Google Pixel ಬಳಕೆದಾರರು ಗೂಗಲ್ ಅಸಿಸ್ಟೆಂಟ್‌ ಕಾರ್ಯನಿರ್ವಹಿಸಲು ಇನ್ಮುಂದೆ 'ಹೇ ಗೂಗಲ್' ಹೇಳಬೇಕಾಗಿಲ್ಲ!

Google Pixel Smartphone: ಈ ಫೀಚರ್ ಅಸಿಸ್ಟೆಂಟ್ ಅನ್ನು ಸ್ಟ್ಯಾಂಡ್‌ಬೈನಲ್ಲಿರಿಸುತ್ತದೆ ಹಾಗೂ ನೀವು ಕರೆ ಸ್ವೀಕರಿಸಿದಾಗ ಕರೆಗೆ ಉತ್ತರಿಸಲು ಅಥವಾ ನಿರಾಕರಿಸಲು ನಿಮ್ಮ ಆದೇಶಕ್ಕಾಗಿ ಅಸಿಸ್ಟೆಂಟ್ ಕಾಯುತ್ತದೆ.

Google Assistant

Google Assistant

  • Share this:
    Google Pixel: ಕೆಲವು ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಅಸಿಸ್ಟೆಂಟ್‌ನ ಹೊಸ ಫೀಚರ್ ಆದ ‘ಕ್ವಿಕ್ ಫ್ರೇಸಸ್’ (Quick phrases) ಪಡೆದುಕೊಳ್ಳಲಾರಂಭಿಸಿದ್ದು ‘ಹೇ ಗೂಗಲ್’ ಎಂಬ ಪದವನ್ನು ಬಳಕೆ ಮಾಡದೆಯೇ ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಕೆಲವೊಂದು ಕಾರ್ಯಗಳನ್ನು ನಡೆಸಲು ಅನುಮತಿಸುತ್ತದೆ. XDA – ಡೆವಲಪರ್‌ಗಳು ವರದಿ ಮಾಡಿರುವ ಪ್ರಕಾರ ಈ ಫೀಚರ್ ಪಿಕ್ಸೆಲ್ 3 XL ಚಾಲಿತ ಆ್ಯಂಡ್ರಾಯ್ಡ್ 12 ಬೀಟಾ ಹಾಗೂ ಗೂಗಲ್ ಆ್ಯಪ್ ಆವೃತ್ತಿ 12.39.17.29ನಲ್ಲಿ ಕಂಡುಬಂದಿದೆ. ಈ ಫೀಚರ್ ಅನ್ನು ಸೆಟ್ಟಿಂಗ್‌ನಲ್ಲಿ ಸಕ್ರಿಯಗೊಳಿಸಬೇಕು ಹಾಗೂ ಒಮ್ಮೆ ಸಕ್ರಿಗೊಂಡ ನಂತರ ಕರೆಗಳಿಗೆ ಉತ್ತರಿಸಲು, ಅಲರಾಮ್‌ಗಳನ್ನು ನಿಲ್ಲಿಸಲು ಹಾಗೂ ಕೆಲವೊಂದು ಇತರ ಮೂಲ ಕಾರ್ಯಗಳನ್ನು ಪೂರ್ಣಗೊಳಿಸಲು ಬೇರೆ ಬೇರೆ ಆದೇಶಗಳಿಗೆ ಬಳಸಬಹುದಾಗಿದೆ.

    ಈ ಫೀಚರ್ ಅಸಿಸ್ಟೆಂಟ್ ಅನ್ನು ಸ್ಟ್ಯಾಂಡ್‌ಬೈನಲ್ಲಿರಿಸುತ್ತದೆ ಹಾಗೂ ನೀವು ಕರೆ ಸ್ವೀಕರಿಸಿದಾಗ ಕರೆಗೆ ಉತ್ತರಿಸಲು ಅಥವಾ ನಿರಾಕರಿಸಲು ನಿಮ್ಮ ಆದೇಶಕ್ಕಾಗಿ ಅಸಿಸ್ಟೆಂಟ್ ಕಾಯುತ್ತದೆ. ಅದೇ ರೀತಿ ನಿಮ್ಮ ಅಲರಾಮ್ ಹೊಡೆದುಕೊಂಡಾಗ ನಿಲ್ಲಿಸಲು ಅಥವಾ ಸ್ನೂಜ್ ಮಾಡಲು ನಿಮ್ಮ ಆದೇಶಕ್ಕಾಗಿ ಅಸಿಸ್ಟೆಂಟ್ ಕಾಯುತ್ತದೆ. ವರದಿಯ ಪ್ರಕಾರ ಗೂಗಲ್ ಅಸಿಸ್ಟೆಂಟ್ ಹೆಡ್ಸ್-ಅಪ್ ನೋಟಿಫಿಕೇಶನ್ ಅಡಿಯಲ್ಲಿರುವ ಸಣ್ಣ ಪಾಪ್‌ಅಪ್ ಮೂಲಕ ‘ಹೇ ಗೂಗಲ್’ ಎಂದು ಹೇಳುವುದನ್ನು ನೀವು ಯಾವಾಗ ಸ್ಕಿಪ್ ಮಾಡಬಹುದು ಎಂಬುದನ್ನು ನೆನಪಿಸುತ್ತದೆ.

    ಈ ಹಿಂದಿನ ವಿಶ್ಲೇಷಣೆಗಳ ಪ್ರಕಾರ ಸ್ಮಾರ್ಟ್‌ಫೋನ್‌ಗಳು, ಸ್ಪೀಕರ್‌ಗಳು, ಟಿವಿ ಹಾಗೂ ಇತರ ಡಿವೈಸ್‌ಗಳು ಒಳಗೊಂಡಂತೆ ಎಲ್ಲರದರಲ್ಲೂ ಲಭ್ಯವಾಗುತ್ತದೆ ಎಂದಾಗಿತ್ತು. ಆದರೂ, ಕಂಪನಿಯು ಹೊಸ ಫೀಚರ್ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಅಪ್‌ಡೇಟ್ ಕುರಿತು 9to5Google ಮೂಲಕ APK ವರದಿಯು ಕೆಲವೊಂದು ಮಾಹಿತಿ ನೀಡಿದೆ. ಈ ವರದಿ ಪ್ರಕಾರ, ಮೇಲೆ ತಿಳಿಸಿದ ಆದೇಶವನ್ನು ಹೊರತುಪಡಿಸಿ, ಬಳಕೆದಾರರು ತಮ್ಮ ಆಯ್ಕೆಯ ನಿರ್ದಿಷ್ಟ ಆದೇಶಗಳನ್ನು (ಕಮಾಂಡ್‌ಗಳನ್ನು) ಸೇರಿಸಲು ಸಾಧ್ಯವಾಗುತ್ತದೆ. ಈ ಕಮಾಂಡ್‌ಗಳನ್ನು “ರೆಕಮೆಂಡೆಡ್” ‘ಅಲರಾಮ್‌ಗಳು’ ‘ಕನೆಕ್ಟ್’ ‘ಜನರಲ್ ಇನ್‌ಫೋ’ ‘ಲೈಟ್ಸ್’ ‘ಮೀಡಿಯಾ ಕಂಟ್ರೋಲ್ಸ್’ ‘ಟೈಮರ್ಸ್’ ಹಾಗೂ ‘ಟು-ಡೂಸ್’ ಎಂಬುದಾಗಿ ವರ್ಗೀಕರಿಸಲಾಗಿದೆ.

    Read Also: ಅಪ್ರಾಪ್ತೆಯ ಜತೆ ಸೆಕ್ಸ್, ಬಾಲಕಿಯ ಪೋಷಕರೆದುರೇ ಬೆತ್ತಲಾಗಿ ಸಿಕ್ಕಿಬಿದ್ದ ಯುವಕ!

    ಇದುವರೆಗೆ ಕ್ವಿಕ್ ಫ್ರೇಸಸ್ ಫೀಚರ್ ಅನ್ನು ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರವೇ ವರದಿ ಮಾಡಲಾಗಿದೆ ಹಾಗೂ ಇತರ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬಂದಿಲ್ಲ ಎಂಬುದಾಗಿ ವರದಿ ತಿಳಿಸಿದೆ. ಆದರೆ ಕಂಪನಿಯು ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಫೀಚರ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ. 9to5Google ಈ ಹಿಂದೆ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ಕೆಲವೊಂದು ಕಮಾಂಡ್‌ಗಳಾದ ಅಲರಾಮ್ ಸೆಟ್ ಮಾಡು, ಅಲರಾಮ್ ಕ್ಯಾನ್ಸಲ್ ಮಾಡು, ಲೈಟ್ ಆನ್ ಮಾಡು, ವಾಲ್ಯೂಮ್ ಹೆಚ್ಚಿಸು, ಕಡಿಮೆ ಮಾಡು, ಟೈಮರ್ ಸೆಟ್ ಮಾಡು, ಫ್ಯಾಮಿಲಿ ನೋಟ್ಸ್ ಹಾಗೂ ಇನ್ನು ಮುಂತಾದವುಗಳಿಗೆ ಇನ್ನು ಮುಂದೆ ಪದಗಳ ಬಳಕೆಯ ಅಗತ್ಯವಿರುವುದಿಲ್ಲ ಎಂದಾಗಿದೆ. ಗೂಗಲ್ ಅಸಿಸ್ಟೆಂಟ್ ಸೆಟ್ಟಿಂಗ್‌ಗಳಲ್ಲಿ ಈ ಫೀಚರ್ ಸಕ್ರಿಯಗೊಳಿಸಬೇಕು ಹಾಗೂ ಕ್ವಿಕ್ ಫ್ರೇಸಸ್ ಅನ್ನು ಯಾವಾಗ ಬಳಸಬೇಕು ಎಂಬುದನ್ನು ಬಳಕೆದಾರರು ಆಯ್ಕೆ ಮಾಡಬಹುದಾಗಿದೆ.
    First published: