• Home
  • »
  • News
  • »
  • tech
  • »
  • Google Family Link: ಹೊಸ ವೈಶಿಷ್ಠ್ಯಗಳೊಂದಿಗೆ ಮರುವಿನ್ಯಾಸಗೊಳ್ಳುತ್ತಿರುವ ಗೂಗಲ್‌ನ ಫ್ಯಾಮಿಲಿ ಅಪ್ಲಿಕೇಶನ್‌

Google Family Link: ಹೊಸ ವೈಶಿಷ್ಠ್ಯಗಳೊಂದಿಗೆ ಮರುವಿನ್ಯಾಸಗೊಳ್ಳುತ್ತಿರುವ ಗೂಗಲ್‌ನ ಫ್ಯಾಮಿಲಿ ಅಪ್ಲಿಕೇಶನ್‌

ಗೂಗಲ್‌ ಕುಟುಂಬ ಅಪ್ಲಿಕೇಶನ್‌

ಗೂಗಲ್‌ ಕುಟುಂಬ ಅಪ್ಲಿಕೇಶನ್‌

ಇತ್ತೀಚೆಗೆ ಗೂಗಲ್‌, ಕುಟುಂಬ ಲಿಂಕ್‌ ಅಪ್ಲಿಕೇಶನ್‌ ಅನ್ನು ಸುಲಭವಾಗಿ ಆಪರೇಟ್‌ ಮಾಡಲು ಅನುವಾಗುವಂತೆ ಮತ್ತು ಹೊಸ ವೈಶಿಷ್ಠ್ಯಗಳೊಂದಿಗೆ ಮರುವಿನ್ಯಾಸಗೊಳಿಸುತ್ತಿದೆ. ಈ ವೈಶಿಷ್ಟ್ಯಗಳಲ್ಲಿ ಪ್ರಮುಖವಾದುದು ಎಂದ್ರೆ ಮಕ್ಕಳು ತಾವು ಇರುವ ಜಾಗದಿಂದ ಕಳೆದು ಹೋದಾಗ, ಅವರು ಮತ್ತೆ ಮನೆಗೆ ವಾಪಸ್‌ ಆದಾಗ ಅದರ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಮುಂದೆ ಓದಿ ...
  • Share this:

ಗೂಗಲ್‌ (Google) 2017 ರಲ್ಲಿ, ಕುಟುಂಬಕ್ಕೆ ಅನುಕೂಲವಾಗಲೆಂದು ಲಿಂಕ್ ಅಪ್ಲಿಕೇಶನ್‌ ಅನ್ನು ಅನಾವರಣಗೊಳಿಸಿತು. ಇದು ಮುಖ್ಯವಾಗಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ (Children) ತಮ್ಮದೇ ಆದ Google ಖಾತೆಗಳು ಮತ್ತು Android ಸಾಧನಗಳನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ಹಾಗೆಯೇ ಪೋಷಕರು ತಮ್ಮ ಮಕ್ಕಳು ಈ ಸಾಧನಗಳನ್ನು ಹೇಗೆ ಮತ್ತು ಎಷ್ಟು ಸಮಯದವರೆಗೆ ಬಳಸುತ್ತಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಸಹ ಈ ಅಪ್ಲಿಕೇಶನ್ (Application) ಅನುವು ಮಾಡಿಕೊಡುವ ವಿಶಿಷ್ಟತೆಯನ್ನು ಹೊಂದಿದೆ. ಇತ್ತೀಚೆಗೆ ಗೂಗಲ್‌, ಕುಟುಂಬ ಲಿಂಕ್‌ ಅಪ್ಲಿಕೇಶನ್‌ ಅನ್ನು ಸುಲಭವಾಗಿ ಆಪರೇಟ್‌ (Operate) ಮಾಡಲು ಅನುವಾಗುವಂತೆ ಮತ್ತು ಹೊಸ ವೈಶಿಷ್ಠ್ಯಗಳೊಂದಿಗೆ ಮರುವಿನ್ಯಾಸಗೊಳಿಸುತ್ತಿದೆ.


ಹೊಸ ವೈಶಿಷ್ಠ್ಯಗಳ ಜೊತೆ ಬರುತ್ತಿರುವ ಗೂಗಲ್‌ ಕುಟುಂಬ ಅಪ್ಲಿಕೇಶನ್‌
ಈ ವೈಶಿಷ್ಟ್ಯಗಳಲ್ಲಿ ಪ್ರಮುಖವಾದುದು ಎಂದ್ರೆ ಮಕ್ಕಳು ತಾವು ಇರುವ ಜಾಗದಿಂದ ಕಳೆದು ಹೋದಾಗ, ಅವರು ಮತ್ತೆ ಮನೆಗೆ ವಾಪಸ್‌ ಆದಾಗ ಅದರ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.


ಈ ಗೂಗಲ್‌ ಕುಟುಂಬ ಲಿಂಕ್‌ ಎಂಬುದು ಪೋಷಕರ ಫೋನ್‌ನಲ್ಲಿರುವ ನಿಯಂತ್ರಣ ಅಪ್ಲಿಕೇಶನ್‌ ಆಗಿದೆ. ಇದು ಮಕ್ಕಳು ಪೋನ್‌ ಅನ್ನು ಎಷ್ಟು ಸಮಯ ನೋಡಬೇಕು ಎಂಬುದಕ್ಕೆ ಮಿತಿಯನ್ನು ಹಾಕುವ ಮತ್ತು ಅದಕ್ಕೆ ತಕ್ಕದಾಗಿ ಸೆಟ್ಟಿಂಗ್‌ ಮಾಡುವ, ತಮ್ಮ ಮಕ್ಕಳ Android ಸಾಧನಗಳನ್ನು ಈ ರೀತಿಯಾಗಿ ನಿರ್ವಹಿಸಲು ಈ ಅಪ್ಲಿಕೇಶನ್‌ ಪೋಷಕರಿಗೆ ಅನುಮತಿಸುತ್ತದೆ.


ಮೂರು ಮುಖ್ಯ ಟ್ಯಾಬ್‌ಗಳಿವು:
2017 ರಲ್ಲಿ ಬಿಡುಗಡೆಯಾದ ಆವೃತ್ತಿಯಿಂದ ಅಪ್ಲಿಕೇಶನ್ ಗಮನಾರ್ಹವಾದ ಫೇಸ್‌ಲಿಫ್ಟ್ ಅನ್ನು ಪಡೆಯುತ್ತಿದೆ. ಇದು ಈಗ ಪೋಷಕರಿಗೆ ಮೂರು ಟ್ಯಾಬ್‌ಗಳೊಂದಿಗೆ ಸರಳವಾಗಿ ಆಪರೇಟ್‌ ಮಾಡಲು ಅವಕಾಶ ನೀಡುತ್ತದೆ. ಅದರಲ್ಲಿ ಹೈಲೈಟ್‌ ಟ್ಯಾಬ್‌, ಕಂಟ್ರೋಲ್‌ ಟ್ಯಾಬ್‌ ಮತ್ತು ಲೋಕೆಷನ್‌ ಟ್ಯಾಬ್‌ ಎಂದು ಈ ರೀತಿಯಾಗಿ ಸೆಟ್ಟಿಂಗ್‌ ಮಾಡಲಾಗಿದೆ. ಈ ಅಪ್ಲಿಕೇಶನ್ ಅನ್ನು Android ಮತ್ತು iOS ನಲ್ಲಿ ನವೀಕರಿಸಲಾಗಿದೆ.


ಗೂಗಲ್‌ ಸಂಸ್ಥೆಯು ತನ್ನ ಗೂಗಲ್‌ ಕುಟುಂಬ ಲಿಂಕ್‌ನ ಹೊಸ ವೆಬ್-ಆಧಾರಿತ ಆವೃತ್ತಿಯನ್ನು ಸಹ ಬಿಡುಗಡೆ ಮಾಡುತ್ತಿದೆ. ಅದು ಪೋಷಕರು ತಮ್ಮ ಕಂಪ್ಯೂಟರ್‌ನಲ್ಲಿ ನೂತನ ಟ್ಯಾಬ್‌ಗಳನ್ನು ಇರಿಸಿಕೊಳ್ಳಲು ಅನುಮತಿಸುತ್ತದೆ ಮತ್ತು ಮಕ್ಕಳು ತಮ್ಮ ಸೆಟ್ಟಿಂಗ್‌ಗಳನ್ನು ವೆಬ್‌ನಲ್ಲಿಯೂ ಪರಿಶೀಲಿಸಬಹುದು.


ಹೈಲೈಟ್‌ ಟ್ಯಾಬ್‌
ನೂತನ ವೈಶಿಷ್ಟ್ಯಗಳ ಟ್ಯಾಬ್‌ಗಳಲ್ಲಿ ಪ್ರಮುಖವಾದುದು ಈ ಹೈಲೈಟ್‌ ಟ್ಯಾಬ್‌ ಆಗಿದೆ. ಇದರ ಮೂಲಕ ಪೋನ್‌ನಲ್ಲಿ ಮಕ್ಕಳು ಬಳಸುತ್ತಿರುವ ಮತ್ತು ಇನ್‌ಸ್ಟಾಲ್ ಮಾಡುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಪೋಷಕರು ಮಾಹಿತಿಯನ್ನು ಪಡೆಯಬಹುದು. ಆ ಅಪ್ಲಿಕೇಶನ್‌ಗಳನ್ನು ಎಷ್ಟು ಸಮಯದವರೆಗೆ ಮಕ್ಕಳು ಬಳಸುತ್ತಾರೆ, ನಿರ್ಬಂಧಿತ ಎಂದು ಪರಿಗಣಿಸಲಾದ ಸೈಟ್‌ ಅನ್ನು ನೋಡಲು ಪ್ರಯತ್ನಿಸುತ್ತಿದ್ದರೆ ಆ ಬಗ್ಗೆ ಮಾಹಿತಿ ಇಂತಹ ಇತರ ಉಪಯುಕ್ತ ಮಾಹಿತಿಯನ್ನು ಪೋಷಕರು ಪಡೆಯಬಹುದು.


ಇದನ್ನೂ ಓದಿ:  CCI Penalty On Google: ಗೂಗಲ್​​ಗೆ ಮತ್ತೊಮ್ಮೆ ಬಿತ್ತು 936 ಕೋಟಿ ದಂಡ! ಕಾರಣ ಇಲ್ಲಿದೆ


ಪೋಷಕರು ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಅಗತ್ಯವಿರುವ ಪೋಷಕರಿಗೆ ಸಂಪನ್ಮೂಲಗಳನ್ನು ಒದಗಿಸಲು ಸಹಾಯ ಮಾಡಲು ಗೂಗಲ್‌ ಅನೇಕ ಪಾಲುದಾರ ಕಂಪನಿಗಳ ಜೊತೆ ಕೈಜೋಡಿಸಿದೆ. ಆ ಪಾಲುದಾರ ಕಂಪನಿಗಳೆಂದರೆ Common Sense Media, ConnectSafely ಮತ್ತು Family Online Safety Institute ಎಂಬಂತಹ ಕಂಪನಿಗಳು ಅಗಿವೆ.


ಕಂಟ್ರೋಲ್‌ ಟ್ಯಾಬ್‌
ಕಂಟ್ರೊಲ್‌ ಟ್ಯಾಬ್ ಎಂದರೆ ಪೋಷಕರು ಮಕ್ಕಳಿಗೆ ಪರದೆಯ ಸಮಯ ಮತ್ತು ಇಂತಹ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಬೇಕೆಂಬ ಅನುಮತಿಯಂತಹ ಮಿತಿಗಳನ್ನು ಸೆಟ್ಟಿಂಗ್‌ ಮಾಡಬಹುದು. ಈಗ ಸಾಮಾನ್ಯ ಮಿತಿಗಳು ಮತ್ತು ಸೆಟ್ಟಿಂಗ್‌ಗಳ ಕುರಿತು ಏನನ್ನೂ ಬದಲಾಯಿಸದೆ ನಿರ್ದಿಷ್ಟ ದಿನಕ್ಕೆ ಮಾತ್ರ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಅನುಮತಿಸುವ ನೂತನ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.


ಲೋಕೆಷನ್‌ ಟ್ಯಾಬ್
ಈ ಟ್ಯಾಬ್‌ ಪೋಷಕರಿಗೆ ತಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಉದಾಹರಣೆಗೆ ಈಗ ಅವರು ಲೈಬ್ರರಿ ಅಥವಾ ಮನೆಯಂತಹ ಸ್ಥಳಗಳಿಂದ ಹೊರಡುವಾಗ ಅಥವಾ ಮನೆಗೆ ವಾಪಸ್‌ ಬಂದಾಗ ಆ ಬಗ್ಗೆ ಸಂದೇಶಗಳು ಪೋಷಕರಿಗೆ ದೊರೆಯುತ್ತವೆ.


ಇದನ್ನೂ ಓದಿ:  ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ


ಅಂತಿಮವಾಗಿ, ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಅಥವಾ ಖರೀದಿಗೆ ಅನುಮೋದನೆ ಪಡೆಯಲು ಮಕ್ಕಳಿಂದ ವಿನಂತಿಗಳನ್ನು ಪಡೆಯುವ ನೋಟಿಫಿಕೆಶನ್‌ಗಳು ಸಹ ಪೋಷಕರಿಗೆ ಬರುತ್ತವೆ.

Published by:Ashwini Prabhu
First published: