Google Pixel: ಮಾರುಕಟ್ಟೆಯತ್ತ ಮುಖ ಮಾಡಿದ ಪಿಕ್ಸೆಲ್​ ಸರಣಿ ಸ್ಮಾರ್ಟ್​ಫೋನ್​ಗಳು; ಅ. 15 ರಂದು ಬಿಡುಗಡೆ ಖಚಿತ

ಮಾರುಕಟ್ಟೆಗೆ ಪರಿಚಯಿಸುತ್ತಿರುವ ಪಿಕ್ಸೆಲ್​ 4 ಸ್ಮಾರ್ಟ್​ಫೋನ್​ 5.7 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್​ಕ್ಯಾಂ ಸ್ನಾಪ್​ಡ್ರ್ಯಾಗನ್​ನಿಂದ ಕಾರ್ಯ ನಿರ್ವಹಿಸುತ್ತಿದೆ.

news18-kannada
Updated:September 17, 2019, 2:36 PM IST
Google Pixel: ಮಾರುಕಟ್ಟೆಯತ್ತ ಮುಖ ಮಾಡಿದ ಪಿಕ್ಸೆಲ್​ ಸರಣಿ ಸ್ಮಾರ್ಟ್​ಫೋನ್​ಗಳು; ಅ. 15 ರಂದು ಬಿಡುಗಡೆ ಖಚಿತ
ಗೂಗಲ್ ಪಿಕ್ಸೆಲ್
news18-kannada
Updated: September 17, 2019, 2:36 PM IST
ಗೂಗಲ್​ ಸಿದ್ಧ ಪಡಿಸಿರುವ ​ ಪಿಕ್ಸೆಲ್​4 ಮತ್ತು ಪಿಕ್ಸೆಲ್​ 4 XL​​ ಸರಣಿ ಸ್ಮಾರ್ಟ್​ಫೋನ್​ಗಳ ಬಿಡುಗಡೆಯ ದಿನಾಂಕವನ್ನು ನಿಗದಿ ಪಡಿಸಿದೆ. ಅಕ್ಟೋಬರ್​ 15 ರಂದು ನ್ಯೂಯಾರ್ಕ್​ ನಗರದಲ್ಲಿ ಸರಣಿ ಸ್ಮಾರ್ಟ್​ಫೋನ್​ಗಳ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರಣಿ ಸ್ಮಾರ್ಟ್​ಫೋನ್​ಗಳ ಜೊತೆಗೆ ಪಿಕ್ಸೆಲ್​ಬುಕ್​ 2 ಮತ್ತು ಗೂಗಲ್​ ಹೋಮ್​ ಸ್ಮಾರ್ಟ್​ ಸ್ಪೀಕರ್​ ಬಿಡುಗಡೆ ಮಾಡಲಾಗುತ್ತಿದೆ.

ಪಿಕ್ಸೆಲ್​ 4 ಸ್ಮಾರ್ಟ್​ಫೋನ್

ಮಾರುಕಟ್ಟೆಗೆ ಪರಿಚಯಿಸುತ್ತಿರುವ ಪಿಕ್ಸೆಲ್​ 4 ಸ್ಮಾರ್ಟ್​ಫೋನ್​ 5.7 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್​ಕ್ಯಾಂ ಸ್ನಾಪ್​ಡ್ರ್ಯಾಗನ್​ನಿಂದ ಕಾರ್ಯ ನಿರ್ವಹಿಸುತ್ತಿದೆ. 6GB RAM ನೀಡಲಾಗಿದೆ. 8x​ ಜೂಮ್ ಹೊಂದಿರುವ ಕ್ಯಾಮೆರಾವನ್ನು ಆಳವಡಿಸಲಾಗಿದೆ. ಜೊತೆಗೆ ಮೋಷನ್​ ಫೋಕಸ್​ ಮೋಡ್​ ನೀಡಲಾಗಿದೆ. ಸ್ಮಾರ್ಟ್​ಫೋನ್​ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ 2,800mAh​ ಸಾಮರ್ಥ್ಯದಲ್ಲಿದೆ.

ಪಿಕ್ಸೆಲ್​ 4 XL​ ಸ್ಮಾರ್ಟ್​ಫೋನ್

ಪಿಕ್ಸೆಲ್​ 4 XL ಸ್ಮಾರ್ಟ್​ಪೋನ್​ 6.3 ಇಂಚಿನ ಡಿಸ್​​ಪ್ಲೇ ಹೊಂದಿದ್ದು, 3,700 mAh​​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ ಆ್ಯಂಡ್ರಾಯ್ಡ್​ 10 ಅ​ಪ್ಡೇಟ್​​ ವರ್ಷನ್​ನಲ್ಲಿ ಸಿಗಲಿದೆ.

ಇವೆರಡು ಸ್ಮಾರ್ಟ್​ಫೋನ್​ಗಳು ಕೋರಲ್​ ಬ್ಲೂ, ಜಸ್ಟ್​ ಬ್ಲಾಕ್​, ಲಾವಾ ರೆಡ್​, ಸ್ಯಾಂಡ್​ಸ್ಟೋನ್​ ವೈಟ್​ ಮತ್ತು ಸನ್​​ಸೈಶನ್​ ಹ್ಯೂ ಎಂಬ ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಅಕ್ಟೋಬರ್​ 15ರಂದು ಮಾರುಕಟ್ಟೆಗೆ ಕಾಲಿರಿಸುತ್ತಿರುವ ಪಿಕ್ಸಲ್​ ಸರಣಿ ಫೋನ್​ಗಳ ಬಿಡುಗಡೆ ಕಾರ್ಯಕ್ರಮವನ್ನು ಯ್ಯೂಟೂಬ್​ ಚಾನೆಲ್​ನಲ್ಲಿ ಲೈವ್​ ಆಗಿ ಪ್ರಸಾರ ಮಾಡಲಿದೆ.  ​
Loading...

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...