Iphone​ ಬಳಕೆದಾರರೇ, ನಿಮಗೆ ಸಿಗಲಿದೆ ಗೂಗಲ್ ಲಾಂಚ್ ಮಾಡಲಿರುವ 'ಸ್ವಿಚ್ ಟು ಆ್ಯಂಡ್ರಾಯ್ಡ್' ವೈಶಿಷ್ಟ್ಯ!

Apple Iphone: ಐಫೋನ್ ಬಳಸಿ ಅದರಲ್ಲಿ ಆ್ಯಂಡ್ರಾಯ್ಡ್ ಇರಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಈಗ ಈ ಸವಾಲು ಅತಿ ಶೀಘ್ರದಲ್ಲೇ ಕೊನೆಗೊಳ್ಳುವ ಸೂಚನೆ ಸಿಕ್ಕಿದೆ. ಶೀಘ್ರದಲ್ಲೇ ಗೂಗಲ್ 'ಸ್ವಿಚ್ ಟು ಆ್ಯಂಡ್ರಾಯ್ಡ್' ಅನ್ನು ಹೊರತರಲಿದೆ ಎಂದು ತಿಳಿದುಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ನಿಮಗೆ ಈಗಾಗಲೇ ಗೊತ್ತಿರುವಂತೆ ಜಗತ್ತಿನ ಎರಡು ದಿಗ್ಗಜ ತಂತ್ರಜ್ಞಾನ ಕಂಪನಿಗಳಾದ ಗೂಗಲ್ (Google) ಹಾಗೂ ಆ್ಯಪಲ್ (Apple) ವಿಶೇಷವಾಗಿ ಸ್ಮಾರ್ಟ್‌ಫೋನ್ (Smartphone) ಬಳಕೆಗೆ ಸಂಬಂಧಿಸಿದಂತೆ ತಮ್ಮದೇ ಆದ ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್ ಹೊಂದಿವೆ. ಆ್ಯಪಲ್ ಬ್ರ್ಯಾಂಡಿನ ಐಫೋನ್‍ಗಳಲ್ಲಿ ಐಒಎಸ್ (Iphone ISO) ಎಂಬುದು ಆಪರೇಟಿಂಗ್ ಸಿಸ್ಟಮ್ ಆಗಿದ್ದರೆ ಇದನ್ನು ಹೊರತುಪಡಿಸಿ ಲಭ್ಯವಿರುವ ಇತರೆ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಸಂಸ್ಥೆಯ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ (Android Operating System) ಇರುತ್ತದೆ.

  ಈ ಎರಡೂ ಆಪರೇಟಿಂಗ್ ಸಿಸ್ಟಮ್‌ಗಳು ತಮ್ಮದೇ ಆದ ವೈಶಿಷ್ಟ್ಯ ಹೊಂದಿವೆ. ಒಮ್ಮೊಮ್ಮೆ ಐಒಎಸ್ ಬಳಸುವವರು ಆ್ಯಂಡ್ರಾಯ್ಡ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅದೆಷ್ಟೋ ಬಾರಿ ಮನದಲ್ಲೇ ಅಂದುಕೊಂಡಿರಬಹುದು. ಆದರೆ ತಮ್ಮ ಐಫೋನ್ ಬಳಸಿ ಅದರಲ್ಲಿ ಆ್ಯಂಡ್ರಾಯ್ಡ್ ಇರಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಈಗ ಈ ಸವಾಲು ಅತಿ ಶೀಘ್ರದಲ್ಲೇ ಕೊನೆಗೊಳ್ಳುವ ಸೂಚನೆ ಸಿಕ್ಕಿದೆ. ಶೀಘ್ರದಲ್ಲೇ ಗೂಗಲ್ 'ಸ್ವಿಚ್ ಟು ಆ್ಯಂಡ್ರಾಯ್ಡ್' ಅನ್ನು ಹೊರತರಲಿದೆ ಎಂದು ತಿಳಿದುಬಂದಿದೆ.

  ಒಂದೊಮ್ಮೆ ಈ ವೈಶಿಷ್ಟ್ಯ ವಾಸ್ತವದಲ್ಲಿ ಅನುಷ್ಠಾನಗೊಂಡರೆ ಐಫೋನ್ ಬಳಕೆದಾರರು ಯಾವುದೇ ಚಿಂತೆಯಿಲ್ಲದೆ ಸರಾಗವಾಗಿ ತಮ್ಮ ಫೋನುಗಳಲ್ಲಿ ಆ್ಯಂಡ್ರಾಯ್ಡ್ ಹೊಂದಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಅದಾಗಲೇ ಐಫೋನ್‌ನಲ್ಲಿ ಇರಬಹುದಾದ ಯಾವ ಡೇಟಾಗಳು ಮರೆಯಾಗದೆ ಸುರಕ್ಷಿತವಾಗಿ ಆ್ಯಂಡ್ರಾಯ್ಡ್ ಸಿಸ್ಟಮ್‍ಗೆ ವರ್ಗವಾಗಬಹುದೆನ್ನಲಾಗಿದೆ. ಬಳಕೆದಾರರು ತಮ್ಮ ಐಫೋನ್‌ನಿಂದ ಡೇಟಾವನ್ನು ಆ್ಯಂಡ್ರಾಯ್ಡ್ ಆವೃತ್ತಿಗೆ ಯಾವುದೇ ವೈರ್ ಜೋಡಣೆ ಇಲ್ಲದೆ ಆ್ಯಂಡ್ರಾಯ್ಡ್ ಫೋನ್ ಅನ್ನು ಹಾಟ್‌ಸ್ಪಾಟ್ ಆಗಿ ಇಟ್ಟುಕೊಂಡು ಸುಲಭವಾಗಿ ವರ್ಗಾಯಿಸಬಹುದೆನ್ನಲಾಗಿದೆ.

  ಸಂದೇಶಗಳನ್ನು ವರ್ಗಾಯಿಸುವಾಗ ಆ್ಯಪ್ ಐಮೆಸೇಜ್ ಅನ್ನು ಟರ್ನ್ ಆಫ್ ಆಗಿರುವ ಸ್ಥಿತಿಯಲ್ಲಿ ಇರಿಸುವಂತೆ ಹೇಳಿ ಮಿಕ್ಕ ಎಲ್ಲ ಚಿತ್ರಗಳು, ವಿಡಿಯೋ ಹಾಗೂ ಸಂದೇಶಗಳು ಆ್ಯಂಡ್ರಾಯ್ಡ್ ವರ್ಗವಾಗಲಿವೆ. ಅಲ್ಲದೆ, ಐಕ್ಲೌಡ್ ತನ್ನಲ್ಲಿರುವ ಎಲ್ಲ ಡೇಟಾವನ್ನು ನೇರವಾಗಿ ಗೂಗಲ್ ಡ್ರೈವ್‌ಗೆ ವರ್ಗಾಯಿಸಲಿದೆ.

  ಈ ಹೊಸ ಆ್ಯಪ್ ಅನ್ನು ಐಸ್ಟೋರ್‌ನಿಂದ ಡೌನ್ಲೋಡ್ ಮಾಡಬಹುದಾಗಿದೆ. ಅದಕ್ಕಾಗಿ ಬಳಕೆದಾರರು ಐಒಎಸ್ 12 ಅಥವಾ ಅದರ ನಂತರದ ಅಪ್ಡೇಟ್ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಚಲಾಯಿಸಿದಾಗ ಈ ಆ್ಯಪ್, ಐಒಎಸ್‌ನಿಂದ ಆ್ಯಂಡ್ರಾಯ್ಡ್‌ಗೆ ಫೋನ್ ಅನ್ನು ವರ್ಗಾಯಿಸಲು ಹಲವು ಅನುಮತಿಗಳ ಸರಣಿ ಪ್ರಶ್ನೆಗಳನ್ನೇ ಕೇಳುತ್ತದೆ ಹಾಗೂ ನೀವು ಆ ಬಗ್ಗೆ ಅದಕ್ಕೆ ಎಲ್ಲ ಅನುಮತಿ ನೀಡುತ್ತ ಸಾಗಬೇಕು. "ನಿಮಗೆ ಸಂಬಂಧಿತ ಡೇಟಾ" ಅಡಿಯಲ್ಲಿ ಆ್ಯಪ್ ನಿಮ್ಮೆಲ್ಲ ವೈಯಕ್ತಿಕ ವಿವರಗಳನ್ನು ತೋರಿಸುತ್ತದೆ.

  ಇದನ್ನೂ ಓದಿ: WhatsApp: ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿದೆ ‘ಲಾಸ್ಟ್ ಸೀನ್’ ಮರೆಮಾಚುವ ಹೊಸ ಫೀಚರ್!

  ಈ ಪ್ರಕ್ರಿಯೆಯನ್ನು ಮಾಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ

  ಮೊದಲ ಹಂತ : ನಿಮ್ಮ ಐಫೋನ್ ತೆರೆದು ಅದರಲ್ಲಿ ಐಸ್ಟೋರ್‌ನಲ್ಲಿ ಹೋಗಿ ಸ್ವಿಚ್ ಟು ಆ್ಯಂಡ್ರಾಯ್ಡ್ ಎಂದು ಹುಡುಕಿ
  ಎರಡನೇ ಹಂತ : ಆ್ಯಪ್ ಲಾಂಚ್ ಮಾಡಿ, ಸ್ಟಾರ್ಟ್ ಬಟನ್ ಒತ್ತಿ ಅಲ್ಲಿ ತೋರಿಸಲಾಗುವ ಕ್ಯೂಆರ್ ಕೋಡನ್ನು ನಿಮ್ಮ ಆ್ಯಂಡ್ರಾಯ್ಡ್ ಫೋನ್ ಮೂಲಕ ಸ್ಕ್ಯಾನ್ ಮಾಡಿ.
  ಮೂರನೇ ಹಂತ : ತದನಂತರ ನಿಮ್ಮ ಆ್ಯಂಡ್ರಾಯ್ಡ್ ಫೋನಿನ ಪಟ್ಟಿಯಲ್ಲಿ ನೀಡಲಾಗಿರುವ ಉಪಕರಣಗಳ ಪಟ್ಟಿಯಲ್ಲಿ ಐಫೋನ್ ಅನ್ನು ಆಯ್ಕೆ ಮಾಡಿ.
  ನಾಲ್ಕನೇ ಹಂತ : ಈಗ ಕ್ಯಾಲೆಂಡರ್, ಈವೆಂಟ್, ಸಂಪರ್ಕಗಳು, ಚಿತ್ರಗಳು ಮತ್ತು ವಿಡಿಯೋಗಳನ್ನು ಆಯ್ಕೆ ಮಾಡಿ ಮುಂದುವರೆಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಿ.

  ಇದನ್ನೂ ಓದಿ: Samsung Galaxy M53 5G: 108MP ಕ್ಯಾಮೆರಾದೊಂದಿಗೆ ಮೋಡಿ ಮಾಡಲು ಬರುತ್ತಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್​!

  ಐದನೇ ಹಂತ : ಎಲ್ಲವೂ ಮಾಹಿತಿ ವರ್ಗಾವಣೆಯಾದ ಮೇಲೆ ಸೆಟ್ಟಿಂಗ್‌ನಲ್ಲಿ ಹೋಗಿ ಐಮೆಸೇಜ್ ಅನ್ನು ನಿಷ್ಟ್ಕ್ರಿಯಗೊಳಿಸಿ.
  ಆರನೇ ಹಂತ : ಐಕ್ಲೌಡ್ ಡೇಟಾ ವರ್ಗಾವಣೆಯ ವಿನಂತಿಯನ್ನೂ ಸಹ ನಮೂದಿಸಿ ಸ್ಟಾರ್ಟ್ ಬಟನ್ ಅನ್ನು ಬಳಸಿ. ಪೂರ್ಣವಾದ ಬಳಿಕ ಆ್ಯಪ್ ಅನ್ನು ಕ್ಲೋಸ್ ಮಾಡಿ ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ.
  Published by:Harshith AS
  First published: