Google: ಗೂಗಲ್ ತೆಕ್ಕೆಗೆ ಸೇರಿಕೊಂಡ ಫಿಟ್​ಬಿಟ್​ ಕಂಪೆನಿ!

ಗೂಗಲ್​ ಸಂಸ್ಥೆ ಹಾಡ್​ವೇರ್​ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮತ್ತು ಪಾಲು ಪಡೆಯಲು ಮುಂದಾಗಿದೆ. ಹೀಗಾಗಿ ಫಿಟ್​ಬಿಟ್​ ಉತ್ಪಾದಿಸುವ ಸ್ಮಾರ್ಟ್​ಗ್ಯಾಜೆಟ್​ಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿದೆ. ಜೊತೆಗೆ ಮಾರುಕಟ್ಟೆಯನ್ನು ವೃದ್ಧಿಸಲಿದೆ.

news18-kannada
Updated:November 2, 2019, 5:17 PM IST
Google: ಗೂಗಲ್ ತೆಕ್ಕೆಗೆ ಸೇರಿಕೊಂಡ ಫಿಟ್​ಬಿಟ್​ ಕಂಪೆನಿ!
Fitbit
news18-kannada
Updated: November 2, 2019, 5:17 PM IST
ಸ್ಮಾರ್ಟ್​ಗ್ಯಾಜೆಟ್​ಗಳನ್ನು ತಯಾರಿಸುತ್ತಿದ್ದ ಫಿಟ್​ಬಿಟ್​ ಕಂಪೆನಿಯನ್ನು ಗೂಗಲ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಮಾಹಿತಿಗಳ ಪ್ರಕಾರ 2.1 ಬಿಲಿಯನ್​ ಡಾಲರ್​ ಮೊತ್ತಕ್ಕೆ ಗೂಗಲ್​ ಫಿಟ್​ಬಿಟ್ ಕಂಪೆನಿಯನ್ನು​ ಖರೀದಿಸುತ್ತಿದೆ ಎನ್ನಲಾಗಿದೆ.

ಗೂಗಲ್​ ಸಂಸ್ಥೆ ಹಾಡ್​ವೇರ್​ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮತ್ತು ಪಾಲು ಪಡೆಯಲು ಮುಂದಾಗಿದೆ. ಹೀಗಾಗಿ ಫಿಟ್​ಬಿಟ್​ ಉತ್ಪಾದಿಸುವ ಸ್ಮಾರ್ಟ್​ಗ್ಯಾಜೆಟ್​ಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಿದೆ. ಜೊತೆಗೆ ಮಾರುಕಟ್ಟೆಯನ್ನು ವೃದ್ಧಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜಾಗ ಹೂಡಿರುವ ಆ್ಯಪಲ್ ಕಂಪೆನಿಗೆ ಪೈಪೋಟಿ ನೀಡಲು ಫಿಟ್​ಬಿಟ್​ ಕಂಪೆನಿ ಮುಂದಾಗಿದೆ. ಹಾಗಾಗೀ ಗೂಗಲ್​ ಫಿಟ್​ಬಿಟ್​ ಕಂಪೆನಿಯನ್ನು ಖರೀದಿಸುತ್ತಿದೆ.

ಫಿಟ್​ಬಿಟ್​ ಕಂಪೆನಿ ಫಿಟ್​ನೆಸ್​​ ಗ್ಯಾಜೆಟ್​​ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಗಳಿಸಿಕೊಂಡಿತ್ತು. ಆನಂತರ ಚೀನಾ ಮೂಲದ ಶಿಯೋಮಿ, ಹುವೈ ಮತ್ತಿತರ ಬ್ರಾಂಡ್​ಗಳು ಮಾರುಕಟ್ಟೆಗೆ ಕಾಲಿರಿಸುತ್ತಿದಂತೆ ತನ್ನ ಪಾಲನ್ನು ಕಳೆದುಕೊಂಡಿತು.

ಇದೀಗ ಫಿಟ್​ಬಿಟ್​ ಕಂಪೆನಿ ಗೂಗಲ್​ ತೆಕ್ಕೆಗೆ ಸೇರಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿದೆ.

ಇದನ್ನೂ ಓದಿ: ‘ಯಾವುದೇ ಕಾರಣಕ್ಕೂ ಪೈಲ್ವಾನ್-2 ಆಗೋಕೆ ಬಿಡೋಲ್ಲ’: ನಿರ್ಮಾಪಕರ ವಿರುದ್ಧ ಕಿಚ್ಚನ ಅಭಿಮಾನಿಗಳ ಆಕ್ರೋಶ

First published:November 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...