ಆಂಡ್ರಾಯ್ಡ್ (Android) ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ (Mobile Operating System) ಗೂಗಲ್ ಪ್ಲೇ ಸ್ಟೋರ್ (Google Play Store) ಸರ್ವರ್‌ನಲ್ಲಿ ಸಮಸ್ಯೆ ಕಂಡುಬಂದಿದ್ದು,ಇಂದು ಬೆಳಿಗ್ಗೆಯಿಂದ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಓಪನ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ಟ್ವಿಟರ್ ಸೇರಿ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ದೂರುಗಳು ಕೇಳಿ ಬರುತ್ತಿವೆ.
ಬಳಕೆದಾರರಿಗೆ ಕೈಕೊಟ್ಟ ಗೂಗಲ್ ಪ್ಲೇ ಸ್ಟೋರ್
ಹೌದು, ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ಕೈ ಕೊಟ್ಟಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಅಪ್ಲಿಕೇಶನ್ ಸ್ಟೋರ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಬಳಕೆದಾರರು ದೂರುತ್ತಿದ್ದಾರೆ.
ಅದರಲ್ಲಿ ಕೆಲವರು ಸೇವೆಗಳ ನಿಲುಗಡೆಗಳನ್ನು ಗುರುತಿಸುವ ವೇದಿಕೆಯಾದ ಡೌನ್‌ಡೆಕ್ಟರ್‌ನಲ್ಲೂ ಸಮಸ್ಯೆಯನ್ನು ಎದುರಿಸುತ್ತಿದ್ದಾಗಿ ವರದಿಗಳು ಕೇಳಿ ಬರುತ್ತಿವೆ.
ಜನಪ್ರಿಯ ಅಪ್ಲಿಕೇಷನ್
ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಈ ಗೂಗಲ್ ಪ್ಲೇ ಸ್ಟೋರ್ ಎಂಬುವುದು ಪ್ರಮುಖವಾದ ತಾಣವಾಗಿದೆ. ಯಾವುದೇ ಹೊಸ ಮತ್ತು ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು ಅಥವಾ ಇನ್‌ಸ್ಟಾಲ್ ಮಾಡಬೇಕು ಅಂದರೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ವೇದಿಕೆ ಅಗತ್ಯವಾಗಿ ಬೇಕು.
ಇದನ್ನೂ ಓದಿ: ಈ ರೀಚಾರ್ಜ್ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!
ಆಂಡ್ರಾಯ್ಡ್ ಫೋನ್‌ಗಳಲ್ಲಿ ಫ್ರೀ ಇನ್‌ಸ್ಟಾಲ್ ಆಗಿರುವ ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಸ್ಮಾರ್ಟ್‌ಫೋನ್‌ಗಳ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ.
ಗೂಗಲ್ ಪ್ಲೇ ಸ್ಟೋರ್ ಸರ್ವರ್ ಡೌನ್, ಬಳಕೆದಾರರಿಂದ ದೂರು
ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಗೂಗಲ್‌ನ ಅಪ್ಲಿಕೇಷನ್ ಅದ್ಯಾಕೋ ಬಳಕೆದಾರರ ಜೊತೆ ಮುನಿಸಿಕೊಂಡಂತಿದೆ. ಬಳಕೆದಾರರು ಆ್ಯಪ್ ಅನ್ನು ಪ್ರವೇಶಿಸಲಾಗಲಿ, ತೆರೆಯಲಾಗಲಿ, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕಾಗಲಿ ಹೆಣಗಾಡುತ್ತಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. ಈ ಬಗ್ಗೆ ಬಳಕೆದಾರರು ಕೂಡ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಏನೋ ಒಂದು ಸರಿ ಇಲ್ಲ ಎಂದು ದೂರು ನೀಡುತ್ತಿದ್ದಾರೆ.
ಬಳಕೆದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೋದಾಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದೆ. ಫೋನ್‌ನದ್ದೇ ಏನೋ ಸಮಸ್ಯೆ ಎಂದು ಫೋನ್ ರೀಸ್ಟಾರ್ಟ್ ಮಾಡಿದೆ. ಆದರೆ ಪ್ರಯೋಜನವಾಗಿಲ್ಲ. ನಂತರ ಟ್ವಿಟರ್‌ನಲ್ಲಿ ಹಲವರು ಈ ಬಗ್ಗೆ ಮಾಹಿತಿ ಹಂಚಿಕೊಂಡಾಗ ಪ್ಲೇ ಸ್ಟೋರ್ ಸರ್ವರ್ ಡೌನ್ ಆಗಿರುವ ಬಗ್ಗೆ ತಿಳಿಯಿತು ಎಂದು ಹಂಚಿಕೊಂಡಿದ್ದಾರೆ ಬಳಕೆದಾರರು.
ಫೋಟೋ ಹಂಚಿಕೊಂಡ ಬಳಕೆದಾರರು
ಇಂದು ಬೆಳಿಗ್ಗೆ (ಏಪ್ರಿಲ್ 25) ಯಿಂದ, ಸಾವಿರಾರು ಬಳಕೆದಾರರು ತಮ್ಮ Android ಸಾಧನಗಳಲ್ಲಿ ಅಪ್ಲಿಕೇಶನ್‌ಗಳನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.
ಹಲವು ಬಳಕೆದಾರರು ಅಪ್ಲಿಕೇಶನ್ ತೆರೆದಾಗ ಕಂಡುಬಂದ ಸೂಚನೆಯನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಅದರ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪ್ಲೇ ಸ್ಟೋರ್‌ನಲ್ಲಿ ಕಂಡುಬಂದಿರುವ ಈ ಸಮಸ್ಯೆ ಒಬ್ಬೊಬ್ಬ ಬಳಕೆದಾರರಿಗೆ ಒಂದೊಂದು ರೀತಿ ಕಂಡುಬಂದಿದೆ. ಕೆಲವು ಬಳಕೆದಾರರು ಯಾವುದೇ ಸಮಸ್ಯೆಯಿಲ್ಲದೆ ಆ್ಯಪ್ ಅನ್ನು ಪ್ರವೇಶಿಸಬಹುದಾದರೆ, ಇತರರು ಮೊಬೈಲ್ ಮತ್ತು ವೆಬ್ ಬ್ರೌಸರ್‌ಗಳಲ್ಲಿ ಪ್ಲೇ ಸ್ಟೋರ್ ಅನ್ನು ಪ್ರವೇಶಿಸುವಲ್ಲಿ ಸಮಸ್ಯೆಯನ್ನು ಹೊಂದಿದ್ದಾರೆ.
ಅಂತೆಯೇ, ಕೆಲವು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನ ಹೋಮ್ ಪೇಜನ್ನೂ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕೆಲ ಬಳಕೆದಾರರು ಫೋನ್ ರೀಸ್ಟಾರ್ಟ್ ಮಾಡಿದ ಮೇಲೆ ಗೂಗಲ್ ಪ್ಲೇ ಸ್ಟೋರ್ ಕೆಲಸ ಮಾಡುತ್ತಿದೆ ಎಂದು ಸಹ ಹೇಳಿಕೊಂಡಿದ್ದಾರೆ. ಆದರೆ ಎಲ್ಲಾ ಬಳಕೆದಾರರಿಗೆ ಈ ಟ್ರಿಕ್ ಕೆಲಸ ಮಾಡಿಲ್ಲ.
ಸರ್ವರ್ ಡೌನ್ ಬಗ್ಗೆ ಏನು ಹೇಳಿದೆ ಕಂಪನಿ?
ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಬಳಕೆದಾರರು ಟ್ವಿಟರ್‌ನಲ್ಲಿ ಸ್ಥಗಿತದ ಬಗ್ಗೆ ವರದಿ ಮಾಡಿದ್ದಾರೆ. ಬಳಕೆದಾರರ ದೂರಿಗೆ ಕಂಪನಿ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಮತ್ತು ಸ್ಥಗಿತದ ಹಿಂದಿನ ಯಾವುದೇ ಕಾರಣವನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಬಳಕೆದಾರರು ಈ ಸಮಸ್ಯೆಯನ್ನು ಸರಿಮಾಡಿ ಎಂದು ಗೂಗಲ್ ಮತ್ತು ಪ್ಲೇಸ್ಟೋರ್ ಕಂಪನಿಯನ್ನು ಟ್ಯಾಗ್ ಮಾಡಿ ಕೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ