ಮಕ್ಕಳ ಡಾಟಾ ಕದಿಯುತ್ತಿದ್ದ ಮೂರು ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್ ಪ್ಲೇ ಸ್ಟೋರ್​; ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದೆಯಾ?

ಇಂಟರ್​​ನ್ಯಾಷನಲ್​ ಡಿಜಿಟಲ್​​ ಅಕೌಂಟೆಬಿಲಿಟಿ ಕೌನ್ಸಿಲ್​ (ಐಡಿಸಿಎ) ಈ ಮೂರು ಆ್ಯಪ್​ಗಳನ್ನು ಪತ್ತೆಹಚ್ಚಿ ಗೂಗಲ್​ಗೆ ತಿಳಿಸಿದೆ.  ಗೂಗಲ್ ಸರಿಯಾಗಿ​ ಪರಿಶೀಲಿಸಿದೆ. ಪ್ಲೇ ಸ್ಟೋರ್​ ಒಳಗೊಂಡಿರುವ ನೀತಿಗೆ ವಿರುದ್ಧವಾಗಿ ಈ ಆ್ಯಪ್​ಗಳು ಕಾರ್ಯನಿರ್ವಹಿಸಿರುವ ಕಾರಣ ಕಿತ್ತೆಸೆಯಲಾಗಿದೆ.

Photo: Google

Photo: Google

 • Share this:
  ಗೂಗಲ್​ ತನ್ನ ಪ್ಲೇ ಸ್ಟೋರ್​ನಲ್ಲಿದ್ದ ಪ್ರಿನ್​​​ಸ್ಸಸ್ ಸಲೂನ್​, ನಂಬರ್​​ ಕಲರಿಂಗ್​ ಮತ್ತು ಕ್ಯಾಟ್​ ಆ್ಯಂಡ್​​ ಕೌನ್ಸಿಲ್​ ಆ್ಯಪ್​ ಅನ್ನು ಕಿತ್ತೆಸೆದಿದೆ. ಗೂಗಲ್​ ತೆಗೆದು ಹಾಕಿರುವ ಈ ಆ್ಯಪ್​ಗಳು ಮಕ್ಕಳಿಗಾಗಿ ಸಿದ್ಧಪಡಿಸಿದ್ದ ಆ್ಯಪ್​ಗಳಾಗಿದ್ದವು,  ಆದರೆ ಡಾಟಾವನ್ನು ಕಲೆಹಾಕುತ್ತಿವೆ ಎಂಬ ಮಾಹಿತಿ ಅನ್ವಯ ತೆಗೆದು ಹಾಕಲಾಗಿದೆ.

  ಆ್ಯಂಡ್ರಾಯ್ಡ್​ ಆ್ಯಪ್​ಗಳ ಮನೆ ಎಂದೇ ಕರೆಯುವ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಸಾಕಷ್ಟು ಆ್ಯಪ್​ಗಳಿವೆ. ಪುಟಾಣಿ ಮಕ್ಕಳಿಗೆ ಮನರಂಜನೆ ಒದಗಿಸುವ ಅಪ್ಲಿಕೇಶನ್​ನಿಂದ ಹಿಡಿದು. ಆಟ, ಪಾಠಗಳ ಕುರಿತಾಗಿರುವ ಆ್ಯಪ್​ಗಳಿವೆ. ಹಾಗಾಗಿ ಅವುಗಳನ್ನು ಡೌನ್​ಲೋಡ್​ ಮಾಡಿಕೊಂಡು ಬಳಸುತ್ತಿದ್ದಾರೆ. ಅದರಂತೆ ಇದೀಗ ಪ್ರಿನ್​​​ಸ್ಸಸ್ ಸಲೂನ್​, ನಂಬರ್​​ ಕಲರಿಂಗ್​ ಮತ್ತು ಕ್ಯಾಟ್​ ಆ್ಯಂಡ್​​ ಕೌನ್ಸಿಲ್​ ಆ್ಯಪ್ ಗೂಗಲ್​ ನೀತಿಯನ್ನು ಉಲ್ಲಂಘಿಸಿದ್ದಲ್ಲದೆ, ಮಕ್ಕಳ ಡಾಟಾವನ್ನು ಕಳೆಹಾಕುತ್ತಿತ್ತು ಎಂದು ಇಂಟರ್​ ನ್ಯಾಷನಲ್​ ಅಕೌಂಟೆಬಿಲಿಟಿ ಕೌನ್ಸಿಲ್​ ಸ್ಪಷ್ಟಪಡಿಸಿದೆ.

  ಪ್ರಿನ್​​​ಸ್ಸಸ್ ಸಲೂನ್


  ಇಂಟರ್​​ನ್ಯಾಷನಲ್​ ಡಿಜಿಟಲ್​​ ಅಕೌಂಟೆಬಿಲಿಟಿ ಕೌನ್ಸಿಲ್​ (ಐಡಿಸಿಎ) ಈ ಮೂರು ಆ್ಯಪ್​ಗಳನ್ನು ಪತ್ತೆಹಚ್ಚಿ ಗೂಗಲ್​ಗೆ ತಿಳಿಸಿದೆ.  ಗೂಗಲ್ ಸರಿಯಾಗಿ​ ಪರಿಶೀಲಿಸಿದೆ. ಪ್ಲೇ ಸ್ಟೋರ್​ ಒಳಗೊಂಡಿರುವ ನೀತಿಗೆ ವಿರುದ್ಧವಾಗಿ ಈ ಆ್ಯಪ್​ಗಳು ಕಾರ್ಯನಿರ್ವಹಿಸಿರುವ ಕಾರಣ ಕಿತ್ತೆಸೆಯಲಾಗಿದೆ.

  ಇನ್ನು ಗೂಗಲ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಈ ಮೂರು ಆ್ಯಪ್​ಗಳು ಫೋನಿನಲ್ಲಿದ್ದರೆ ಅನ್​ಇನ್​ಸ್ಟಾಲ್​ ಮಾಡುವಂತೆ ತಿಳಿಸಿದೆ.

  ಗೂಗಲ್​ ಈ ಮೊದಲು ಸಾಕಷ್ಟು ಆ್ಯಪ್​ಗಳನ್ನು ತೆಗೆದುಹಾಕಿದೆ. ಬಳಕೆದಾರರಿಗೆ ತೊಂದರೆ ನೀಡುತ್ತಿದ್ದ ಮತ್ತು ಮಾಹಿತಿ ಕದಿಯುತ್ತಿದ್ದ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ತೆಗೆದು ಹಾಕುತ್ತಾ, ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಸುರಕ್ಷತೆ ಒದಗಿಸುತ್ತಾ ಬಂದಿದೆ. ಇದೀಗ ಪ್ರಿನ್​​​ಸ್ಸಸ್ ಸಲೂನ್​, ನಂಬರ್​​ ಕಲರಿಂಗ್​ ಮತ್ತು ಕ್ಯಾಟ್​ ಆ್ಯಂಡ್​​ ಕೌನ್ಸಿಲ್​ ಆ್ಯಪ್​ಗಳು ತೆಗೆದು ಹಾಕಿ ಮಕ್ಕಳಿಗೆ ಸುರಕ್ಷತೆ ಒದಗಿಸಿದೆ.
  Published by:Harshith AS
  First published: