HOME » NEWS » Tech » GOOGLE REMOVES 16 APPS INFECTED BY AGENT SMITH MALWARE IF YOUR PHONE HAS ANY OF THESE YOU SHOULD DELETE TOO HAS

ಎಚ್ಚರ..! ಈ ಆ್ಯಪ್​​ಗಳು ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿಬಿಡಿ

ಸ್ಮಾರ್ಟ್​ಫೋನ್​​ಗಳಿಗೆ ಧಾವಿಸುತ್ತಿರುವ ಮಾಲ್​​ವೇರ್​ ಆ್ಯಪ್​​ ಬಳಕೆದಾರರ ಮಾಹಿತಿಯನ್ನು ಕದಿಯುವುದಲ್ಲದೆ, ಸ್ಮಾರ್ಟ್​ಫೋನ್​ ಅನ್ನು ಹ್ಯಾಕ್​ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಗೂಗಲ್ ಪ್ಲೇಸ್ಟೋರ್​​​ನಲ್ಲಿರುವ ಮಾಲ್​ವೇರ್​​ ಭಾದಿತ 16 ಆ್ಯಪ್​ಗಳನ್ನು ಗುರುತಿಸಲಾಗಿದ್ದು, ಕೆಲವೊಂದನ್ನು ಡಿಲೀಟ್​ ಮಾಡಲಾಗಿದೆ.

Harshith AS | news18
Updated:July 18, 2019, 6:21 PM IST
ಎಚ್ಚರ..! ಈ ಆ್ಯಪ್​​ಗಳು ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿಬಿಡಿ
ಮಾಲ್​​ವೇರ್​ ಆ್ಯಪ್​​
  • News18
  • Last Updated: July 18, 2019, 6:21 PM IST
  • Share this:
ಸ್ಮಾರ್ಟ್​ಫೋನ್​ಗಳಿಗೆ ‘ಏಜೆಂಟ್​ ಸ್ಮಿತ್‘​ ಹೆಸರಿನ ಮಾಲ್​ವೇರ್​ ಹರಡುತ್ತಿದ್ದು, ಭಾರತದಲ್ಲಿ 1.5 ಕೋಟಿ ಸ್ಮಾರ್ಟ್​​ಫೋನ್​ಗಳ ಮೇಲೆ ಇದು ಬಾಧಿಸಿದೆ ಎಂದು ತಿಳಿದುಬಂದಿದೆ. ಚೆಕ್​ಪಾಯಿಂಟ್​ ಎಂಬ ಕಂಪೆನಿ ನೀಡಿರುವ ವರದಿ ಪ್ರಕಾರ ಬಳಕೆದಾರರಿಗೆ ತಿಳಿಯದೇ ಈ ಮಾಲ್​ವೇರ್​ ಎಂಬ ವೈರಸ್​  ಇನ್​​ಸ್ಟಾಲ್​ ಆಗುತ್ತಿದೆ ಎಂದು ಹೇಳಿದೆ.

ಸ್ಮಾರ್ಟ್​ಫೋನ್​​ಗಳಿಗೆ ಧಾವಿಸುತ್ತಿರುವ ಮಾಲ್​​ವೇರ್​ ಆ್ಯಪ್​​ ಬಳಕೆದಾರರ ಮಾಹಿತಿಯನ್ನು ಕದಿಯುವುದಲ್ಲದೆ, ಸ್ಮಾರ್ಟ್​ಫೋನ್​ ಅನ್ನು ಹ್ಯಾಕ್​ ಮಾಡುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಗೂಗಲ್ ಪ್ಲೇಸ್ಟೋರ್​​​ನಲ್ಲಿರುವ ಮಾಲ್​ವೇರ್​​ ಬಾಧಿತ 16 ಆ್ಯಪ್​ಗಳನ್ನು ಗುರುತಿಸಲಾಗಿದ್ದು, ಕೆಲವೊಂದನ್ನು ಡಿಲೀಟ್​ ಮಾಡಲಾಗಿದೆ.

ಇದನ್ನೂ ಓದಿ: PHOTOS: ಶಿರಡಿ ಸಾಯಿಬಾಬಾನ ದರ್ಶನ ಪಡೆದು ಮುಂಬೈಗೆ ವಾಪಸ್ಸಾದ ರೆಬೆಲ್​ ಶಾಸಕರು

ಹೆಚ್ಚಿನ ಸ್ಮಾರ್ಟ್​ಫೋನ್​ ಬಳಕೆದಾರರು ಫೋನ್​​​ನಲ್ಲಿಯೇ ಎಲ್ಲಾ ವ್ಯವಹಾರವನ್ನು ನಡೆಸುತ್ತಿದ್ದು, ತಮ್ಮ ಬ್ಯಾಕಿಂಗ್, ಕಚೇರಿ ವ್ಯಹಹಾರವನ್ನು ನಡೆಸುವಾಗ ಎಚ್ಚರದಿಂದಿರುವುದು ಒಳಿತು. ಜೊತೆಗೆ ಸ್ಮಾರ್ಟ್​ಫೋನ್​​​ನಲ್ಲಿ ​ಖಾಸಗಿ ವಿವರವನ್ನು ನಮೂದಿಸುವಾಗ ಸೂಕ್ಷವಾಗಿ ಪರಿಗಣಿಸಿ ನಮೂದಿಸಿ. ಈಗಾಗಲೇ ಮಾಲ್​ವೇರ್​ ಬಾಧಿತ 16 ಆ್ಯಪ್​ಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದ್ದು, ಅವುಗಳು ನಿಮ್ಮ ಸ್ಮಾರ್ಟ್​ಪೋನ್​​ನಲ್ಲಿದ್ದರೆ ತಕ್ಷಣ ಅನ್​​-ಇನ್​​ಸ್ಟಾಲ್​ ಮಾಡಿರಿ.

ಮಾಲ್​ವೇರ್​ ಬಾಧಿತ 16 ಆ್ಯಪ್​ಗಳು

ಲುಡೊ ಮಾಸ್ಟರ್ - New Ludo Game 2019 For Free

ಬ್ಲಾಕ್‌ಮ್ಯಾನ್ ಗೋ- Free Realms & Mini Gamesಕ್ರೇಜಿ ಜ್ಯೂಸರ್ - Hot Knife Hit Game & Juice Blast

ಸ್ಕೈ ವಾರಿಯರ್ಸ್: General Attack

ಬಯೋ ಬ್ಲಾಸ್ಟ್ - Infinity Battle Shoot virus

ಶೂಟಿಂಗ್ ಜೆಟ್

ಫೋಟೋ ಪ್ರೊಜೆಕ್ಟರ್

ಗನ್ ಹೀರೋ - Gunman Game for Free

ಕುಕ್ಕಿಂಗ್​​ ವಿಚ್​

ಕಲರ್​​​ ಫೋನ್ ಫ್ಲ್ಯಾಶ್ - Call Screen Theme

ಕ್ಲಾಶ್​​ ಆಫ್​​​ ವೈರಸ್​

ಆಂಗ್ರಿ ವೈರಸ್

ರ್ಯಾಬಿಟ್​​ ಟೆಂಪಲ್​​

ಸ್ಟಾರ್ ರೇಂಜ್​​

ಕಿಸ್ ಗೇಮ್: Touch Her Heart

ಗರ್ಲ್​ ಕ್ಲೋತ್​​ ಎಕ್ಸ್​​​ರೇ ಸ್ಕ್ಯಾನ್ ಸಿಮ್ಯುಲೇಟರ್
First published: July 13, 2019, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories