Bans 8 Lakh Apps: 8 ಲಕ್ಷಕ್ಕೂ ಅಧಿಕ ಅಪಾಯಕಾರಿ ಆ್ಯಪ್​​ಗಳು ಬ್ಯಾನ್! ನಿಮ್ಮ ಫೋನ್​​ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ!

Bans 8 Lakh Apps: ಗೂಗಲ್​ ಪ್ಲೇ ಸ್ಟೋರ್​ ನಿಂದ  ಡಿಲೀಟ್​ ಮಾಡುವ ಮೊದಲೇ ಹಲವಾರು ಜನರು ಕೆಲವು ಆ್ಯಪ್​ಗಳನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 9 ಶತಕೋಟಿ ಬಾರಿ ಡೌನ್​ಲೋಡ್​ ಕಂಡಿದೆ ಎಂದು ಪತ್ತೆಹಚ್ಚಲಾಗಿದೆ.

(Photo: Google)

(Photo: Google)

  • Share this:
    ಗೂಗಲ್​ (Google) ಹಾಗೂ ಆ್ಯಪಲ್​ (Apple) ತಮ್ಮ ಆ್ಯಪ್ ಸ್ಟೋರ್​ನಿಂದ (App Store) ಲಕ್ಷಾಂತರ ಆ್ಯಪ್​ಗಳನ್ನ ಬ್ಯಾನ್​ ಮಾಡಿದೆ. ಆ್ಯಂಡ್ರಾಯ್ಡ್​ ಮತ್ತು  ಐಒಎಸ್​ ಬಳಕೆದಾರರ ಖಾಸಗಿ ತನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಆ್ಯಪ್​ಗಳನ್ನು ನಿಷೇಧಿಸಿದೆ. ಸ್ಮಾರ್ಟ್​ಫೋನ್ (Smartphone)​ ಮತ್ತು ಐಫೋನ್ (Iphone) ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್ (Google Play Store)​​ ಮತ್ತು ಆ್ಯಪಲ್​ ಸ್ಟೋರ್​ನಿಂದ (Apple Store) ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದರು. ಆದರೆ ಇದರಲ್ಲಿ ಖಾಸಗಿ ತನಕ್ಕೆ ಧಕ್ಕೆ ತರುವ ಹಲವು ಆ್ಯಪ್​ಗಳಿರುವು ಪತ್ತೆಯಾಗಿದೆ. ಇದನ್ನು ಗುರುತಿಸಿ ಡಿಲೀಟ್​ (Delete) ಮಾಡಲಾಗಿದೆ ಎಂದು ಪಿಕ್ಸಲೇಟ್​ನ ಎಚ್​1 2021 ಡಿಲಿಸ್ಟೆಡ್​​ ಮೊಬೈಲ್​ ಆ್ಯಪ್ಸ್​​ ವರದಿಯನ್ನ ಬಹಿರಂಗಪಡಿಸಿದೆ.

    9 ಶತಕೋಟಿ ಡೌನ್​ಲೋಡ್​

    ಗೂಗಲ್​ ಪ್ಲೇ ಸ್ಟೋರ್​ ನಿಂದ  ಡಿಲೀಟ್​ ಮಾಡುವ ಮೊದಲೇ ಹಲವಾರು ಜನರು ಕೆಲವು ಆ್ಯಪ್​ಗಳನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 9 ಶತಕೋಟಿ ಬಾರಿ ಡೌನ್​ಲೋಡ್ (Download)​ ಕಂಡಿದೆ ಎಂದು ಪತ್ತೆಹಚ್ಚಲಾಗಿದೆ.

    ಕ್ಯಾಲಿಫೋರ್ನಿರ್ಯಾದ ಪಿಕ್ಸಾಲೆಟ್​​ ಪ್ರಕಾರ, ಈ ಆ್ಯಪ್​​ಗಳನ್ನು ಆ್ಯಪಲ್​ ಆ್ಯಪ್​ ಸ್ಟೋರ್​​ನಿಂದ ತೆಗೆದು ಹಾಕುವ ಮೊದಲು 21 ಮಿಲಿಯನ್​ ಗ್ರಾಹಕರ ವಿಮರ್ಶೆ ಮತ್ತು ರೇಟಿಂಗ್​ ಹೊಂದಿದ್ದವು. ಆದರೆ ಈ ಆ್ಯಪ್​ಗಳು ಅಪಾಯಕಾರಿ ಎಂದು ತಿಳಿದು ಬ್ಯಾನ್​ ಮಾಡಿದರು ಲಕ್ಷಾಂತರ ಜನರು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಈಗಾಗಲೇ ಡಿಲೀಟ್​ ಮಾಡಲಾಗಿರುವ 8 ಕೋಟಿಯಷ್ಟು ಮೊಬೈಲ್​ ಆ್ಯಪ್​​ಗಳು  ಮಕ್ಕಳನ್ನು ಟಾರ್ಗೆಟ್​ ಮಾಡುತ್ತಿದ್ದವು ಎಂದು ತಿಳಿದುಬಂದಿದೆ. ಅಂದರೆ 1 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗುರಿಯಾಗಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ಶೇ 25ರಷ್ಟು ಪ್ಲೇ ಸ್ಟೋರ್​ ಆ್ಯಪ್​​​ಗಳು ಮತ್ತು ಶೇ 59ರಷ್ಟು ಆ್ಯಪ್​ ಸ್ಟೋರ್​ ಆ್ಯಪ್​ಗಳು ಗೌಪ್ಯತೆ ನೀತಿಯನ್ನು ಹೊಂದಿಲ್ಲ.

    ರಷ್ಯಾದ ಗೂಗಲ್​ ಪ್ಲೇ ಸ್ಟೋರ್​​ನಿಂದ ಶೇ 26ರಷ್ಟು ಆ್ಯಪ್​​ಗಳನ್ನು ತೆಗೆದು ಹಾಕಲಾಗಿದೆ ಮತ್ತು 60 ಪ್ರತಿಶತದಷ್ಟು ಚೀನಿ ಆ್ಯಪ್​ ಸ್ಟೋರ್​ನಲ್ಲಿ ಪಟ್ಟಿ ಮಾಡಲಾಗಿದೆ.

    ಈಗಾಗಲೇ ಡಿಲೀಟ್​ ಮಾಡಲಾದ ಆ್ಯಪ್​ಗಳಲ್ಲಿ ಶೇ 66ರಷ್ಟು ರನ್​ಟೈಮ್​ ಎಂಬ ಅಪಾಯಕಾರಿ ಪರ್ಮಿಶನ್​ ಅನ್ನು ಹೊಂದಿದೆ.  ಈ ಅಪ್ಲಿಕೇಶನ್​ ಡೇಟಾಗೆ ಸುಲಭವಾಗಿ ಆಕ್ಸೆಸ್​​ ಪಡೆಯುತ್ತದೆ. ಸಿಸ್ಟಮ್​ ಮತ್ತು ಇತರ ಅಪ್ಲಿಕೇಶನ್​ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಈಗಾಗಲೇ ನಿಷೇಧ ಗೊಂಡಿರುವ ಆ್ಯಪ್​​ಗಳು ಕ್ಯಾಮೆರದ ಆಕ್ಸೆಸ್​ ಕೂಡ ಪಡೆದಿದ್ದವು ಎಂದು ತಿಳಿದು ಬಂದಿದೆ.

    ಇದನ್ನು ಓದಿ ⇒ Audi e-tron GT: 0-100 ಕಿ.ಮೀ ಕ್ರಮಿಸಲು ಕೇವಲ 3.3 ಸೆಕೆಂಡು ಸಾಕು! ಇದು ಹೊಸ ಎಲೆಕ್ಟ್ರಿಕ್​ ಆಡಿ e-tron GT ಕಾರಿನ ವಿಶೇಷತೆ

    ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪ್​ ಸ್ಟೋರ್​​​ನಲ್ಲಿ ಆಗಾಗ ನಕಲಿ ಆ್ಯಪ್​ಗಳು ಗೋಚರಿಸುತ್ತಿರುತ್ತವೆ. ಬಳಕೆದಾರನಿಗೆ ಉಪಟಳ ನೀಡುವ ಮತ್ತು ಖಾಸಗಿ ಮಾಹಿತಿ ಎಗರಿಸುವ ಇಂತಹ ಅನೇಕ ಆ್ಯಪ್​ಗಳು ಆಗಾಗಾ ಘೋಚರಿಸುತ್ತಿರುತ್ತದೆ. ಆದರೆ ಈ ಆ್ಯಪ್​ಗಳನ್ನು ಗೂಗಲ್​ ಮತ್ತು ಆ್ಯಪಲ್ ಸ್ಟೋರ್​ ಪತ್ತೆ ಹಚ್ಚಿ ಡಿಲೀಟ್​ ಮಾಡುತ್ತದೆ.

    ಆ್ಯಪ್ ಬಳಕೆದಾರಿಗೆ ತೊಂದರೆ ನೀಡುವ ಅಥವಾ ವೈಯ್ಯಕ್ತಿಕ ಮಾಹಿತಿ ಎಗರಿಸುವ ಹಲವಾರು ಆ್ಯಪ್​ಗಳು ನಿಷೇಧಗೊಂಡಿವೆ. ಇದೀಗ 8 ಲಕ್ಷದಷ್ಟು ಆ್ಯಪ್​ಗಳನ್ನು ಕಿತ್ತೆಸೆದು ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸಿದೆ. ಒಟ್ಟಿನಲ್ಲಿ 8 ಲಕ್ಷದಷ್ಟು ಅಪಾಯಕಾರಿ ಆ್ಯಪ್​ಗಳು ಡಿಲೀಟ್​ ಆಗಿರುವುದು ಬಳಕೆದಾರರ ಅಚ್ಚರಿಗೆ ಕಾರಣವಾಗಿದೆ.
    Published by:Harshith AS
    First published: