Google: ಚೀನಾ ಮೊಬೈಲ್​ ಕಂಪನಿ ಮೇಲೆ ಗೂಗಲ್​ ಮುನಿಸು; ಈ ಮೊಬೈಲ್​ಗೆ ಸಿಗಲ್ಲ ಪ್ಲೇಸ್ಟೋರ್​​!

ಹುವಾವೇ ಮೊಬೈಲ್​ಗಳಿಗೆ ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆ್ಯಪ್​ಗಳು ಲಭ್ಯವಿರುವುದಿಲ್ಲ.

Rajesh Duggumane | news18
Updated:May 20, 2019, 10:37 AM IST
Google: ಚೀನಾ ಮೊಬೈಲ್​ ಕಂಪನಿ ಮೇಲೆ ಗೂಗಲ್​ ಮುನಿಸು; ಈ ಮೊಬೈಲ್​ಗೆ ಸಿಗಲ್ಲ ಪ್ಲೇಸ್ಟೋರ್​​!
ಸಾಂದರ್ಭಿಕ ಚಿತ್ರ
  • News18
  • Last Updated: May 20, 2019, 10:37 AM IST
  • Share this:
ನೀವು ಹುವಾವೇ (Huawei ) ಸಂಸ್ಥೆಯ ಮೊಬೈಲ್ ಬಳಕೆ ಮಾಡುತ್ತಿದ್ದೀರಾ? ಹಾಗಾದರೆ ನೀವು ಮೊಬೈಲ್​ ಬದಲಾವಣೆ ಮಾಡಲು ಸಿದ್ಧರಾಗಿ! ಹೌದು, ಪ್ರತಿಷ್ಠಿತ ಗೂಗಲ್​ ಸಂಸ್ಥೆ ಹುವಾವೇ ಸಂಸ್ಥೆ ಜೊತೆ ಸಂಬಂಧ ಕಳೆದುಕೊಂಡಿದೆ. ಹಾಗಾಗಿ ಇನ್ನು ಮುಂದೆ ಬರುವ ಈ ಸಂಸ್ಥೆಯ ಮೊಬೈಲ್​ಗೆ ಅಪಡೇಟ್​ಗಳು ಲಭ್ಯವಿರುವುದಿಲ್ಲ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸರ್ಕಾರ ಹುವಾವೇ ಮೊಬೈಲ್​ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿತ್ತು. ಇದಾದ ಬೆನ್ನಲ್ಲೇ ಗೂಗಲ್​ ಈ ನಿರ್ಧಾರ ತೆಗೆದುಕೊಡಿದ್ದು, ಕೆಲ ವ್ಯವಹಾರವನ್ನು ಕಡಿತಗೊಳಿಸಿದೆ.

ಈಗ ಬಳಕೆ ಮಾಡುತ್ತಿರುವ ಹುವಾವೇ ಸ್ಮಾರ್ಟ್​ಫೋನ್​ಗಳಲ್ಲಿ ಗೂಗಲ್ ಆ್ಯಪ್​ಗಳು ಲಭ್ಯವಿರಲಿದೆ. ಅಲ್ಲದೆ, ಗೂಗಲ್​ ಸ್ಟೋರ್​ನಿಂದ ಆ್ಯಪ್​ಗಳನ್ನು ಡೌನ್​ಲೋಡ್​ ಹಾಗೂ ಅಪಡೇಟ್​ ಮಾಡಬಹುದು. ಆದರೆ, ಇನ್ನು ಮುಂದೆ ಬರುವ ಹುವಾವೇ ಮೊಬೈಲ್​ಗಳಿಗೆ ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆ್ಯಪ್​ಗಳು ಲಭ್ಯವಿರುವುದಿಲ್ಲ. ಇದರಿಂದ ಸಾಕಷ್ಟು ಆ್ಯಪ್​ಗಳು ಮೊಬೈಲ್​ಗೆ ಲಭ್ಯವಾಗುವುದಿಲ್ಲ.

ಇದನ್ನೂ ಓದಿ: ಭಾರತಕ್ಕೆ ಬರಲು ಸಿದ್ಧವಾಗಿದೆ 40MP ತ್ರಿಪಲ್​ ಕ್ಯಾಮೆರಾದ ಹುವಾವೆ ಮೊಬೈಲ್​! ಇಲ್ಲಿದೆ ಮಾಹಿತಿ

ಈ ಬೆಳವಣಿಗೆಯಿಂದ ಹುವಾವೇ ಸಂಸ್ಥೆ ಭಾರೀ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ್ಯಂಡ್ರಾಯ್ಡ್​​ ಓಪನ್​ ಸೋರ್ಸ್​​​ ಪ್ರಾಜೆಕ್ಟ್​ ಹೆಸರಿನ ಆ್ಯಂಡ್ರಾಯ್ಡ್​​​ ಲೈಸೆನ್ಸ್​ಅನ್ನು ಹುವಾವೇ ಬಳಕೆ ಮಾಡುತ್ತಿದೆ. ಇದು ಬಳಕೆದಾರರಿಗೆ ಲಭ್ಯವಿರಲಿದೆ.

First published:May 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading