Android Apps: ಸ್ಮಾರ್ಟ್​ಫೋನ್ ಬಳಕೆದಾರರೇ ಎಚ್ಚರ: ತಕ್ಷಣವೇ ಈ ಆ್ಯಪ್​ಗಳನ್ನು ಡಿಲೀಟ್ ಮಾಡಿ

ಜೋಕರ್ ಮಾಲ್‌ವೇರ್ ಗೂಗಲ್ ಪ್ಲೇಸ್ಟೋರ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಾಲ್‌ವೇರ್ ಹೊಂದಿರುವ ಅಪ್ಲಿಕೇಶನ್‌ಗಳು ಅಪಾಯಕಾರಿ ಮತ್ತು ಬಳಕೆದಾರರಿಗೆ ಹಾನಿ ಮಾಡಬಹುದು.

Google play store

Google play store

  • Share this:
    ಸ್ಮಾರ್ಟ್​ಫೋನ್ ಬಳಕೆದಾರರಿಗೆ ಎಚ್ಚರಿಕೆ. ನೀವು ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್​ಲೋಡ್ ಮಾಡಿ ಹಲವು ಆ್ಯಪ್​ಗಳನ್ನು ಬಳಸುತ್ತಿದ್ದೀರಾ? ಹಾಗಿದ್ರೆ ಜಾಗರೂಕರಾಗಿರಿ. ಏಕೆಂದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಹಳಷ್ಟು ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಿವೆ ಎಂಬುದು ಮತ್ತೊಮ್ಮೆ ಪತ್ತೆಯಾಗಿದೆ. ಅದರಂತೆ ಈ ಬಾರಿ ಗೂಗಲ್ ಪ್ಲೇ ಸ್ಟೋರ್​ನಿಂದ ಹೊರಬಿದ್ದಿರುವುದು 17 ಆ್ಯಪ್​ಗಳು. ಈ ಬಗ್ಗೆ ಬಳಕೆದಾರರನ್ನು ಗೂಗಲ್ ಈ ಹಿಂದಿನಿಂದಲೂ ಎಚ್ಚರಿಸುತ್ತಾ ಬರುತ್ತಿದೆ. ಇದೀಗ Zscaler ಸೆಕ್ಯುರಿಟಿ ಸಂಸ್ಥೆಯು ಗೂಗಲ್ ಪ್ಲೇ ಸ್ಟೋರ್​ನಲ್ಲಿದ್ದ ದುರುದ್ದೇಶಪೂರಿತ 17 ಅಂಡ್ರಾಯ್ಡ್ ಅಪ್ಲಿಕೇಶನ್​ಗಳನ್ನು ಗುರುತಿಸಿವೆ.

    ಈ ಆ್ಯಪ್​ಗಳು ಜೋಕರ್ ಮಾಲ್​ವೇರ್ ಹೊಂದಿದ್ದು, ಈ ಆ್ಯಪ್​ಗಳನ್ನು ಬಳಸುತ್ತಿದ್ದವರ ಮಾಹಿತಿಗಳನ್ನು ಕಲೆಹಾಕುತ್ತಿದೆ ಎಂದು Zscaler ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಗೂಗಲ್ 17 ಆ್ಯಪ್​ಗಳನ್ನು ಏಕಕಾಲಕ್ಕೆ ಡಿಲೀಟ್ ಮಾಡಿದೆ. ಆದರೆ ಈ ಆ್ಯಪ್​ಗಳನ್ನು ಈಗಾಗಲೇ 1,20000 ಮಂದಿ ಡೌನ್​ಲೋಡ್ ಮಾಡಿದ್ದು, ಹೀಗಾಗಿ ತಕ್ಷಣವೇ ಈ ಆ್ಯಪ್​ಗಳನ್ನು ಮೊಬೈಲ್​ನಿಂದ ಡಿಲೀಟ್ ಮಾಡುವಂತೆ ತಿಳಿಸಲಾಗಿದೆ.

    All Good PDF Scanner
    Mint Leaf Message-Your Private Message
    Unique Keyboard - Fancy Fonts & Free Emoticons
    Tangram App LockDirect Messenger
    Private SMS
    One Sentence Translator - Multifunctional Translator
    Style Photo Collage
    Meticulous Scanner
    Desire Translate
    Talent Photo Editor - Blur focus
    Care Message
    Part Message
    Paper Doc Scanner
    Blue Scanner
    Hummingbird PDF Converter - Photo to PDF
    All Good PDF Scanner

    ZDNetನ ವರದಿಯ ಪ್ರಕಾರ, ಈ ಅಪ್ಲಿಕೇಶನ್‌ಗಳನ್ನು ಸುಮಾರು ಒಂದು ತಿಂಗಳ ಹಿಂದೆಯೇ ಗೂಗಲ್ ಪ್ಲೇ ಸ್ಟೋರ್‌ಗೆ ಅಪ್‌ಲೋಡ್ ಮಾಡಲಾಗಿದೆ. ಸದ್ಯ ಗೂಗಲ್ ಇವುಗಳನ್ನು ರದ್ದುಗೊಳಿಸಿದ್ದರೂ, ಬಳಕೆದಾರರು ತಮ್ಮ ಮೊಬೈಲ್‌ಗಳಿಂದ ಈ ಅಪ್ಲಿಕೇಶನ್‌ಗಳನ್ನು ಹಸ್ತಚಾಲಿತವಾಗಿ ಡಿಲೀಟ್ ಮಾಡಬೇಕಾಗುತ್ತದೆ. ಇಲ್ಲದಿದ್ರೆ ಈ ಆ್ಯಪ್​ಗಳ ಮೂಲಕವೇ ಹ್ಯಾಕರುಗಳು ನಿಮ್ಮ ಬ್ಯಾಂಕ್ ಖಾತೆ, ಇತರೆ ಮಾಹಿತಿಗಳ ಮೇಲೆ ಕನ್ನ ಹಾಕಬಹುದು ಎಂದು ತಿಳಿಸಿದೆ.

    ಜೋಕರ್ ಮಾಲ್‌ವೇರ್ ಗೂಗಲ್ ಪ್ಲೇಸ್ಟೋರ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಾಲ್‌ವೇರ್ ಹೊಂದಿರುವ ಅಪ್ಲಿಕೇಶನ್‌ಗಳು ಅಪಾಯಕಾರಿ ಮತ್ತು ಬಳಕೆದಾರರಿಗೆ ಹಾನಿ ಮಾಡಬಹುದು. ಎರಡು ತಿಂಗಳ ಹಿಂದೆ, ಜೋಕರ್ ಮಾಲ್‌ವೇರ್ ಹೊಂದಿರುವ 11 ಅಪ್ಲಿಕೇಶನ್‌ಗಳನ್ನು ಗೂಗಲ್ ತೆಗೆದುಹಾಕಿದೆ. ಸಂಶೋಧಕರು ಇತ್ತೀಚೆಗೆ ಇನ್ನೂ 6 ಅಪ್ಲಿಕೇಶನ್‌ಗಳನ್ನು ಗುರುತಿಸಿದ್ದಾರೆ ಮತ್ತು ಅವುಗಳನ್ನು ಪ್ಲೇ ಸ್ಟೋರ್‌ನಿಂದ ಅಳಿಸಿ ಹಾಕಲಾಗಿದೆ. ಹಾಗೆಯೇ ಈ ಹಿಂದೆ ಕೂಡ ಜೋಕರ್ ಮಾಲ್‌ವೇರ್ ಹೊಂದಿರುವ 24 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಇದೀಗ ಮತ್ತೆ 17 ಅಪ್ಲಿಕೇಶನ್‌ಗಳ ಪಟ್ಟಿ ಹೊರಬಂದಿದ್ದು, ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿದೆ. ಆದರೆ ಈ ಆ್ಯಪ್​ಗಳಲ್ಲಿ ಯಾವುದಾದರೂ ಒಂದು ಅಪ್ಲಿಕೇಶನ್ ನಿಮ್ಮ ಮೊಬೈಲ್​ನಲ್ಲಿದೆಯೇ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ. ಇಲ್ಲದಿದ್ರೆ ನಾಳೆ ನೀವು ಕೂಡ ಹ್ಯಾಕರುಗಳ ಕುತಂತ್ರಕ್ಕೆ ಬಲಿಯಾಗಬಹುದು.

    KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
    Published by:zahir
    First published: