Google Pixel 6 Series: ನಿಮ್ಮ ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ಅಳೆಯುತ್ತೆ ಈ ಸ್ಮಾರ್ಟ್​ಫೋನ್​!

Google Pixel 6 Series Smartphone: ಸ್ಮಾರ್ಟ್‌ಫೋನ್ ನ ಕ್ಯಾಮೆರಾವನ್ನು ಬಳಸಿಕೊಂಡು ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ಅಳೆಯಲು ಸಾಧ್ಯವಾಗಿಸುವ ಹೊಸ ವೈಶಿಷ್ಟ್ಯವನ್ನು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಗಾಗಿ ಕಂಪನಿಯು ವಿಶೇಷವಾಗಿ ಹೊರ ತರುತ್ತಿದೆ.

ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸೀರೀಸ್

ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಸೀರೀಸ್

  • Share this:
    ಈಗಂತೂ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಎಂದರೆ ನಾವು ಉಸಿರಾಡಿದರೂ ಅದರ ಲೆಕ್ಕವನ್ನೂ ಸಹ ಇಡಬಲ್ಲಂತಹ ಸಾಧನಗಳು ಬಂದಿವೆ.

    ಈಗಾಗಲೇ ನಾವೆಲ್ಲಾ ನೋಡಿರುವ ಹಾಗೆ ಪ್ರತಿದಿನ ನಾವು ಎಷ್ಟು ಹೆಜ್ಜೆ ನಡೆದಿದ್ದೇವೆ ಎಂದು ಲೆಕ್ಕವಿಟ್ಟು, ನಮಗೆ ದಿನದ ಕೊನೆಯಲ್ಲಿ ನಮ್ಮ ದೇಹದ ತೂಕಕ್ಕೆ ನಾವು ಪ್ರತಿದಿನ ಎಷ್ಟು ಹೆಜ್ಜೆ ನಡೆದರೆ ಒಳ್ಳೆಯದು ಎಂದು ತಿಳಿಸುವಂತಹ ಸ್ಮಾರ್ಟ್‌ವಾಚ್‌ಗಳು (Smartwatch) ಬಂದಿರುವುದು ನಮಗೆಲ್ಲಾ ಗೊತ್ತೇ ಇದೆ ಮತ್ತು ಬಹುತೇಕರು ಅದನ್ನು ಬಳಸುತ್ತಾ ಇರುವುದನ್ನು ಸಹ ನಾವು ಕಾಣಬಹುದು.

    ಈಗ ಗೂಗಲ್ ಪಿಕ್ಸೆಲ್ 6 (Google Pixel 6 Series) ಮತ್ತು ಪಿಕ್ಸೆಲ್ 6 ಪ್ರೊ ಸೀರೀಸ್ (Pixel 6 Series Smartphone) ಸ್ಮಾರ್ಟ್‌ಫೋನ್ ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್ ಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ, ಗೂಗಲ್ ಪಿಕ್ಸೆಲ್ 6 ಸೀರೀಸ್ ಇನ್ನಷ್ಟು ಸುಧಾರಿತ ವೈಶಿಷ್ಟ್ಯವನ್ನು ತನ್ನ ಗ್ರಾಹಕರಿಗಾಗಿ ಹೊರ ತರುತ್ತಿದೆ.

    ಹೃದಯ ಬಡಿತ ಮತ್ತು ಉಸಿರಾಟದ ದರ ತಿಳಿಸುತ್ತೆ!

    ಸ್ಮಾರ್ಟ್‌ಫೋನ್ ನ ಕ್ಯಾಮೆರಾವನ್ನು ಬಳಸಿಕೊಂಡು ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ಅಳೆಯಲು ಸಾಧ್ಯವಾಗಿಸುವ ಹೊಸ ವೈಶಿಷ್ಟ್ಯವನ್ನು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಗಾಗಿ ಕಂಪನಿಯು ವಿಶೇಷವಾಗಿ ಹೊರ ತರುತ್ತಿದೆ.

    ಈ ಅಭಿವೃದ್ಧಿಯನ್ನು ಮೊದಲು 9 ಟು 5 ಗೂಗಲ್ ವರದಿ ಮಾಡಿತು ಮತ್ತು ಪ್ರಸ್ತುತ ಪಿಕ್ಸೆಲ್ 6 ಸೀರೀಸ್ ಬಳಕೆದಾರರಿಗೆ "ಆರಂಭಿಕ ಪ್ರವೇಶ"ದಲ್ಲಿದೆ. ವೈಶಿಷ್ಟ್ಯಗಳನ್ನು ಉತ್ತಮವಾಗಿ ಟ್ಯೂನ್ ಮಾಡಲಾಗುತ್ತಿದೆ ಮತ್ತು ಅದನ್ನು ತೆಗೆದು ಹಾಕಬಹುದು ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

    ಗೂಗಲ್ ಫಿಟ್

    ಈ ವೈಶಿಷ್ಟ್ಯವು ಗೂಗಲ್ ಫಿಟ್ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ. ಗೂಗಲ್ ಫಿಟ್ ಅಪ್ಲಿಕೇಶನ್‌ನಲ್ಲಿ ಹೋಮ್ ಟ್ಯಾಬ್ ನ ಕೆಳಭಾಗದಲ್ಲಿ ತೋರಿಸುವ ಹೃದಯ ಮತ್ತು ಉಸಿರಾಟದ ಟ್ರ್ಯಾಕಿಂಗ್ ವೈಶಿಷ್ಟ್ಯಗಳಿಗೆ ಹೊಸ ಕಾರ್ಡ್‌ಗಳನ್ನು ಸೇರಿಸಲಾಗಿದೆ.

    ಇದನ್ನು ಓದಿ:PF balance online: PF ಖಾತೆಗಳಿಗೆ ₹6.47 ಕೋಟಿ ದುಡ್ಡು ಹಾಕಲಾಗಿದೆ, ನಿಮ್ಮ ಅಕೌಂಟ್​​ಗೆ ಎಷ್ಟು ಹಣ ಬಂದಿದೆ ಚೆಕ್ ಮಾಡಿ

    ಬಳಕೆದಾರರು ಗೂಗಲ್ ಫಿಟ್ ಅಪ್ಲಿಕೇಶನ್‌ನಲ್ಲಿ ವೈಟಲ್ಸ್ ಬ್ರೌಸ್ ಮಾಡುವ ಮೂಲಕ ಹೊಸ ವೈಶಿಷ್ಟ್ಯವನ್ನು ಪ್ರವೇಶಿಸಬಹುದು. ಉಸಿರಾಟದ ದರವನ್ನು ಅಳೆಯಲು, ಪಿಕ್ಸೆಲ್ 6 ಅಥವಾ ಪಿಕ್ಸೆಲ್ 6 ಪ್ರೊ ಬಳಕೆದಾರರು ಸೆಲ್ಫೀ ಕ್ಯಾಮೆರಾದಿಂದ ತಮ್ಮ ತಲೆ ಮತ್ತು ಮೇಲ್ಭಾಗದ ಶಿರವನ್ನು ಇರಿಸುವುದು ಮತ್ತು ಸಾಮಾನ್ಯವಾಗಿ ಉಸಿರಾಡುವುದು. ಬಳಕೆದಾರರು ತಮ್ಮ ಬೆರಳನ್ನು ಹಿಂಭಾಗದ ಕ್ಯಾಮೆರಾ ಲೆನ್ಸ್ ಮೇಲೆ ಇಡುವ ಮೂಲಕ ತಮ್ಮ ಹೃದಯ ಬಡಿತವನ್ನು ಅಳೆಯಬಹುದು.



    ಪಿಕ್ಸೆಲ್ 6 ಸೀರಿಸ್ ಸ್ಮಾರ್ಟ್‌ಫೋನ್ ಗಳಲ್ಲಿ ಗೂಗಲ್ ಹೊಸ ಅಡಾಪ್ಟಿವ್ ಸೌಂಡ್ ವೈಶಿಷ್ಟ್ಯವನ್ನು ಹೊರ ತಂದ ಕೆಲವೇ ದಿನಗಳಲ್ಲಿ ಹೊಸ ವೈಶಿಷ್ಟ್ಯಗಳು ಬಂದಿವೆ. ಹೊಸ ವೈಶಿಷ್ಟ್ಯವು ನಿಮ್ಮ ಪರಿಸರಕ್ಕೆ ಅನುಗುಣವಾಗಿ ಈಕ್ವಲೈಜರ್ ಸೆಟ್ಟಿಂಗ್‌ಗಳನ್ನು ಸರಿ ಹೊಂದಿಸುವ ಮೂಲಕ ಸ್ಪೀಕರ್ ನ ಧ್ವನಿ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ.

    ಇದನ್ನು ಓದಿ:Airtel Prepaid Plan: ಈ ಪ್ರಿಪೇಯ್ಡ್ ಪ್ಲಾನ್ ಅಳವಡಿಸಿಕೊಂಡರೆ 500MB ಡೇಟಾ ಉಚಿತ!

    ಪಿಕ್ಸೆಲ್ 6 ಸೀರೀಸ್ ನಲ್ಲಿ ಫೇಸ್ ಅನ್ ಲಾಕ್ ತರುವ ಕೆಲಸವನ್ನೂ ಗೂಗಲ್ ಮಾಡುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯವು ಆರಂಭದಲ್ಲಿ ಮೊದಲನೆಯ ದಿನದಿಂದಲೇ ಲಭ್ಯವಿರುತ್ತದೆ. ಆದರೆ ವಿದ್ಯುತ್ ಬಳಕೆಯ ಸಮಸ್ಯೆಗಳಿಂದಾಗಿ ಗೂಗಲ್ ಅದನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿತು ಎಂದು ಹೇಳಲಾಗುತ್ತಿದೆ.
    Published by:Harshith AS
    First published: