ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಆ್ಯಪ್ಗಳನ್ನು ಒದಗಿಸುತ್ತಿದ್ದ ಗೂಗಲ್ ಪ್ಲೇ ಸ್ಟೋರ್ ಇದೀಗ 11 ಆ್ಯಪ್ಗಳನ್ನು ಕಿತ್ತೆಸೆದಿದೆ. ಜೋಕರ್ ಎಂಬ ಮಾಲ್ವೇರ್ ಕೆಲವು ಆ್ಯಪ್ಗಳಲ್ಲಿ ಕಂಡುಬಂದಿದ್ದು, ಈ ವಿಚಾರಕ್ಕೆ 11 ಆ್ಯಪ್ಗಳನ್ನು ಪರೀಕ್ಷಿಸಿ ನಂತರ ಅವುಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ.
ಪ್ಲೇ ಸ್ಟೋರ್ನಲ್ಲಿ ಮಾಲ್ವೇರ್ ಉಪಟಳ ಹೆಚ್ಚಾಗುತ್ತಲೇ ಇದೆ. ಜೋಕರ್ ಮಾಲ್ವೇರ್ ಈ ಹಿಂದೆಯೂ ಪ್ಲೇ ಸ್ಟೋರ್ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಕಾಣಿಸಿಕೊಂಡಿದೆ. ಗ್ರಾಹಕರ ಮಾಹಿತಿಯನ್ನು ಎಗರಿಸುವ ಜೋಕರ್ ಮಾಲ್ವೇರ್ ಬಳಕೆದಾರರಿಗೆ ಗೊತ್ತಿಲ್ಲದೆ ತೊಂದರೆಯನ್ನುಂಟು ಮಾಡುತ್ತಿತ್ತು. ಹಾಗಾಗಿ ಈ ವಿಚಾರವನ್ನು ತಿಳಿದು ಗೂಗಲ್ ಪ್ಲೇ ಸ್ಟೋರ್ ಹಲವು ಆ್ಯಪ್ಗಳನ್ನು ಪರಿಶೀಲಿಸಿದೆ. ಅವುಗಳಲ್ಲಿ 11 ಆ್ಯಪ್ಗಳಲ್ಲಿ ಜೋಕರ್ ಮಾಲ್ವೇರ್ ಪತ್ತೆಯಾಗಿದೆ. ಹೀಗಾಗಿ ಆ ಆ್ಯಪ್ಗಳನ್ನು ಕಿತ್ತೆಸೆದಿದೆ. ಜೊತೆಗೆ ಬಳಕೆದಾರರಿಗೂ ಅನ್ಇನ್ಸ್ಟಾಲ್ ಮಾಡುವಂತೆ ತಿಳಿಸಿದೆ.
ಇಸ್ರೇಲಿನ ಸೈಬರ್ ಸೆಕ್ಯುರಿಟಿ ಚೆಕ್ ಪಾಯಿಂಟ್ ರಿಸರ್ಚರ್ ಈ ಬಗ್ಗೆ ಪರಿಶೀಲನೆ ನಡೆಸಿ ಗೂಗಲ್ಗೆ ತಿಳಿಸಿತ್ತು. ಹಾಗಾಗಿ ಗೂಗಲ್ ಪರಿಶೀಲನೆ ನಡೆಸಿ 11 ಆ್ಯಪ್ಗಳನ್ನು ಪಟ್ಟಿಮಾಡಿದೆ.
com.imagecompress.android,
com.relax.relaxation.androidsms,
com.cheery.message.sendsms,
com.peason.lovinglovemessage,
com.contact.withme.texts,
com.hmvoice.friendsms,
com.file.recovefiles,
com.LPlocker.lockapps,
com.remindme.alram
com.training.memorygame.
ಜೋಕರ್ ಮಾಲ್ವೇರ್:
ಜೋಕರ್ ಮಾಲ್ವೇರ್ ಬಳಕೆದಾರಿಗೆ ತಿಳಿಯದೆ ಪ್ರಿಮಿಯಂ ಸೇವೆಯ ಚಂದಾದಾರಿಕೆಯನ್ನು ಪಡೆಯುತ್ತದೆ. ನಂತರ ಅವರ ಮಾಹಿತಿಯನ್ನು ಎಗರಿಸುತ್ತದೆ ಎಂದು ಚೆಕ್ ಪಾಯಿಂಟ್ ರಿಸರ್ಚರ್ ತಿಳಿಸಿದೆ.
ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್ ರೋಲ್ನಲ್ಲಿ ಸೈಕೋ ಸುಂದರಿ
Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ