ಜನಪ್ರಿಯ ಗೂಗಲ್ ಭಾರತದಲ್ಲಿ ಟಾಸ್ಕ್ ಮೇಟ್ ಆ್ಯಪ್ ಟೆಸ್ಟಿಂಗ್ ನಡೆಸುತ್ತಿದೆ. ಈ ಆ್ಯಪ್ ಬಳಕೆದಾರರಿಗೆ ಸುಲಭವಾಗಿ ಹಣಗಳಿಸಲು ಅನುವು ಮಾಡಿಕೊಡುತ್ತದೆ.
ಟಾಸ್ಕ್ ಮೇಟ್ ಆ್ಯಪ್ನಲ್ಲಿ ಕೆಲವು ಟಾಸ್ಕ್ಗಳನ್ನು ನೀಡಲಾಗುತ್ತದೆ. ಆ ಟಾಸ್ಕ್ಗಳನ್ನು ಪೂರ್ತಿಗೊಳಿಸಿದ ಬಳಕೆದಾರರಿಗೆ ಹಣ ನೀಡಲಿದೆ. ಸದ್ಯ ಟೆಸ್ಟಿಂಗ್ ಹಂತದಲ್ಲಿರುವ ಟಾಸ್ಕ್ ಮೆಟ್ ಆ್ಯಪ್ ಸದ್ದಲ್ಲೇ ಎಲ್ಲಾ ಬಳಕೆದಾರರ ಬಳಕೆಗೆ ಸಿಗಲಿದೆ.
ಟಾಸ್ಕ್ ಮೆಟ್ ಆ್ಯಪ್ನಲ್ಲಿ ರೆಸ್ಟೋರೆಂಟ್ ಫೋಟೋ, ಇಂಗ್ಲೀಷ್ ಭಾಷೆಗೆ ಅನುವಾದ, ಸಮೀಕ್ಷೆ, ಪ್ರಶ್ನೆಗಳು ಇರುತ್ತದೆ. ಅದನ್ನು ಪೂರ್ಣಗೊಳಿಸಿದರೆ ಹಣ ಗಳಿಸುವ ಅವಕಾಶ ನೀಡುತ್ತದೆ. ಸದ್ಯ ಬೇಟಾದಲ್ಲಿ ಲಭ್ಯವಿದೆ. ರೆಫೆರಲ್ ಕೋಡ್ ಬಳಸಿಕೊಂಡು ಕೆಲವರು ಬಳಸುತ್ತಿದ್ದಾರೆ. ಗೂಗಲ್ ಟಾಸ್ಕ್ ಮೇಟ್ ಆ್ಯಪ್ ಪ್ಲೇ ಸ್ಟೋರ್ನಲ್ಲಿ ಸಿಗಲಿದೆ.
ಈ ಆ್ಯಪ್ನಲ್ಲಿ ‘ಹತ್ತಿರದಲ್ಲಿ ಟಾಸ್ಕ್’, ಗಳಿಕೆಯನ್ನು ಪ್ರಾರಂಭಿಸಲು ಕಾರ್ಯಪೂರ್ಣಗೊಳಿಸಿ‘ ಮತ್ತು ‘ನಿಮ್ಮ ಗಳಿಕೆ ನಗದು ಮಾಡಲು‘ ಎಂಬ ಆಯ್ಕೆಯನ್ನು ನೀಡಿದೆ. ಇ-ವ್ಯಾಲೆಟ್ ಖಾತೆಯನ್ನು ಬಳಸುವ ಮೂಲಕ ಹಣ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ