ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಕೆಲವು ಪರಿಷ್ಕೃತ ಆ್ಯಪ್ಗಳು ಬೇಕೆನಿಸಿದಾಗ ಗೂಗಲ್ ಒಡೆತನದ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಇದರಲ್ಲಿ ನಕಲಿ ಆ್ಯಪ್ಗಳು ಇರುತ್ತವೆ. ಗೂಗಲ್ ನಕಲಿ ಆ್ಯಪ್ಗಳನ್ನು ಪತ್ತೆ ಮಾಡಿ ಅದನ್ನು ಕಿತ್ತಸೆಯುವ ಮೂಲಕ ಬಳಕೆದಾರರ ಸುರಕ್ಷತೆಗೆ ಶ್ರಮಿಸುತ್ತಿರುತ್ತದೆ. ಅದರಂತೆ ಇದೀಗ ಪ್ಲೇ ಸ್ಟೋರ್ನಲ್ಲಿ ಕ್ರಿಪ್ಟೋಕರೆನ್ಸಿ ಕ್ಲೌಡ್ ಮೈನಿಂಗ್ ಅಪ್ಲಿಕೇಶನ್ಗಳಾಗಿ ಮರೆಮಾಚುವ 8 ಅಪ್ಲಿಕೇಶನ್ ಅನ್ನು ಗೂಗಲ್ ತೆಗೆದು ಹಾಕಿದೆ. ಕ್ರಿಪ್ಟೋಕರೆನ್ಸಿ ಬಳಕೆ, ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ಆ್ಯಪ್ಗಳು ದುರುದ್ದೇಶಪೂರಿತ ಚಟುವಟಿಕೆ ನಡೆಸುತ್ತಿವೆ ಎಂದು ತಿಳಿದು ತೆಗೆದುಹಾಕಿದೆ.
ಗೂಗಲ್ ಪ್ಲೇಸ್ಟೋರ್ನಲ್ಲಿ ನಿಷೇಧಿಸಿದ 8 ಆ್ಯಪ್ಗಳಿವು:
ಬಿಟ್ಫಂಡ್ಗಳು - ಕ್ರಿಪ್ಟೋ ಕ್ಲೌಡ್ ಮೈನಿಂಗ್ ಬಿಟ್ಕಾಯಿನ್ ಮೈನರ್ – ಕ್ಲೌವ್ಡ್ ಮೈನಿಂಗ್ಬಿಟ್ಕಾಯಿನ್ (ಬಿಟಿಎಸ್)- ಪೂಲ್ ಮೈನಿಂಗ್ ಕ್ಲೌಡ್ ವಾಲೆಟ್ ಕ್ರಿಪ್ಟೋ ಹೋಲಿಕ್ - ಬಿಟ್ಕಾಯಿನ್ ಕ್ಲೌಡ್ ಮೈನಿಂಗ್ಡೈಲಿ ಬಿಟ್ಕಾಯಿನ್ ರಿವಾರ್ಡ್- ಕ್ಲೌಡ್ ಬೇಸ್ಡ್ ಮೈನಿಂಗ್ ಸಿಸ್ಟಂ ಬಿಟ್ಕಾಯಿನ್ 2021 ಮೈನ್ ಬಿಟ್ ಪ್ರೊ- ಕ್ರಿಪ್ಟೋ ಕ್ಲೌಡ್ ಆ್ಯಂಡ್ ಬಿಟಿಎಸ್ ಮೈನರ್ಎಥೆರಿಯಮ್ (ಇಟಿಹೆಚ್)- ಪೂಲ್ ಮೈನಿಂಗ್
ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಹ್ಯಾಕರ್ಗಳು ಇವರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಳಕೆದಾರರ ವಹಿವಾಟು ಗಮನಿಸಲು ಮುಂದಾದ್ದಾರೆ. ಜೊತೆಗೆ ಹಣ ಕಬಳಿಸುವ ತಂತ್ರವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ನಕಲಿ ಆ್ಯಪ್ಗಳನ್ನು ಸೃಷ್ಟಿಸಿ ಇನ್ಸ್ಟಾಲ್ ಮಾಡುವ ಮೂಲಕ ಬಳಸಲು ಒತ್ತಾಯಿಸುತ್ತಿದ್ದಾರೆ.
ಆದರೆ ಈ ಅಪಾಯಕಾರಿ ಆ್ಯಪ್ಗಳು ಮತ್ತು ಅವುಗಳು ಒಳಗೊಂಡಿರುವ ಮಾಲ್ವೇರ್ಗಳು ಬಳಕೆದಾರರ ಮಾಹಿತಿ ಜೊತೆಗೆ ಎಲ್ಲವನ್ನು ದೋಚುವ ಪಯತ್ನ ಮಾಡುತ್ತಿದೆ.
2022 Hyundai Elantra N Line: ರೇಸಿಂಗ್ ಕಾರ್ನಂತೆಯೇ ಸೌಂಡ್ ಬದಲಾಯಿಸುವ ಆಯ್ಕೆ; ಸಖತ್ತಾಗಿದೆ ಈ ಕಾರು!
ಗೂಗಲ್ ಪ್ಲೇ ಸ್ಟೋರ್ ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಈ ನಕಲಿ ಆ್ಯಪ್ಗಳ ಹಾವಳಿ ಗಮನಿಸಿ ಎಂಟು ಆ್ಯಪ್ಗಳನ್ನು ಕಿತ್ತೆಸೆದಿದೆ. ಜೊತೆಗೆ ಈಗಾಗಲೇ ಆ್ಯಪ್ಗಳನ್ನು ಬಳಸುತ್ತಿದ್ದ ಜನರಿಗೆ ಎಚ್ಚರಿಕೆಯ ಮಾಹಿತಿ ನೀಡಿದೆ. ಒಂದು ವೇಳೆ ನಕಲಿ ಆ್ಯಪ್ ಬಳಸುತ್ತಿದ್ದರೆ ಕೂಡಲೇ ಡಿಲೀಟ್ ಮಾಡಿ ಎಂದಿದೆ.
Viral video: ವೈರಲ್ ಆಯ್ತು ಅಜ್ಜ-ಮೊಮ್ಮಕ್ಕಳ ಬಾಂಧವ್ಯ ಸಾರುವ ವಿಡಿಯೋ
ಇನ್ನು ಗೂಗಲ್ನಿಂದ ತೆಗೆದುಹಾಕಲಾದ ಎಂಟು ಆಪ್ಗಳು ನಿಜವಾದ ಅಪ್ಲಿಕೇಶನ್ಗಳಂತೆ ಕಾಣುತ್ತದೆ ಮತ್ತು ಕ್ಲೌಡ್-ಮೈನಿಂಗ್ ಕಾರ್ಯಾಚರಣೆಗಳಲ್ಲಿ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ನೀಡುತ್ತದೆ. ಈ ಆ್ಯಪ್ಗಳು ತಮ್ಮ ಬಳಕೆದಾರರಿಗೆ ಜಾಹೀರಾತುಗಳನ್ನು ನೋಡುವಂತೆ ಮಾಡುತ್ತದೆ. ಜೊತೆಗೆ ಸಬ್ಸ್ಕ್ರಿಪ್ಶನ್ ಸೇವೆಗಳಿಗಾಗಿ ಮಾಸಿಕ ಶುಲ್ಕ 1,115 ನೀಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ