ತಂತ್ರಜ್ಞಾನದ ದೈತ್ಯ ಗೂಗಲ್ ಮಕ್ಕಳ ಕಲಿಕೆಗೆ ನೆರವಾಗಲು ‘ರೀಡ್ ಅಲಾಂಗ್‘ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ಭಾರತೀಯರಿಗೆ ‘ಬೋಲೊ‘ ಹೆಸರಿನಲ್ಲಿ ಸಿಗುತ್ತಿದೆ. ‘ರೀಡ್ ಅಲಾಂಗ್‘ ಆ್ಯಪ್ ಮಕ್ಕಳ ಕಲಿಕೆಯ ಮೇಲೆ ದೃಷ್ಠಿ ಇರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಆ್ಯಂಡ್ರಾಯ್ಡ್ ಆ್ಯಪ್ ಇದಾಗಿದ್ದು, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಲಿದೆ.
ಭಾರತದಲ್ಲಿ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡ ನಂತರವೇ ‘ರೀಡ್ ಅಲಾಂಗ್‘ ಆ್ಯಪ್ ಅನ್ನು ಪರಿಚಯಿಸಿದೆ. ಸದ್ಯ 180ಕ್ಕೂ ಹೆಚ್ಚು ದೇಶದಲ್ಲಿ ‘ರೀಡ್ ಅಲಾಂಗ್‘ ಆ್ಯಪ್ ಬಳಕೆಯಲ್ಲಿದೆ. ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಹಿಂದಿ ಭಾಷೆಯಲ್ಲಿ ಸಿಗುತ್ತಿದೆ.
‘ಬೋಲೊ‘ ಆ್ಯಪ್
‘ಬೋಲೊ‘ ಆ್ಯಪ್ ದಿಯಾ ಫೀಚರ್ ಸಹಾಯವನ್ನು ಪಡೆದುಕೊಂಡು ಮಕ್ಕಳ ಸ್ವತಂತ್ರ ಕಲಿಕೆಗೆ ಮತ್ತು ಓದುವ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ನೆರವು ಮಾಡುತ್ತದೆ. ಜೊತೆಗೆ ಮಕ್ಕಳು ಜೋರಾಗಿ ಓದಲು ದಿಯಾ ಗೂಗಲ್ನ ಟೆಕ್ಟ್-ಟು-ಸ್ಪೀಚ್ ಮತ್ತು ಸ್ಚೀಚ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಮಕ್ಕಳು ಪದಗಳ ಉಚ್ಚಾರಣೆ ಮತ್ತು ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಲು ಸಹಾಯ ಮಾಡುತ್ತದೆ.
‘ರೀಡ್ ಅಲಾಂಗ್‘ ಆ್ಯಪ್ನಲ್ಲಿ ಪ್ರಪಂಚದಾದ್ಯಂತ ವೈವಿದ್ಯಮಯ ಮತ್ತು ಆಸಕ್ತಿದಾಯಕ ಕಥೆಗಳನ್ನು ನೀಡಲಾಗಿದೆ. ಜೊತೆಗೆ ಮಕ್ಕಳಿಗಾಗಿ ಆಟವನ್ನು ಇದರಲ್ಲಿ ನೀಡಲಾಗಿದೆ. ಮಕ್ಕಳು ಓದುತ್ತಾ, ಆಡುತ್ತಾ ಬ್ಯಾಡ್ಜ್ಗಳನ್ನು ಸಂಗ್ರಹಿಸಬಹುದು. ಇದು ಮಕ್ಕಳನ್ನು ಓದಲು ಪ್ರೇರೆಪಿಸುತ್ತದೆ ಎಂದು ಗೂಗಲ್ ತಿಳಿಸಿದೆ.
ಇನ್ನು ರೀಡ್ ಅಲಾಂಗ್ ಆ್ಯಪ್ ಜಾಹೀರಾತು ರಹಿತವಾಗಿದ್ದು, ಮಕ್ಕಳು ಇಂಟರ್ನೆಟ್ ಇಲ್ಲದೆ ಸಹಃ ಬಳಸಬಹುದಾಗಿದೆ. ಹೆಚ್ಚಿನ ಕಥೆಗಳಿಗಾಗಿ ಪೋಷಕರು ಇಂಟರ್ನೆಟ್ ಬಳಸಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ