ಗೂಗಲ್​ ಮ್ಯಾಪ್​ನಿಂದ ಉಬರ್​ ಕ್ಯಾಬ್​ ಬುಕ್​ ಮಾಡುವುದಕ್ಕೆ ತಡೆ


Updated:June 20, 2018, 4:20 PM IST
ಗೂಗಲ್​ ಮ್ಯಾಪ್​ನಿಂದ ಉಬರ್​ ಕ್ಯಾಬ್​ ಬುಕ್​ ಮಾಡುವುದಕ್ಕೆ ತಡೆ

Updated: June 20, 2018, 4:20 PM IST
ನ್ಯೂಯಾರ್ಕ್​: ಗೂಗಲ್ ಮ್ಯಾಪ್ ಮೂಲಕವೇ ಒಲಾ ಮತ್ತು ಉಬರ್ ಕ್ಯಾಬ್ ಬುಕ್ ಮಾಡಲು ಅವಕಾಶ ನೀಡಿದ್ದ ಗೂಗಲ್​ ಸಂಸ್ಥೆ ಇದೀಗ ಯಾವುದೇ ಮಾಹಿತಿ ನೀಡದೆ ಉಬರ್​ ಸೇವೆಯನ್ನು ತೆಗೆದು ಹಾಕಿದೆ.

ಕಳೆದ ವರ್ಷದ ಜನವರಿಯಲ್ಲಿ ಉಬರ್​ ಸೇವೆಯನ್ನು ಮ್ಯಾಪ್​ನಲ್ಲಿ ಅಳವಡಿಸಿಕೊಂಡಿರುವ ಗೂಗಲ್​ ಇದೀಗ ಈ ಸೇವೆಯನ್ನು ತೆಗೆದು ಹಾಕಿದ್ದು, ಹೆಲ್ಪ್​ ಪೇಜ್​ನಲ್ಲಿ ಈ ಆಯ್ಕೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಮೆಸೇಜ್​ನ್ನು ನೀಡುತ್ತಿದೆ. ಆ್ಯಂಡ್ರಾಯ್ಡ್​ ಪೊಲೀಸ್​ ವರದಿ ಪ್ರಕಾರ ಈ ಹಿಂದೆ ಈಒಎಸ್​ ನಲ್ಲಿ ಲಭ್ಯವಿರುತ್ತಿದ್ದ ಗೂಗಲ್​ ಮ್ಯಾಪ್​ನಿಂದ ಉಬರ್ ಕ್ಯಾಬ್​ ಬುಕ್ಕಿಂಗ್​​ ಆಯ್ಕೆಯನ್ನು ತೆಗೆದು ಹಾಕಲಾಗಿತ್ತು.

ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಗೂಗಲ್ ಮ್ಯಾಪ್ ಆಯ್ಕೆ ಇರುತ್ತದೆ. ಇದನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಮ್ಯಾಪ್ ಮೂಲಕವೇ ನೇರವಾಗಿ ಕ್ಯಾಬ್ ಬುಕ್ ಮಾಡುವ ಅವಕಾಶವನ್ನು ಗೂಗಲ್​ ನೀಡಿತ್ತು. ಈ ರೀತಿ ನಡೆಸುವುದರಿಂದ ಉಬರ್​​ನ ಅಫೀಶಿಯಲ್​ ಆ್ಯಪ್​ಗೆ ಹಿನ್ನಡೆಯಾಗಿತ್ತು.

ಗೂಗಲ್​ ನಡೆ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ಉಬರ್​ ಆಗಲಿ ಅಥವಾ ಗೂಗಲ್​ ಆಗಲಿ ನೀಡಿಲ್ಲ.

 
First published:June 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...