ಗ್ರಾಹಕರ ಮಾಹಿತಿ ಸೋರಿಕೆಯಾಗದಂತೆ ಸಂಪೂರ್ಣ ಹೊಣೆ ಹೊತ್ತ ಗೂಗಲ್​


Updated:June 15, 2018, 3:19 PM IST
ಗ್ರಾಹಕರ ಮಾಹಿತಿ ಸೋರಿಕೆಯಾಗದಂತೆ ಸಂಪೂರ್ಣ ಹೊಣೆ ಹೊತ್ತ ಗೂಗಲ್​

Updated: June 15, 2018, 3:19 PM IST
ನವದೆಹಲಿ: ಹ್ಯಾಕರ್ಸ್​ಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಗೂಗಲ್​ ತನ್ನ ಕ್ಲೌಡ್​ ಬಳಕೇದಾರರ ಮಾಹಿತಿ ಸೋರಿಕೆಯಾಗದಂತೆ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿದೆ.

ಗೂಗಲ್​ ಕ್ಲೌಡ್​ ಸಭೆಯಲ್ಲಿ ಮಾತನಾಡಿರುವ ಕ್ಲೌಡ್​ ನಿರ್ದೇಶಕ ಮೈಲಿಸ್​ ವಾರ್ಡ್​, ನಮ್ಮನ್ನು ನಂಭಿರುವ ಗ್ರಾಹಕರಿಗೆ ಸೂಕ್ತವಾದ ಭದ್ರತೆಯನ್ನು ಒದಗಿಸದೇ ಹೊದರೆ ನಮ್ಮ ವ್ಯವಹಾರವೇ ಅಂತ್ಯವಾಗಬಹುದು. ಹೀಗಾಗಿ ನಾವು ಗ್ರಾಹಕರ ಮಾಹಿತಿ ರಕ್ಷಣೆಯ ಸಂಪೂರ್ಣ ಹೊಣೆಯನ್ನು ಹೊತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷದಿಂದ ಗೂಗಲ್​ ಕ್ಲೌಡ್​ನ ಸೆಕ್ಯೂರಿಟಿಗಾಗಿಯೇ ಸುಮಾರು 12 ಬಿಲಿಯನ್​ ಡಾಲರ್​ ವ್ಯಿಸಲಾಗಿದ್ದು, ಇಲ್ಲಿ ಯಾವುದೇ ಸಂಸ್ಥೆಯ ಡಾಟಾಗಳ ಮಾಹಿತಿ ಎಲ್ಲಿಗೂ ರವಾನೆಯಾಗುವುದಿಲ್ಲ. ಇದರೊಂದಿಗೆ ಸಂಸ್ಥೆಗಳ ವ್ಯವಹಾರ, ಡಾಟಾ ಅನಾಲಿಟಿಕ್ಸ್​, ಸೇರಿದಂತೆ ಹಲವು ರೀತಿಯಲ್ಲಿ ಗೂಗಲ್ ಸಹಾಯ ಮಾಡುವುದಾಗಿ ಹೇಳಿದೆ.

ಇನ್ನು ಭಾರತದಲ್ಲೂ ಗೂಗಲ್​ ಕ್ಲೌಡ್​ ಹೆಚ್ಚು ಮನ್ನಣೆ ಪಡೆಯುತ್ತಿದ್ದು, ಏಷಿಯಾದ ಕಾರ್ಯನಿರ್ವಹಣಾ ನಿರ್ದೇಶಕ ರಿಕ್​ ಹರ್ಷ್​ಮ್ಯಾನ್​ ಪ್ರಕಾರ, ಕಳೆದ ಆರು ತಿಂಗಳಿನಿಂದ ಭಾರತದಲ್ಲಿ ನೀಡಲ್ಪಡುವ ಗೂಗಲ್​ ಕ್ಲೌಡ್ ತರಬೇತಿ ವಿಶ್ವದೆಲ್ಲೆಡೆ ನೀಡುವ ತರಬೇತಿ ಕೇಂದ್ರಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ.

ಎಂಟು ತಿಂಗಳ ಹಿಂದೆ ಗೂಗಲ್ ಕ್ಲೌಡ್​ ಇಂಡಿಯಾದ ಕಚೇರಿ ಮುಂಬೈನಲ್ಲಿ ಉದ್ಘಾಟನೆಯಾಗಿತ್ತು.
First published:June 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...