Google: ಹಬ್ಬದಂದು ಬಳಕೆದಾರರಿಗೆ ಹೊಸ ಅನುಭವ ನೀಡಲು AR ಫಿಲ್ಟರ್ ಪರಿಚಯಿಸಿದ ಗೂಗಲ್

Diwali 2020: ಗೂಗಲ್​ ಪ್ರತಿವರ್ಷ ವಿಶೇಷ ಡೂಡಲ್ ನಿರ್ಮಿಸಿ ದೀಪಾವಳಿ ಸಡಗರವನ್ನು ಸಂಭ್ರಮಿಸುತ್ತದೆ. ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತದೆ. ಈ ವರ್ಷ ವಿಶೇಷ ಎಆರ್​ ಫಿಲ್ಟರ್​ ಅನ್ನು ನೀಡಿದೆ. ಅದರಲ್ಲಿ ಅಲಂಕೃತಗೊಂಡ ದೀಪ, ಪಟಾಕಿಯನ್ನು ನೀಡಿದೆ.

ಗೂಗಲ್

ಗೂಗಲ್

  • Share this:
    ಇತ್ತೀಚೆಗೆ ಜನಪ್ರಿಯ ಇನ್​​ಸ್ಟಾಗ್ರಾಂ ದೀಪಾವಳಿ ಹಬ್ಬದ ಪ್ರಯುಕ್ತ ಎಆರ್(Augmented reality)​​ ಫಿಲ್ಟರ್​ ಅನ್ನು ಪರಿಚಯಿಸಿತ್ತು. ಇದೀಗ  ಟೆಕ್​​ ದೈತ್ಯ ಗೂಗಲ್​ ತನ್ನ ಬಳಕೆದಾರರಿಗೆ ಎಆರ್​ ಫಿಲ್ಟರ್​ ಅನ್ನು ಪರಿಚಯಿಸಿದೆ. ಬಳಕೆದಾರರಿಗೆ ಹಬ್ಬದ ಪ್ರಯುಕ್ತ ನೂತನ ಅನುಭವವನ್ನು ನೀಡಲು ಗೂಗಲ್​ ಮುಂದಾಗಿದೆ.

    ಗೂಗಲ್​ ಪ್ರತಿವರ್ಷ ವಿಶೇಷ ಡೂಡಲ್ ನಿರ್ಮಿಸಿ ದೀಪಾವಳಿ ಸಡಗರವನ್ನು ಸಂಭ್ರಮಿಸುತ್ತದೆ. ಬಳಕೆದಾರರಿಗೆ ಹೊಸ ಅನುಭವವನ್ನು ನೀಡುತ್ತದೆ. ಈ ವರ್ಷ ವಿಶೇಷ ಎಆರ್​ ಫಿಲ್ಟರ್​ ಅನ್ನು ನೀಡಿದೆ. ಅದರಲ್ಲಿ ಅಲಂಕೃತಗೊಂಡ ದೀಪ, ಪಟಾಕಿಯನ್ನು ನೀಡಿದೆ.

    ಅಷ್ಟು ಮಾತ್ರವಲ್ಲದೆ, ವೆಬ್​ಸೈಟ್​ ಲಿಂಕ್​ ಮೂಲಕ ದೀಪಾವಳಿ ಸಂಸ್ಕೃತಿ ಮತ್ತು ಮನೆಯಲ್ಲಿ ಆಚರಿಸುವ ಹಬ್ಬದ ಅನುಭವವನ್ನು ಹಂಚಿಕೊಳ್ಳಬಹುದಾಗಿದೆ. ಬೆಂಬಲಿತ ಸ್ಮಾರ್ಟ್​ಫೋನ್ ಮೂಲಕ ಅನುಭವ ಪಡೆಯಲು ಸಾಧ್ಯವೆಂದು ಗೂಗಲ್​ ತಿಳಿಸಿದೆ.

    ಗೂಗಲ್​ ಈ ಬಗ್ಗೆ ಹೇಳಿಕೆ ನೀಡಿದ್ದು, ‘ದೀಪಾವಳಿ ಹಬ್ಬದ ಉತ್ಸಾಹವನ್ನು ಮರು ಸೃಷ್ಟಿಸಲು, ಹೊಸ ಅನುಭವನ್ನು ನೀಡಲು ಪ್ರಯತ್ನಿಸುತ್ತಿದೆ. ಅಲಂಕೃತ ದೀಪಾ ಹಾಗೂ ಪಟಾಕಿಯನ್ನು ವಾಸ್ತವಿಕವಾಗಿ ಸಿಡಿಸುವಂತಹ ಅನುಭವನ್ನು ಎಆರ್​ ಫಿಲ್ಟರ್​ ನೀಡಲಿದೆ’ ಎಂದು ತಿಳಿಸಿದೆ.

    ಗೂಗಲ್​ ಕಲೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸಲು 20 ಸಾಂಸ್ಕೃತಿಕ ಪರಂಪರೆಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಚಿತ್ರಗಳು, ಆನ್​ಲೈನ್​ ಕಥೆಗಳು, ಜಾನಪದ ಕಥೆಗಳನ್ನು ಗೂಗಲ್ ಪ್ರಕಟಿಸಲಿದೆ.
    First published: