ಆನ್ಲೈನ್ ಪೇಮೆಂಟ್ ಸೇವೆಯನ್ನು ಒದಗಿಸುವ ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿದೆ. ಪ್ಲೇ ಸ್ಟೋರ್ನ ನಿಯಮವನ್ನು ಮೀರಿದ ಕಾರಣಕ್ಕಾಗಿ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ದೇಶದಾದ್ಯಂತ ಅನೇಕರು ಪೇಟಿಯಂ ಆ್ಯಪ್ ಬಳಸುತ್ತಿದ್ದಾರೆ. ಅದರ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಆದರೀಗ ಗೂಗಲ್ ಪ್ಲೇ ಸ್ಟೋರ್ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಿದೆ. ಈ ವಿಚಾರ ಅನೇಕರಲ್ಲಿ ಅಚ್ಚರಿಗೆ ಕಾರಣವಾಗಿದೆ. ಮಾತ್ರವಲ್ಲದೆ, ಇದ್ದಕ್ಕಿಂದ್ದಂತೆಯೇ ಈ ನಿರ್ಧಾರವನ್ನು ಕೈಗೊಂಡಿರುವ ನಂಬಲಸಾಧ್ಯವಾಗಿದೆ.
ಒನ್97 ಕಮ್ಯೂನಿಕೇಶನ್ ಲಿಮಿಟೆಡ್ ಪೇಟಿಯಂ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಸದ್ಯ ಗೂಗಲ್ ಪ್ಲೇ ಸ್ಟೋರ್ನಲ್ಲಿ ಪೇಟಿಯಂ ಬ್ಯುಸಿನೆಸ್, ಪೇಟಿಯಂ ಮನಿ, ಪೇಟಿಯಂ ಮಾಲ್ ಲಭ್ಯವಿದೆ. ಆ್ಯಪಲ್ ಸ್ಟೋರ್ನಲ್ಲಿ ಬಳಕೆದಾರರಿಗೆ ಡೌನ್ಲೋಡ್ಗೆ ಸಿಗುತ್ತಿದೆ. ಆದರೆ ಪೇಟಿಯಂ ಆ್ಯಪ್ ಮಾತ್ರ ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿದೆ. ಅನೇಕರುಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಹಾಕುತ್ತಿದ್ದಾರೆ. ಕಾರಣವೇನು ತಿಳಿಸಿ ಎಂದು ಕೇಳುತ್ತಿದ್ದಾರೆ.
ಪೇಟಿಯಂ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನ ಕೆಲವು ನೀತಿ- ನಿಯಮವನ್ನು ಉಲ್ಲಂಘಿಸಿದೆ. ಈ ಕಾರಣಕ್ಕಾಗಿ ಸದ್ಯದ ಮಟ್ಟಿಗೆ ಪೇಟಿಯಂ ಆ್ಯಪ್ ಅನ್ನು ತೆಗೆದು ಹಾಕಲಾಗಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ ‘ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿದೆ.
ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ಮತ್ತು ಪ್ರೈವಸಿಯ ಉಪಾಧ್ಯಕ್ಷ ಸುಝಾನೆ ಫ್ರೇ ಈ ಬಗ್ಗೆ ಮಾತನಾಡಿದ್ದು, ಬಳಕೆದಾರರನ್ನು ರಕ್ಷಿಸುವ ಮಿಟ್ಟಿನಲ್ಲಿ ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್ಗೆ ಮಾಹಿತಿ ನೀಡುತ್ತೇವೆ. ಆದರೇ ಆ್ಯಪ್ ಡೆವಲಪರ್ಗಳು ಗೂಲ್ ಪ್ಲೇ ಸ್ಟೋರ್ ಹಾಕಿಕೊಟ್ಟ ನೀತಿಗಳನ್ನು ಅನುಸರಿಸದಿದ್ದರೇ ಅವನ್ನು ರಿಮೂವ್ ಮಾಡಲಾಗುತ್ತದೆ. ಹೊಸ ನೀತಿಗಳನ್ನು ಅನುಸರಿದರೆ ಮಾತ್ರ ಪ್ಲೇ ಸ್ಟೋರ್ನಲ್ಲಿ ಅಂತಹ ಆ್ಯಪ್ಗಳು ಕಾಣಸಿಗುತ್ತವೆ ಎಂದಿದೆ.
ನಂತರ ಮಾತನಾಡಿದ ಅವರು, ಗೂಗಲ್ ಪ್ಲೇ ಸ್ಟೋರ್ ಆನ್ಲೈನ್ ಕ್ಯಾಸಿನೋ, ಜೂಜು ಅಥವಾ ಬೆಟ್ಟಿಂಗ್ ಕುರಿತಾದ ಆ್ಯಪ್ಗಳನ್ನು ಪ್ರೊತ್ಸಾಹಿಸುವುದಿಲ್ಲ. ಮಾತ್ರವಲ್ಲದೆ, ಜಾಹೀರಾತು ಮತ್ತು ಥರ್ಡ್ ಪಾರ್ಟಿ ಆ್ಯಪ್ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಪೇಟಿಯಂ ಒನ್97 ಕಮ್ಯೂನಿಕೇಶನ್ ಲಿಮಿಟೆಡ್ ಸಂಸ್ಥೆಯದ್ದು, ವಿಜಯ್ ಶೇಖರ್ ಶರ್ಮಾ ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಆನ್ಲೈನ್ ಪೇಮೆಂಟ್ ಸೇವೆ ಅಭಿವೃದ್ಧಿ ಪಡಿಸಿದರು.
![Paytm Payments Bank launches cash at home facility for senior citizens in Delhi NCR]()
ಪೇಟಿಎಂ ಆ್ಯಪ್
ಮತ್ತೊಂದೆಡೆ ಪೇಟಿಯಂ ಕಂಪನಿ ಫಿನ್ಟೆಕ್ ಫರ್ಮ್ ಆಂಟ್ನಿಂದ ಭಾರೀ ಹಣವನ್ನು ಪಡೆದಿದೆ. ಆದರೆ ಈ ಕಂಪನಿ ಚೀನಾದ ಆಲಿಬಾಬಾ ಗುಂಪಿನೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ