• Home
  • »
  • News
  • »
  • tech
  • »
  • Google Pixel Smartwatch: ಗೂಗಲ್‌ನಿಂದ ಮೊದಲಬಾರಿಗೆ ಸ್ಮಾರ್ಟ್‌ವಾಚ್‌ ಬಿಡುಗಡೆ! ಇದರ ಫೀಚರ್ಸ್‌ ಕೇಳಿದ್ರೆ ಶಾಕ್‌ ಆಗ್ತೀರಾ

Google Pixel Smartwatch: ಗೂಗಲ್‌ನಿಂದ ಮೊದಲಬಾರಿಗೆ ಸ್ಮಾರ್ಟ್‌ವಾಚ್‌ ಬಿಡುಗಡೆ! ಇದರ ಫೀಚರ್ಸ್‌ ಕೇಳಿದ್ರೆ ಶಾಕ್‌ ಆಗ್ತೀರಾ

google pixel smartwatch

google pixel smartwatch

ಸ್ಮಾರ್ಟ್‌ವಾಚ್‌ನ ಬಿಡುಗಡೆಯ ಬಗ್ಗೆ ಕಂಪೆನಿಯು ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಇದರ ಒಂದು ಟೀಸರ್‌ ಬಿಡುಗಡೆಯನ್ನು ಮಾಡಿದ್ದು ಈ ಟೀಸರ್‌ ಮೂಲಕವೇ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ನ ಫೀಚರ್ಸ್‌ ವಿನ್ಯಾಸವನ್ನು ನೋಡಬಹುದಾಗಿದೆ

  • Share this:

    ತಂತ್ರಜ್ಞಾನದಲ್ಲಿ (Technology) ದೊಡ್ಡಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿರುವ ವೇದಿಕೆಗಳಲ್ಲಿ ಗೂಗಲ್‌ (Google) ಕೂಡ ಒಂದು. ಈ ಗೂಗಲ್ ಬಹಳಷ್ಟು ಉತ್ಪನ್ನಗಳನ್ನು ಉತ್ಪಾದಿಸಿ ತನ್ನ ಉತ್ಪನ್ನದತ್ತ (Product) ಗ್ರಾಹಕರನ್ನು ಆಕರ್ಷಿಸುತ್ತದೆ. ಇದರಿಂದ ಗ್ರಾಹಕರಿಗೆ ಬಯಸಿದ ಬೆಲೆಯಲ್ಲಿ ದೊರೆಯುತ್ತದೆ. ಇಲ್ಲಿ ಗೂಗಲ್‌ ದಿನದಿಂದ ದಿನಕ್ಕೆ ಹೊಸ ವರ್ಷನ್‌ನಲ್ಲಿ ತನ್ನ ಪ್ರೊಡಕ್ಟ್‌ ಅನ್ನು ಉತ್ಪಾದಿಸುತ್ತಿರುತ್ತದೆ. ಅದೇ ರೀತಿ ಈ ವರ್ಷ ಗೂಗಲ್‌ ತನ್ನ ಬ್ರಾಂಡ್‌ನಲ್ಲಿ (Brand) ಹೊಸ ಸ್ಮಾರ್ಟ್‌ವಾಚ್‌ (Smartwatch) ಅನ್ನು ಬಿಡುಗಡೆ (Release) ಮಾಡುವುದಾಗಿ ನಿರ್ಧರಿಸಿಸದೆ. ಈ ಸ್ಮಾರ್ಟ್‌ವಾಚ್‌ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ. ಇದೊಂದು ಸ್ಮಾರ್ಟ್‌ವಾಚ್‌ನ ಪಟ್ಟಿಯಲ್ಲಿ ಸೇರಲಿರುವಂತಹ ಉತ್ಪನ್ನವಾಗಿದೆ. ಈಗಲೇ ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ದೊರಕುತ್ತಿವೆ.


    ಈ ಸ್ಮಾರ್ಟ್‌ವಾಚ್‌ನ ಬಿಡುಗಡೆಯ ಬಗ್ಗೆ ಕಂಪೆನಿಯು ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಇದರ ಒಂದು ಟೀಸರ್‌ ಬಿಡುಗಡೆಯನ್ನುಮಾಡಿದೆ. ಈ ಟೀಸರ್‌ ಮೂಲಕವೇ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ನ ಫೀಚರ್ಸ್‌, ವಿನ್ಯಾಸವನ್ನು ನೋಡಬಹುದಾಗಿದೆ.


    ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ನ ವಿನ್ಯಾಸ:


    ಬಿಡುಗಡೆಯಾದ ಫೋಟೋದ ಬಗ್ಗೆ ಹೇಳುವುದಾದರೆ, ಮುಂಬರುವ ಸ್ಮಾರ್ಟ್ ವಾಚ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ. ಆಂಡ್ರಾಯ್ಡ್ ಸೆಂಟ್ರಲ್ ಹಂಚಿಕೊಂಡ ಫೋಟೋವನ್ನು ಆಧರಿಸಿ, ಕಂಪನಿಯು ಪಿಕ್ಸೆಲ್ ವಾಚ್‌ನಲ್ಲಿ ಆ್ಯಪಲ್ ವಾಚ್‌ನಂತಹ ಕೆಲವು ಬಟನ್‌ಗಳನ್ನು ಸಹ ನೀಡಬಹುದು. ಇದರೊಂದಿಗೆ ಸ್ಮಾರ್ಟ್ ಬ್ಯಾಂಡ್ ಅನ್ನು ಸಹ ನೋಡಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್​ವಾಚ್​ ಮೂಲಕ ಗೂಗಲ್​ನ ಹಲವು ಫೀಚರ್​ಗಳನ್ನು ಸರಳವಾಗಿ ಬಳಸಬಹುದು ಎಂದು ಹೇಳಲಾಗಿದೆ.


    Google released the first smartwatch You will be shocked if you hear its features
    ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್


    ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ ಮಾಡುವ ಮುನ್ನ ಸರಿಯಾಗಿ ಯೋಚಿಸಿ


    ಬಿಡುಗಡೆಯ ಸಂದರ್ಭದಲ್ಲಿ ಬಂದ ಮಾಹಿತಿಗಳು:


    ಬ್ಲೂಟೂತ್ SIG ಗುರಿತಿಸಿದಂತೆ ಇದೇ ಮೊದಲ ಬಾರಿಗೆ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ ಅಧಿಕೃತ ಮಾಹಿತಿಯು ಸಿಕ್ಕಿದೆ. ಈ ಮಾಹಿತಿಯಲ್ಲಿ ಹೇಳಿರುವಂತೆ ನೂತನ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ ಸಾಧನವು GWT9R, GBZ4S ಮತ್ತು GQF4C ಮಾದರಿ ಸಂಖ್ಯೆಗಳು, Wear OS ಸಾಫ್ಟ್‌ವೇರ್ ಸಂಖ್ಯೆ ಮತ್ತು ಬ್ಲೂಟೂತ್ ಆವೃತ್ತಿ 5.2 ಯಂತಹ ಕೆಲವೇ ಕೆಲವು ಮಾಹಿತಿಗಳು ಹೊರಹಾಕಿವೆ.


    ಇತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಈ ಹಿಂದಿನ ವರದಿಗಳ ಪ್ರಕಾರ, ನೂತನ ಗೂಗಲ್ ಪಿಕ್ಸೆಲ್ ವಾಚ್ ರೌಂಡ್‌ ಸ್ಕ್ರೀನ್‌ ಅನ್ನು ಹೊಂದಿರಬಹುದು. ಈ ಸಾಧನವು ಕನಿಷ್ಟ ಬೆಜೆಲ್‌ಗಳನ್ನು ನೀಡುವ ನಿರೀಕ್ಷೆಯಿದೆ. ಸರ್ಚ್ ಇಂಜಿನ್  ತನ್ನ ಮೊದಲ ಸ್ಮಾರ್ಟ್ ವಾಚ್‌ ಅನ್ನು  ತಯಾರಿಸಲು ಸ್ಟೇನ್‌ಲೆಸ್ ಸ್ಟೀಲ್‌ನಂತಹ ಉನ್ನತ ಮಟ್ಟದ ವಸ್ತುಗಳನ್ನು ಬಳಸುತ್ತದೆ ಎಂದು ವದಂತಿಗಳಿವೆ.


    ಈ ವಾಚ್‌ನ ಫೀಚರ್ಸ್‌ ಬಗ್ಗೆ ಇರುವ ನಿರೀಕ್ಷೆ:


    • ನೂತನ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ ಸಾಧನವು 24 ಗಂಟೆಗಳ ಹೃದಯ ಬಡಿತ ಮಾನಿಟರಿಂಗ್ ವೈಶಿಷ್ಟ್ಯವನ್ನು ನೀಡುತ್ತದೆ

    •  ಸ್ಮಾರ್ಟ್ ವಾಚ್ ವೇರ್ ಓಎಸ್ ನ ಇತ್ತೀಚಿನ ಆವೃತ್ತಿಯನ್ನು ಆಧರಿಸಿರುತ್ತದೆ.


    Google released the first smartwatch You will be shocked if you hear its features
    ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್


    • ಆರೋಗ್ಯ ಉತ್ಸಾಹಿಗಳಿಗಾಗಿ ಈ ಸಾಧನವು ಸ್ಟೆಪ್ ಕೌಂಟರ್, SpO2 ಟ್ರ್ಯಾಕಿಂಗ್, ಸ್ಲೀಪ್ ಅಪ್ನಿಯ ಪತ್ತೆ, ಹೃದಯ ಬಡಿತದ ಎಚ್ಚರಿಕೆ, ಕ್ಯಾಲೋರಿ ಟ್ರ್ಯಾಕಿಂಗ್ ಮತ್ತು ಬಹು ವೈದ್ಯಕೀಯ ಸಾಧನಗಳೊಂದಿಗೆ ಸಹಯೋಗದಂತಹ ವೈಶಿಷ್ಟ್ಯಗಳನ್ನು ಒದಗಿಸಬಹುದು.

    • ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ವಾಚ್ 20 ರೀತಿಯ ವಿವಿಧ ವಾಚ್ ಬ್ಯಾಂಡ್‌ಗಳನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.

    • ಇನ್ನು ಈ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ ಸಾಧನವು ಧರಿಸಬಹುದಾದ ಕಪ್ಪು ಮತ್ತು ಸಿಲ್ವರ್ ಬಣ್ಣದ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


    ಇದನ್ನೂ ಓದಿ: ಏರ್ಟೆಲ್​ನ ಈ ಹೊಸ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಬಂಪರ್ ಆಫರ್


    ಇದಿಷ್ಟು ಮುಂಬರುವ ಗೂಗಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ವಾಚ್‌ನ ಫೀಚರ್ಸ್‌ಗಳಾಗಿವೆ. ಇನ್ನು ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸಿಲ್ಲ.

    Published by:Harshith AS
    First published: