Google Play Store: ನಿಮ್ಮ ಮೊಬೈಲ್​ನಲ್ಲಿ ಈ 17 ಆ್ಯಪ್​ಗಳಿವೆಯಾ?; ಇದ್ದರೆ ಕೂಡಲೇ ಡಿಲೀಟ್ ಮಾಡಿ

Google Play Store: ಜೋಕರ್ ಮಾಲ್ವೇರ್ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ವೈರಸ್​ನಿಂದ ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯಲು ಸಾಧ್ಯವಿದೆ. ಈಗಾಗಲೇ 17 ಆ್ಯಪ್​ಗಳನ್ನು ಗೂಗಲ್ ಪ್ಲೇ ಸ್ಟೋರ್ ತೆಗೆದುಹಾಕಿದೆ. ಆ ಆ್ಯಪ್​ಗಳ ಪಟ್ಟಿ ಇಲ್ಲಿದೆ...

ಗೂಗಲ್ ಪ್ಲೇಸ್ಟೋರ್

ಗೂಗಲ್ ಪ್ಲೇಸ್ಟೋರ್

 • Share this:
  ಗೂಗಲ್ ಪ್ಲೇ ಸ್ಟೋರ್​ನಿಂದ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರ! ಅದರಲ್ಲಿನ ಕೆಲವು ಆ್ಯಪ್​ಗಳು ನಿಮ್ಮ ಮಾಹಿತಿಯನ್ನು ಹ್ಯಾಕರ್​ಗಳಿಗೆ ರವಾನಿಸುತ್ತವೆ. ಆ ಆ್ಯಪ್​ಗಳ ಮೂಲಕ ನಿಮ್ಮ ಸ್ಮಾರ್ಟ್​ಫೋನ್​ಗೆ ಜೋಕರ್ ಮಾಲ್ವೇರ್ ಇನ್​ಸ್ಟಾಲ್​ ಮಾಡಿ ನಿಮ್ಮ ಮಾಹಿತಿಯನ್ನು ಕದಿಯಲು ಸಾಧ್ಯವಿದೆ. ಹೀಗಾಗಿ, ಅಂತಹ 17 ಅಪಾಯಕಾರಿ ಆ್ಯಪ್​ಗಳನ್ನು ಇದೀಗ ಗೂಗಲ್ ಪ್ಲೇ ಸ್ಟೋರ್ ರಿಮೂವ್ ಮಾಡಿದೆ. ನೀವೇನಾದರೂ ಈ ಆ್ಯಪ್​ಗಳನ್ನು ಬಳಸುತ್ತಿದ್ದರೆ ತಕ್ಷಣ ಅವುಗಳನ್ನು ಡಿಲೀಟ್ ಮಾಡಿ!

  ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯವಿರುವ ಹಲವು ಆ್ಯಪ್​ಗಳನ್ನು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್ ಬಳೆದಾರರು ಇನ್​ಸ್ಟಾಲ್ ಮಾಡಿಕೊಳ್ಳುತ್ತಾರೆ. ಆ ಆ್ಯಪ್​ಗಳು ನಿಮ್ಮ ಕಾಂಟ್ಯಾಕ್ಟ್​, ಫೋಟೋಗಳು, ಫೋನ್ ಕಾಲ್​ ಎಲ್ಲದರ ಆ್ಯಕ್ಸೆಸ್ ಕೇಳುತ್ತದೆ. ಹಿಂದೆಮುಂದೆ ಯೋಚಿಸದ ಬಳಕೆದಾರರು ಆ್ಯಪ್​ಗಳಿಗೆ ತಮ್ಮ ಖಾಸಗಿ ಮಾಹಿತಿಯನ್ನು ಕದಿಯಲು ಅವಕಾಶ ನೀಡುತ್ತಾರೆ. ನಕಲಿ ಆ್ಯಪ್​ಗಳು ಯಾವುದು ಎಂಬ ಅರಿವಿಲ್ಲದೆ ಅನೇಕರು ಅವುಗಳನ್ನು ಬಳಸುತ್ತಿದ್ದಾರೆ. ಇದೀಗ ಗೂಗಲ್ ಪ್ಲೇ ಸ್ಟೋರ್ ಡಿಲೀಟ್ ಮಾಡಿರುವ 17 ಆ್ಯಪ್​ಗಳ ಪಟ್ಟಿ ಇಲ್ಲಿದೆ.

  ಕ್ಯಾಲಿಫೋರ್ನಿಯಾ ಮೂಲದ ಐಟಿ ಸೆಕ್ಯುರಿಟಿ ಫರ್ಮ್ ನೀಡಿದ ಸಂಶೋಧನೆಯ ವರದಿ ಬಳಿಕ ಗೂಗಲ್ ಪ್ಲೇ ಸ್ಟೋರ್ 17 ಅಪಾಯಕಾರಿ ಆ್ಯಪ್​ಗಳನ್ನು ತೆಗೆದುಹಾಕಿದೆ. ಸ್ಟೈಲ್ ಫೋಟೋ ಕೊಲ್ಯಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್​ಲೇಟ್, ಟ್ಯಾಲೆಂಟ್ ಫೋಟೋ ಎಡಿಟರ್, ಮಿಂಟ್ ಲೀಫ್ ಮೆಸೇಜ್, ಡೈರೆಕ್ಟ್ ಮೆಸೆಂಜರ್, ಪ್ರೈವೇಟ್ ಎಸ್​ಎಂಎಸ್, ಪೇಪರ್ ಡಾಕ್ಯುಮೆಂಟ್ ಸ್ಕ್ಯಾನರ್, ಬ್ಲೂ ಸ್ಕ್ಯಾನರ್, ಹ್ಯಾಮಿಂಗ್​ಬರ್ಡ್​ ಪಿಡಿಎಫ್​ ಸಿ, ಕೇರ್ ಮೆಸೇಜ್, ಪಾರ್ಟ್ ಮೆಸೇಜ್, ಆಲ್ ಗುಡ್ ಪಿಡಿಎಫ್​ ಸ್ಕ್ಯಾನರ್​, ಒನ್ ಸೆಂಟೆನ್ಸ್​ ಟ್ರಾನ್ಸಲೇಟರ್ ಮುಂತಾದ ಆ್ಯಪ್​​ಗಳನ್ನು ಗೂಗಲ್ ಪ್ಲೇಸ್ಟೋರ್​ನಿಂದ ಡಿಲೀಟ್ ಮಾಡಲಾಗಿದೆ. ಗೂಗಲ್ ಪ್ಲೇಸ್ಟೋರ್​ನಿಂದ ಡಿಲೀಟ್ ಮಾಡಲಾಗಿರುವ ಹೊಸ ಆ್ಯಪ್​ಗಳ ಪಟ್ಟಿ ಇಲ್ಲಿದೆ...

  •  meticulous Scanner

  • Desire Translate

  • Talent Photo Editor - Blur focus

  • Care Message

  • All Good PDF Scanner

  • Mint Leaf Message - Your Private Message

  • Unique Keyboard - Fancy Fonts & Free Emoticons

  • Tangram App Lock

  • Direct Messenger

  • Part Message

  • Paper Doc Scanner

  • Blue Scanner

  • Private SMS

  • One Sentence Translator - Multifunctional Translator

  • Style Photo Collage

  • Hummingbird PDF Converter - Photo to PDF

  • All Good PDF Scanner  ಜೋಕರ್ ಮಾಲ್ವೇರ್ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ವೈರಸ್​ನಿಂದ ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯಲು ಸಾಧ್ಯವಿದೆ. ಇದರ ಮೂಲಕ ನಿಮ್ಮ ಕಾಂಟ್ಯಾಕ್ಟ್​ ಲೀಸ್ಟ್​, ಎಸ್​ಎಂಎಸ್​, ಡಿವೈಸ್​ ಮಾಹಿತಿ ಮುಂತಾದವುಗಳನ್ನು ಕದಿಯುವ ಸಾಧ್ಯತೆಯಿರುತ್ತದೆ. ಹೀಗಾಗಿ, ಇಂತಹ ನಕಲಿ ಆ್ಯಪ್​ಗಳ ಬಗ್ಗೆ ಎಚ್ಚರದಿಂದಿರುವುದು ಒಳಿತು.
  Published by:Sushma Chakre
  First published: