ತಪ್ಪಾದ ಮಾಹಿತಿಗಳು ಹರಿದಾಡುತ್ತಿರುತ್ತದೆ. ಓದುಗನಿಗೆ ಕೆಲವು ಸುದ್ದಿಯ ಸತ್ಯಾಸತ್ಯೆಯ ಬಗ್ಗೆ ಅರಿವಿರುವುದಿಲ್ಲ. ಸ್ಮಾರ್ಟ್ಫೋನ್ನಲ್ಲಿ ಬಂದಿರುವ ನೋಟಿಫಿಕೇಶನ್ ತೆರೆಯುತ್ತಾ ಹಾಗೂ ಸುದ್ದಿಯನ್ನು ನೋಡಿ ಸತ್ಯವೆಂದು ತಿಳಿಯುತ್ತಾರೆ. ಆದರೆ ಕೆಲವೊಮ್ಮೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುತ್ತದೆ.
ಆನ್ಲೈನ್ನಲ್ಲಿ ಹರಿದಾಡುವ ನಕಲಿ ಸುದ್ದಿಯನ್ನು ಪರಿಶೀಲಿಸಲು ಗೂಗಲ್ ತನ್ನ ಬಳಕೆದಾರರಿಗೆ ಅನುಮತಿಸುತ್ತದೆ. ಗೂಗಲ್ನ ಪರಿಕರಗಳನ್ನು ಬಳಸಿಕೊಂಡು ಲೇಖನ ಅಥವಾ ಚಿತ್ರವನ್ನು ಪರಿಶೀಲಿಸಬಹುದಾಗಿದೆ. ಹಾಗಾಗಿ ಇಂಟರ್ನೆಟ್ ಮೂಲಕ ಹರಿದಾಡುವ ಮಾಹಿತಿಗಳ ಸತ್ಯಾ ಸತ್ಯತೆಯನ್ನು ಮತ್ತು ಸುದ್ದಿಯು ನಕಲಿಯೇ ಎಂದು ತಿಳಿಸಲು ಗೂಗಲ್ ತನ್ನ ಬಳಕೆದಾರರಿಗೆ ಕೆಲವು ಟಿಪ್ಸ್ ನೀಡಿದೆ.
ಅಲೆಕ್ಸಿಯೋಸ್ ಮಾಂಟ್ಜಾರ್ಲಿಸ್, ಸುದ್ದಿ ಮತ್ತು ಮಾಹಿತಿ ಹುಡುಕಾಟದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಫಾಕ್ಟ್ಚೆಕ್ಗಳನ್ನು ಪತ್ತೆಹಚ್ಚಿದ್ದಾರೆ. ಎಲ್ಲಾ ಫಾಕ್ಟ್ಚೆಕ್ಗಳು ಆ ಕಾಲವಧಿಯ ಹುಡುಕಾಟದಲ್ಲಿ 2.4 ಬಿಲಿಯನ್ಗಿಂತ ಹೆಚ್ಚಿನ ಅನಿಸಿಕೆಯನ್ನು ಪಡೆದಿದೆ.
ಆನ್ಲೈನ್ನಲ್ಲಿ ಬರುವ ತಪ್ಪು ಮಾಹಿತಿ ಅಥವಾ ನಕಲಿ ಸುದ್ದಿಯನ್ನು ಹೀಗೆ ಪರಿಶೀಲಿಸಿರಿ...
ಸುದ್ದಿಯ ಮೂಲದ ಬಗ್ಗೆ ತಿಳಿದುಕೊಳ್ಳಿ: ಓದುವ ಮೊದಲು ಸುದ್ದಿಯ ಮೂಲ ಮತ್ತು ಯಾವ ವೆಬ್ಸೈಟ್ನಲ್ಲಿ ಪ್ರಸಾರವಾದದ್ದು?, ಯಾವಾಗ ಬರೆದದ್ದು? ಎಂಬುದನ್ನು ತಿಳಿಯಿರಿ. ಗೂಗಲ್ ಮೂಲಕ ಈ ಬಗ್ಗೆ ಎಲ್ಲಾ ಮಾಹಿತಿಗಳು ದೊರೆಯುತ್ತದೆ.
ನೈಜ ಚಿತ್ರವೆಂದು ತಿಳಿಯಿರಿ: ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿ ಆಗಾಗ ನಕಲಿ ಫೋಟೋಗಳು ಹರಿದಾಡುತ್ತಿರುತ್ತದೆ. ಕೆಲವೊಮ್ಮೆ ಹಳೆಯ ಫೋಟೋ ಮತ್ತೆ ಫಾರ್ವರ್ಡ್ ಆಗುತ್ತಿರುತ್ತದೆ. ಅಂತಹ ಫೋಟೋಗಳು ಜನರ ದಾರಿ ತಪ್ಪಿಸುತ್ತದೆ. ಹಾಗಾಗಿ ಫೋಟೋದ ಬಲ ಭಾಗವನ್ನು ಕ್ಲಿಕ್ ಮಾಡುವ ಮೂಲಕ ನೈಜ ಚಿತ್ರವೇ ಎಂದು ಪರಿಶೀಲಿಸಿ. ಆ ಬಳಿಕ ಫೋಟೋದ ಯಾವಗದ್ದು? ಎಂದು ತಿಳಿಯಿರಿ.
ಇನ್ನು ಗೂಗಲ್ ಮೂಲಕ ಫೋಟೋವನ್ನು ಹುಡುಕಬಹುದಾಗಿದೆ. ಗೂಗಲ್ ಸರ್ಚ್ ಫೋಟೋದಲ್ಲಿ ಮಾಹಿತಿ ದೊರಕುತ್ತದೆ.
ಒಂದಕ್ಕಿಂತ ಹೆಚ್ಚು ಮೂಲಗಳಿಗಾಗಿ ಹುಡುಕಿ: ಒಂದೇ ಸುದ್ದಿಗೆ ಸೀಮಿತವಾಗಿರಬೇಡಿ. ಆ ಸುದ್ದಿಗೆ ತಕ್ಕಂತೆ ಬೇರೆ ಯಾವೆಲ್ಲಾ ಸುದ್ದಿಗಳು ಹರಿದಾಡಿದೆ?. ಅದರ ಮೂಲ ಎಲ್ಲಿ? ಎಂಬುದನ್ನು ಮೊದಲು ಹುಡುಕಿ.
ಗೂಗಲ್ ಫಾಕ್ಟ್ ಚೆಕರ್ ಬಳಸಿ: ಗೂಗಲ್ ನಕಲಿ ಸುದ್ದಿಯೇ ಎಂದು ಪರಿಶೀಲಿಸಲು ಫಾಕ್ಟ್ ಚೆಕ್ ಬಳಸಿ. ಅದರ ಮೂಲಕ ಸುದ್ದಿ ಪ್ರಸಾರವಾಗಿರುವ ದಿನಾಂಕ, ಸುದ್ದಿಯ ಕುರಿತಾದ ಮಾಹಿತಿ ಕಲೆ ಹಾಕಬಹುದಾಗಿದೆ.
ಘಟನೆಯ ಸ್ಥಳದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ: ಒಂದು ಘಟನೆಯ ಕುರಿತು ಸುದ್ದಿಯಾದರೆ ಅಲ್ಲಿನ ಸ್ಥಳದಲ್ಲಿ ನಿಜವಾಗಿಯು ಅಂತಹ ಘಟನೆ ನಡೆದಿದೆಯಾ ಎಂಬುದನ್ನು ಖಚಿತಪಡಿಸಿ. ಇದರಿಂದ ಸುದ್ದಿ ನಕಲಿಯೇ-ಅಸಲಿಯೇ ಎಂದು ತಿಳಿಯುತ್ತದೆ.
Published by:
Harshith AS
First published:
April 2, 2021, 9:12 AM IST