8 ವರ್ಷಗಳ ಬಳಿಕ ಮತ್ತೆ ಚೀನಾದತ್ತ ಮುಖಮಾಡಿದ ಗೂಗಲ್​


Updated:August 2, 2018, 3:12 PM IST
8 ವರ್ಷಗಳ ಬಳಿಕ ಮತ್ತೆ ಚೀನಾದತ್ತ ಮುಖಮಾಡಿದ ಗೂಗಲ್​

Updated: August 2, 2018, 3:12 PM IST
ಎಂಟು ವರ್ಷಗಳ ಹಿಂದೆ ಚೀನಾದಿಂದ ಹೊರ ಬಂದ ಚೀನಾ ಇದೀಗ ಮತ್ತೆ ಚೀನಾ ಪ್ರವೇಶಿಸಲು ಯತ್ನಿಸುತ್ತಿದ್ದು, ಇದರ ಹಂತವಾಗಿ ಚೀನಾ ನಿರ್ಭಂಧಿಸಿರುವ ತಾಣಗಳನ್ನು ಬ್ಲಾಕ್​ ಮಾಡಲು ಸರಕಾರದ ಸಹಾಯ ಕೇಳಿದೆ.

ಕ್ಯಾಲಿಫೋರ್ನಿಯಾ ಮೂಲದ ಗೂಗಲ್​ ಸಂಸ್ಥೆ ಎಂಟು ವರ್ಷಗಳ ಹಿಂದೆ ಸೆನ್ಸಾರ್ಶಿಪ್ ಮತ್ತು ಹ್ಯಾಕಿಂಗ್​ ವಿಚಾರವಾಗಿ ಚೀನಾದಿಂದ ಬ್ಯಾನ್​ ಆಗಿತ್ತು. ಆದರೆ ಇದೀಗ ಗೂಗಲ್​ ಎಂಜೀನಿಯರ್​ಗಳು ನೂತನ್​ ಸಾಫ್ಟ್​ವೇರ್​ ಅಭಿವೃದ್ಧಿ ಪಡಿಸಿದ್ದು, ಇದರ ಮೂಲಕ ಚೀನಾ ಸರಕಾರ ಬ್ಲಾಕ್​ ಮಾಡಿರುವ ವೆಬ್​ಸೈಟ್​ಗಳನ್ನು ತನ್ನ ಸೈಟ್​ನಲ್ಲಿ ಕಾಣಿಸದಂತೆ ತಡೆಗಟ್ಟಲಾಗುತ್ತದೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

ದಿ ಇಂಟರ್​ಸೆಪ್ಟ್​​ ವರದಿ ಪ್ರಕಾರ ಗೂಗಲ್​ ಬೆಂಬಲಿತ ಚೀನಾದ ಸರ್ಚ್​ ಆ್ಯಪ್​ವೊಂದು ಅಭಿವೃದ್ಧಿ ಪಡಿಸಲಾಗಿದೆ, ಅಲ್ಲದೇ ಚೀನಾದ ಅಧಿಕಾರಿಗಳಿಗೂ ಇದರ ಕುರಿತು ಪರೀಕ್ಷಿಸಲು ಆ್ಯಪ್​ ಕಾರ್ಯವೈಖರಿಯನ್ನು ತೋರಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ಕುರಿತು ಗೂಗಲ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗೂಗಲ್​ ಹೇಳಿಕೊಂಡಂತೆ 2010ರಲ್ಲಿ ನಡೆದಿದ್ದ ಸೈಬರ್​ ದಾಳಿಯಿಂದಾಗಿ ಇದರ ಸೋರ್ಸ್​ ಕೋಡ್​ ಹಾಗು ಅಲ್ಲಿನ ಮಾನವ ಹಕ್ಕುಗಳ ಆಯೋಗದವರ ಇ-ಮೇಲ್​ ಸಂದೇಶಗಳು ಸೋರಿಕೆಯಾಗಿತ್ತು. ಇದಾದ ಬಳಿಕ ಗೂಗಲ್​ನ ಗ್ರೇಟ್​ ಫೈರ್​ವಾಲ್​ ಹ್ಯಾಕರ್​ಗಳನ್ನು ಪತ್ತೆಹಚ್ಚಲು ವಿಫಲವಾಗಿತ್ತು. ಈ ಎಲ್ಲಾ ಕಾರಣದಿಂದ ಗೂಗಲ್​ನ್ನು ಚೀನಾದಲ್ಲಿ ನಿಷೇಧಿಸಲಾಗಿತ್ತು.

ಸದ್ಯ ಅಮೆರಿಕ ಮತ್ತು ಚೀನಾದ ನಡುವೆ ವ್ಯಾವಹಾರಿಕ ಕಲಹಗಳು ನಡೆಯುತ್ತಲೇ ಇರುತ್ತವೆ, ಹೀಗಾಗಿ ಗೂಗಲ್​ ಚೀನಾದ ಕನಸು ನನಸಾಗುತ್ತಾ ಅನ್ನುವುದು ಕಾದು ನೋಡಬೇಕಷ್ಟೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...