• Home
 • »
 • News
 • »
 • tech
 • »
 • Google Application: ಗೂಗಲ್‌ನ ಮತ್ತೊಂದು ಸೇವೆ ಬಂದ್; ಸಾಲು ಸಾಲು ಸೇವೆಗಳು ಸ್ಥಗಿತಗೊಳ್ಳಲು ಕಾರಣವೇನು?

Google Application: ಗೂಗಲ್‌ನ ಮತ್ತೊಂದು ಸೇವೆ ಬಂದ್; ಸಾಲು ಸಾಲು ಸೇವೆಗಳು ಸ್ಥಗಿತಗೊಳ್ಳಲು ಕಾರಣವೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗೂಗಲ್​ ತನ್ನ ಅಪ್ಲಿಕೇಶನ್​ಗಳಲ್ಲಿ ಬಿಡುಗಡೆಯಾದ ಹಲವಾರು ಅಪ್ಲಿಕೇಶನ್ ಅನ್ನು ಈ ಹಿಂದೆ ಅದರ ಬಳಕೆಯನ್ನು ನೋಡಿ ಸ್ಥಗಿತಗೊಳಿಸಿತ್ತು. ಇದೀಗ ಗೂಗಲ್​ ಮತ್ತೊಂದು ತನ್ನ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದೆ. ಇದಕ್ಕೆ ಕಾರಣಗಳೇನು ಎಂಬುದಕ್ಕೆ ಉತ್ತರ ಇಲ್ಲಿದೆ.

 • Share this:

  ಟೆಕ್ನಾಲಜಿ (Technology) ಯುಗದಲ್ಲಿ ಬಹಳಷ್ಟು ಜನಪ್ರಿಯತೆಯಲ್ಲಿರುವ ಅಪ್ಲಿಕೇಶನ್ (Application) ಎಂದರೆ ಅದು ಗೂಗಲ್ (Google). ಇದು​ ಒಂದು ದೊಡ್ಡ ಸರ್ಚ್​ ಇಂಜಿನ್​ ಅಪ್ಲಿಕೇಶನ್​ ಆಗಿದ್ದು ಕ್ಷಣಮಾತ್ರದಲ್ಲಿ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ಇದು ನೀಡುತ್ತದೆ. ಗೂಗಲ್ ತನ್ನಅಪ್ಲಿಕೇಶನ್ ಮೂಲಕ ಬಳಕೆದಾರರಿಗೆ ಬೇಕಾದ ಫೀಚರ್ಸ್​ ಅನ್ನು ನೀಡುತ್ತಲೇ ಇದೆ. ಇತ್ತೀಚೆಗೆ ಗೂಗಲ್‌ ತನ್ನ ಕೆಲವು ಸೇವೆಗಳನ್ನು ಸ್ಥಗಿತಗೊಳಿಸುತ್ತಲೇ ಇರುತ್ತದೆ. ಗೂಗಲ್‌ ಪ್ಲಸ್‌, ಗೇಮರ್‌ಗಳಿಗಾಗಿ ಪರಿಚಯಿಸಿದ್ದ ಸ್ಟೇಡಿಯಾ ಗೇಮಿಂಗ್‌ ಸೇವೆ, ಗೂಗಲ್‌ ಟಾಕ್ ಹೀಗೆ ಕೆಲವು ಅಪ್ಲಿಕೇಶನ್‌ಗಳ ನಂತರ ಗೂಗಲ್‌ನ ಸ್ಥಗಿತ ಪಟ್ಟಿಗೆ ಮತ್ತೊಂದು ವೈಶಿಷ್ಟ್ಯ ಸೇರ್ಪಡೆಯಾಗಿದೆ.


  ಗೂಗಲ್​ ತನ್ನ ಅಪ್ಲಿಕೇಶನ್​ಗಳಲ್ಲಿ ಬಿಡುಗಡೆಯಾದ ಹಲವಾರು ಅಪ್ಲಿಕೇಶನ್ ಅನ್ನು ಈ ಹಿಂದೆ ಅದರ ಬಳಕೆಯನ್ನು ನೋಡಿ ಸ್ಥಗಿತಗೊಳಿಸಿತ್ತು. ಇದೀಗ ಗೂಗಲ್​ ಮತ್ತೊಂದು ತನ್ನ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದೆ. ಇದಕ್ಕೆ ಕಾರಣಗಳೇನು ಎಂಬುದಕ್ಕೆ ಉತ್ತರ ಇಲ್ಲಿದೆ.


  "ಗೂಗಲ್‌ ಡ್ಯುಪ್ಲೆಕ್ಸ್‌ ಆನ್‌ ದಿ ವೆಬ್‌" ಸೇವೆ ಬಂದ್


  ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌, ವಿವಿಧ ವೆಬ್‌ಸೈಟ್‌ಗಳೊಂದಿಗೆ ಬಳಸಲು ಅನುಮತಿಸುವ ಸೇವೆಯಾದ 'Google Duplex on the Web', ಅನ್ನು ಡಿಸೆಂಬರ್ 1, 2022ರಿಂದ ಬಂದ್‌ ಮಾಡಿದೆ. 'Google Duplex'—Pixel-exclusive call automating technology—Duplex ವೆಬ್‌ನಾದ್ಯಂತ ಒದಗಿಸಲಾದ ಸೇವೆಗಳೊಂದಿಗೆ ನೇರವಾಗಿ ಸಂವಹನ ನಡೆಸಲು ವೆಬ್ ಬಳಕೆದಾರರನ್ನು ಅನುಮತಿಸುತ್ತಿತ್ತು.


  ಇದನ್ನೂ ಓದಿ: ಬೆಡ್‌ ರೂಂನಲ್ಲೇ ಇರುತ್ತಾ ಸ್ಮಾರ್ಟ್‌ ಫೋನ್? ಹಾಗಿದ್ರೆ, ವಿವಾಹಿತರೇ ಹುಷಾರ್ ಹುಷಾರ್!


  ವೆಬ್‌ನಲ್ಲಿನ ಡ್ಯುಪ್ಲೆಕ್ಸ್ ಗೂಗಲ್ ಅಸಿಸ್ಟೆಂಟ್‌ಗೆ ನೀಡಿದ ಆದೇಶಗಳನ್ನು ತೆಗೆದುಕೊಳ್ಳುತ್ತಿತ್ತು ಮತ್ತು ಸೇವೆಗಾಗಿ ಸಂಬಂಧಿತ ವೆಬ್‌ಸೈಟ್ ಅನ್ನು ಹುಡುಕುವ ಕೆಲಸ ಮಾಡುತ್ತಿತ್ತು. ನಂತರ, ಇದು ಗೂಗಲ್ ಆಟೋಫಿಲ್ ಅನ್ನು ಬಳಸಿಕೊಂಡು ಬಳಕೆದಾರರ ವಿವರಗಳನ್ನು ಭರ್ತಿ ಮಾಡಿ ಬಳಕೆದಾರರಿಗೆ ದಿನನಿತ್ಯದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಕೆಲಸ ನಿರ್ವಹಿಸುತ್ತಿತ್ತು.


  Luck changed Google competition A student who won 7 lakhs
  ಸಾಂಕೇತಿಕ ಚಿತ್ರ


  ಆದರೆ ಗೂಗಲ್‌ನ ಈ ಸೇವೆ ಬಂದ್‌ ಆಗಿದ್ದು, ಬಳಕೆದಾರರು ಇದಕ್ಕೆ ಪ್ರವೇಶ ಪಡೆಯಲು ಇನ್ನುಮುಂದೆ ಸಾಧ್ಯವಿಲ್ಲ. ಹೆಚ್ಚು ಬಳಕೆಯಲ್ಲಿದ್ದ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆ ಎನಿಸಿಕೊಂಡಿದ್ದ ಗೂಗಲ್ ಟಾಕ್ ಸೇವೆಯನ್ನು ಸಹ ಗೂಗಲ್‌ ಸ್ಥಗಿತಗೊಳಿಸಿದೆ.


  ಗೂಗಲ್‌ ಹೀಗೆ ತನ್ನ ವೈಶಿಷ್ಟ್ಯತೆಗಳನ್ನು ಆರಂಭಿಸಿ ಮತ್ತೆ ಅದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಗೆ ಹೆಸರುವಾಸಿಯಾಗಿದೆ. ಆದರೆ ಏಕೆ ಈ ಕ್ರಮ ? ಮೈಕ್ರೋಸಾಫ್ಟ್‌ನಂತಹ ಇತರ ಕಂಪನಿಗಳು ಎದುರಿಸದ ಸಮಸ್ಯೆಯನ್ನು ಗೂಗಲ್‌ ಏಕೆ ಎದುರಿಸುತ್ತಿದೆ? ಎಂಬುವುದೇ ಸದ್ಯದ ಪ್ರಶ್ನೆ.


  ಗೂಗಲ್‌ ತನ್ನ ಸೇವೆಗಳನ್ನು ಬಂದ್‌ ಮಾಡೋದ್ಯಾಕೆ?


  ಗೂಗಲ್‌ ಹೆಚ್ಚಿನ ಪೂರ್ವಸಿದ್ಧ ಸೇವೆಗಳನ್ನು ಅಸ್ತಿತ್ವದಲ್ಲಿರುವ ಸೇವೆಗಳ ಜೊತೆ ಸಂಯೋಜಿಸುತ್ತದೆ. ಈ ಹಿಂದೆ ಸ್ಥಗಿತ ಮಾಡಿದ ಗೂಗಲ್ ಟಾಕ್ ಅನ್ನು ಸಹ ಅಗತ್ಯಕ್ಕೆ ತಕ್ಕಂತೆ ನಂತರದ ವರ್ಷಗಳಲ್ಲಿ ಅದನ್ನು Hangouts ಮತ್ತು Google Chat ನಂತಹ ಹೊಸ ಗೂಗಲ್ ಸೇವೆಗಳಿಂದ ಬದಲಾಯಿಸಲಾಯಿತು.


  After 10 years of trying, a Bangalore techie finally got a job at Google
  ಸಾಂಕೇತಿಕ ಚಿತ್ರ


  ಹೀಗೆ ಕೆಲವು ಸೇವೆಗಳು ಬಳಕೆದಾರರು ಬಳಸಲು ಸಿದ್ಧವಾಗಿಲ್ಲದ ಸಮಯದಲ್ಲಿ ಬಂದಿದ್ದ ಕಾರಣದಿಂದಲೂ ಆ ವೈಶಿಷ್ಟ್ಯತೆಗಳು ಜನಪ್ರಿಯವಾಗದೇ ಮೂಲೆ ಗುಂಪಾಗಬಹುದು. ಮತ್ತು ಗೂಗಲ್‌ ಪರಿಚಯಿಸಿದ ವೈಶಿಷ್ಟ್ಯತೆ ಬೇರೆ ಕಡೆ ಉತ್ತಮವಾಗಿರಬಹುದು. ಹೀಗೆ ಮಾರುಕಟ್ಟೆಯಲ್ಲಿ ಗೂಗಲ್‌ ಪರಿಚಯಿಸಿದ ಉತ್ಪನ್ನ ಪರಿಗಣನೆಯಾಗದೇ ಇದ್ದಾಗ ಇವನ್ನು ಕಾಲಕ್ರಮೇಣ ಬಂದ್‌ ಮಾಡುವ ಹಂತಕ್ಕೆ ಹೋಗಬೇಕಾಗುತ್ತದೆ.


  ಗೂಗಲ್‌ನ ಈ ಅವನತಿಗೆ ಅನೇಕ ಗೂಗ್ಲರ್‌ಗಳು ಕಂಪನಿಯ ಈ ರೀತಿಯ ನಡೆಯನ್ನು LPA ಚಕ್ರ ಎಂದು ಕರೆಯಲ್ಪಡುವ ಬಗ್ಗೆ ಚರ್ಚಿಸುತ್ತಿದ್ದಾರೆ. ಅಂದ್ರೆ ಲಾಂಚ್, ಪ್ರೊಮೊ ಮತ್ತು ಅಬಾಂಡನ್.


  ಈ ಪ್ರಕ್ರಿಯೆಯು ಕಂಪನಿಯೊಳಗೆ ಪ್ರಚಾರದ ಅಗತ್ಯದಿಂದ ಪ್ರೇರೇಪಿಸಲ್ಪಟ್ಟಿದೆ, ಇದು ವೃತ್ತಿಪರರಿಗೆ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಖಚಿತವಾದ ಮಾರ್ಗವಾಗಿದೆ. ಸಂಸ್ಥೆಯಲ್ಲಿ ಪ್ರಚಾರದ ಮಾನದಂಡವು ಕಂಪನಿ ಮತ್ತು ಅದರ ವ್ಯವಹಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ವಿವಿಧ ಗೂಗಲ್‌ ಉದ್ಯೋಗಿಗಳು ಹೇಳಿದ್ದಾರೆ.


  ಪರಿಚಯಿಸಿದ ಸೇವೆಗಳ ನಿರ್ಲಕ್ಷ್ಯವೇ ಮೂಲಭೂತ ಸಮಸ್ಯೆ


  ಒಂದು ವೈಶಿಷ್ಟ್ಯತೆಯನ್ನು ಹೊರತರುವ ಮುನ್ನ ಕಂಪನಿ ಮಾರುಕಟ್ಟೆಯನ್ನು ನಿರ್ಧರಿಸುವುದು ಮತ್ತು ಅವುಗಳನ್ನು ಹೇಗೆ ಸೆರೆಹಿಡಿಯುವುದು ಎಂಬುದರ ಬಗ್ಗೆ ಕಾಳಜಿ ವಹಿಸಬೇಕು. ಹೊಸ ಹೊಸ ಅಪ್ಡೇಟ್ಸ್​ ಪರಿಚಯಿಸುವ ಭರದಲ್ಲಿ ಹಳೇ ಕೆಲವು ವೈಶಿಷ್ಟ್ಯತೆಗಳನ್ನು ಗೂಗಲ್‌ ನಿರ್ಲಕ್ಷ್ಯಿಸುತ್ತದೆ ಎಂಬುವುದು ಕೆಲವರ ಅಭಿಪ್ರಾಯ.


  'ಪ್ರೋಮೋ ಫುಡ್' ಎಂದು ಕರೆಯಲ್ಪಡುವ ಕೊರತೆಯಿಂದಾಗಿ, ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವವರು ಮತ್ತೊಂದು ಯೋಜನೆಗೆ ಬದಲಾಗುತ್ತಾರೆ, ಅಲ್ಲಿ ಅವರು ಈ ಮೊದಲು ರಚಿಸಿದ ಉತ್ಪನ್ನವನ್ನು ನಿರ್ವಹಿಸುವ ಮತ್ತು ನವೀಕರಿಸುವುದರ ಮೇಲೆ ಕೇಂದ್ರೀಕರಿಸುವ ಬದಲು ಹೊಸ ಉತ್ಪನ್ನದ ಕಡೆ ಸಂಪೂರ್ಣ ಗಮನಹರಿಸುತ್ತಾರೆ. ಉತ್ಪನ್ನವನ್ನು ನಿರ್ವಹಿಸುವುದನ್ನು ನಿಲ್ಲಿಸಿದ ನಂತರ ಸಹಜವಾಗಿಯೇ ಬಳಕೆದಾರರು ನಿಧಾನವಾಗಿ ಬೇರೆ ಅಪ್ಲಿಕೇಶನ್​ಗಳನ್ನು ಹುಡುಕುತ್ತಾರೆ ಅಥವಾ ಅದನ್ನು ಬಳಸುವುದನ್ನು ನಿಲ್ಲಿಸುತ್ತಾರೆ.


  ಕೆಲವೊಮ್ಮೆ ಸಣ್ಣ ಬಳಕೆದಾರ ಬೇಸ್ ಬಗ್ಗೆ ಗೂಗಲ್ ಕಾಳಜಿ ವಹಿಸುವುದಿಲ್ಲ ಮತ್ತು ಬಳಕೆದಾರರ ಕೊರತೆಯ ಕಾರಣವನ್ನು ನಿಖರವಾಗಿ ಉಲ್ಲೇಖಿಸಿ ಯೋಜನೆಯನ್ನು ಮುಚ್ಚುತ್ತದೆ. ಈ ಕ್ರಮದ ಬದಲು ಗೂಗಲ್‌ ತಾನು ಪರಿಚಯಿಸಿದ ಉತ್ಪನ್ನಗಳಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿದ್ದರೆ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದರೆ, ಗ್ರಾಹಕರು ಬಹುಶಃ ಆ ಯೋಜನೆಯನ್ನು ಬಳಸುತ್ತಾರೆ.

  First published: