Google Search down: ಗೂಗಲ್ ಸರ್ಚ್​ನಲ್ಲಿ ಸಮಸ್ಯೆ; ಕೆಲ ಹೊತ್ತು ಪರದಾಡಿದ ಬಳಕೆದಾರರು

ಅನೇಕರು ಬೆಳಗ್ಗಿನ ಜಾವ ಗೂಗಲ್​ನಲ್ಲಿ ಕಂಡು ಬಂದ ಸಮಸ್ಯೆಯಿಂದ ತಬ್ಬಿಬ್ಬಾಗಿದ್ದಾರೆ. ಹುಡುಕಾಟ ನಡೆಸುತ್ತಿರುವ ಸಮಯದಲ್ಲಿ, ಗೂಗಲ್​ ಸರ್ವರ್‌ಗಳು 502 ದೋಷವನ್ನು ತೋರಿಸಿವೆ.

Google Chrome / ಗೂಗಲ್​ ಕ್ರೋಮ್

Google Chrome / ಗೂಗಲ್​ ಕ್ರೋಮ್

  • Share this:
    ಗೂಗಲ್​ ಒಂದು ಸೆಕೆಂಡ್​ ಕೆಲಸ ನಿಲ್ಲಿಸಿದರೆ ವಿಶ್ವದಾದ್ಯಂತ ಅನೇಕರ ಕೆಲಸ ನಿಲ್ಲುತ್ತದೆ. ಇದರಿಂದ ಅನೇಕ ತೊಂದರೆಯು ಎದುರಾಗುತ್ತದೆ. ಅದರಂತೆಯೇ ಮಂಗಳವಾರ ಬೆಳಗ್ಗೆ (Morning) ಜಾವ ಸ್ವಲ್ಪ ಸಮಯ ಗೂಗಲ್ ಸರ್ಚ್ (Google Search) ಕೆಲಸದಲ್ಲಿ ವ್ಯತ್ಯಯ ಕಾಣಿಸಿದೆ. ಲಕ್ಷಾಂತರ ಜನರು ಈ ಸಮಸ್ಯೆಯಿಂದ ಪರದಾಡಿದ್ದಾರೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಗೂಗಲ್​ ಕೊಂಚ ಕಾಲ ಕೆಲಸವನ್ನು (work) ಸ್ಥಗಿತಗೊಳಿಸಿತ್ತು ಎಂದು ದೃಢಪಡಿಸಿದೆ. ಗೂಗಲ್​ ಹುಡುಕಾಟದಲ್ಲಿ 40,000 ಕ್ಕೂ ಹೆಚ್ಚು ಸಮಸ್ಯೆಗಳ ವರದಿಯಾಗಿವೆ ಎಂದು ಅದು ಹೇಳಿದೆ.

    ಅನೇಕರು ಬೆಳಗ್ಗಿನ ಜಾವ ಗೂಗಲ್​ನಲ್ಲಿ ಕಂಡು ಬಂದ ಸಮಸ್ಯೆಯಿಂದ ತಬ್ಬಿಬ್ಬಾಗಿದ್ದಾರೆ. ಹುಡುಕಾಟ ನಡೆಸುತ್ತಿರುವ ಸಮಯದಲ್ಲಿ, ಗೂಗಲ್​ ಸರ್ವರ್‌ಗಳು 502 ದೋಷವನ್ನು ತೋರಿಸಿವೆ. " ಇದು 502. ಅದು ದೋಷವಾಗಿದೆ. ಸರ್ವರ್ ತಾತ್ಕಾಲಿಕ ದೋಷವನ್ನು ಎದುರಿಸಿದೆ ಮತ್ತು ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು 30 ಸೆಕೆಂಡುಗಳಲ್ಲಿ ಮತ್ತೆ ಪ್ರಯತ್ನಿಸಿ. ನಮಗೆ ತಿಳಿದಿರುವುದು ಅಷ್ಟೆ" ಎಂದು ಸಂದೇಶ ಪ್ರಾಂಪ್ಟ್ ಹೇಳಿದೆ.

    ಇನ್ನು ಕೆಲವರಿಗೆ ಗೂಗಲ್​ ಸರ್ಚ್​ ಮಾಡುವಾಗ ಪರದೆಯ ಮೇಲೆ ಸಂದೇಶ ಕಾಣಿಸಿದೆ. ಅದರಲ್ಲಿ, "ನಮ್ಮನ್ನು ಕ್ಷಮಿಸಿ ಆದರೆ ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುವಾಗ ಆಂತರಿಕ ಸರ್ವರ್ ದೋಷ ಕಂಡುಬಂದಿದೆ ಎಂದು ತೋರುತ್ತಿದೆ. ನಮ್ಮ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ‘‘ ಎಂದು ಬರೆಯಲಾಗಿತ್ತು.

    ಇದನ್ನೂ ಓದಿ: Search History: ಸರ್ಚ್​ ಹಿಸ್ಟರಿ ಅಳಿಸಲು ಪರದಾಡಬೇಡಿ, ಈ ವಿಧಾನವನ್ನು ಅನುಸರಿಸಿ

    ಗೂಗಲ್​ ಸರ್ಚ್​ನಲ್ಲಿ ಕಾಣಿಸಿಕೊಂಡ ಸಮಸ್ಯೆ ಬೆಳಗಿನ ಜಾವ ಕಾಣಿಸಿಕೊಂಡಿದ್ದರಿಂದ ಈ ಸಮಯದಲ್ಲಿ ಕೆಲಸ ಪ್ರಾರಂಭಿಸಿದವರಿಗೆ ಗೂಗಲ್​ ಸರ್ಚ್​ನಲ್ಲಿ ಕಾಣಿಸಿಕೊಂಡ ಸಮಸ್ಯೆ ಗೊತ್ತಾಗಿದೆ. ಇನ್ನು ಗೂಗಲ್​ ಸರ್ಚ್​ ಮಾತ್ರವಲ್ಲದೆ, ಗೂಗಲ್​ ಟ್ರೆಂಡ್​​ನಲ್ಲಿ ಸಮಸ್ಯೆ ಎದುರಾಗಿದೆ. ಲಿಂಕ್ ತೆರೆಯುತ್ತಿದ್ದರೂ, ಟ್ರೆಂಡ್‌ಗಳನ್ನು ತೋರಿಸುವ ವಿಂಡೋ ಖಾಲಿಯಾಗಿತ್ತು. ಆದಾಗ್ಯೂ, ನೈಜ-ಸಮಯದ ಪ್ರವೃತ್ತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ನಿಮಿಷಗಳ ನಂತರ ಸೇವೆಯನ್ನು ಮರುಸ್ಥಾಪಿಸಲಾಗಿದೆ.

    ಇದನ್ನೂ ಓದಿ: Jio: 700 MHz ಬ್ಯಾಂಡ್ ಏಕೆ ಮುಖ್ಯ? 5G ಸೇವೆಗಾಗಿ ಜಿಯೋ ಏನು ಮಾಡಿದೆ ನೋಡಿ









    ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಬಳಕೆದಾರರು!

    ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನೇಕರು ಬರೆದು ಹಾಕಿದ್ದಾರೆ. ಭಾರತ ಮತ್ತು ವಿದೇಶದಲ್ಲಿರುವ ಹಲವಾರು ಬಳಕೆದಾರರು Twitter ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಆದರೀಗ ಗೂಗಲ್​ ಎಲ್ಲಾ ಸಮಸ್ಯೆಯನ್ನು ಪರಿಶೀಲಿಸಿ ಸರಿ ಪಡಿಸಿದೆ. ಗೂಗಲ್​ ಸರ್ಚ್​ ಬಳಕೆದಾರರು ಎಂದಿನಂತೆಯೇ ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ.

    ವಿಶ್ವದಾದ್ಯಂತ ಬಹುಪಾಲುಜನರು ಗೂಗಲ್​ ಅನ್ನು ನಂಬಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆಯೇ ಈ ಸರ್ವರ್ ಕೆಲಸ ನಿಲ್ಲಿಸಿದರೆ ಅನೇಕ ಸಮಸ್ಯೆ ಎದುರಾಗುತ್ತದೆ. ಒಂದು ವೇಳೆ 10 ನಿಮಿಷಗಳ ಕಾಲ ಈ ಸಮಸ್ಯೆ ಕಂಡುಬಂದರೆ ಸಾಕಷ್ಟು ನಷ್ಟ ಅನುಭವಿಸುವ ಸಂಗತಿಯೂ ಇದೆ.
    Published by:Harshith AS
    First published: