ಗೂಗಲ್​ ಪಿಕ್ಸಲ್​ ಹೊಸ ಚಿತ್ರಗಳು ಸೋರಿಕೆ


Updated:September 1, 2018, 5:43 PM IST
ಗೂಗಲ್​ ಪಿಕ್ಸಲ್​ ಹೊಸ ಚಿತ್ರಗಳು ಸೋರಿಕೆ

Updated: September 1, 2018, 5:43 PM IST
ವಾರದ ಹಿಂದೆಯಷ್ಟೇ ಸೋರಿಕೆಯಾಗಿದ್ದ ಗೂಗಲ್​ನವರ ನೂತನ ಪಿಕ್ಸೆಲ್​ XL ಸ್ಮಾರ್ಟ್​ಫೋನ್​ ಚಿತ್ರವನ್ನು ಟ್ವಿಟರ್​ನಲ್ಲಿ ನೋಡಿದ್ದೆವು, ಇದೀಗ ಮತ್ತೊಮ್ಮೆ ಸೋರಿಕೆಯಾಗಿರುವ ಚಿತ್ರದಲ್ಲಿ ಗೂಗಲ್​ ಪಿಕ್ಸೆಲ್​ 3 XL ಮುಂಭಾಗದಲ್ಲಿ ಡ್ಯುಯಲ್​ ಕ್ಯಾಮೆರಾ ಹೊಂದಿದ್ದು ಹೊಸ ಸೆನ್ಸೇಷನ್​ ಹುಟ್ಟುಹಾಕಿದೆ.

ಕೆಲ ದಿನಗಳ ಹಿಂದೆ ಸೋರಿಕೆಯಾದ ಚಿತ್ರಗಳ ಪ್ರಕಾರ ಮೊಬೈಲ್​ ಕೇವಲ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಹೊಂದಿರುವ ಮಾಹಿತಿ ಕುರಿತು ಹೇಳಲಾಗಿತ್ತು, ಇದೀಗ 3 XL ಮೊಬೈಲ್​ ಈ ಹಿಂದೆ ಬಿಡುಗಡೆಯಾಗಿದ್ದ ಎಲ್ಲಾ ಪಿಕ್ಸೆಲ್​ ಶ್ರೇಣಿಯ ಮೊಬೈಲ್​ಗಿಂತಲೂ ದೊಡ್ಡ ಡಿಸ್​ಪ್ಲೇ ಹೊಂದಿದೆ. ಇದು ಮಾತ್ರವಲ್ಲದೇ ಈ ಮೊಬೈಲ್​ನಲ್ಲಿ ಮುಂಭಾಗದಲ್ಲಿ ಎರಡು ಕ್ಯಾಮೆರಾ ಇರುವುದು ಕೂಡಾ ಚಿತ್ರದಲ್ಲಿ ಗುರುತಿಸಬಹುದು.

ಇತ್ತೀಚೆಗೆ ರೆಡ್​ ಇಟ್ ಗೂಗಲ್​ ಪಿಕ್ಸಲ್​ನ ಹೊಸ ಚಿತ್ರಗಳನ್ನು ಲೀಕ್​ ಮಾಡಿದ್ದು, ಮಾಹಿತಿಗಳ ಪ್ರಕಾರ ಈ ಚಿತ್ರಗಳು ಗೂಗಲ್​ ಪಿಕ್ಸಲ್​ 3ಗೆ ಹೋಲುತ್ತಿವೆ. ಈ ಚಿತ್ರಗಳ ಪ್ರಕಾರ ಸ್ಮಾರ್ಟ್​ಫೋನ್​ 5.5 ಇಂಚಿನ ಡಿಸ್​ಪ್ಲೇ ಹೊಂದಿದೆ. ಮುಂಭಾಗದಲ್ಲಿ ಡ್ಯುಯಲ್​ ಕ್ಯಾಮೆರಾ, ಹಿಂಭಾಗದಲ್ಲಿ ಈ ಹಿಂದೆ ಬಿಡುಗಡೆಯಾಗಿರುವ ಮೊಬೈಲ್​ಗಳ ಮಾದರಿಯಲ್ಲೇ ಎರಡು ಬಣ್ಣದ ಪ್ಯಾನಲ್​ ಬಳಕೆ ಮಾಡಲಾಗಿದೆ.

ಈಗಿರುವ ಮೊಬೈಲ್​ ಟ್ರೆಂಡ್​ ಮಾದರಿಯಲ್ಲೇ ಹಿಂಭಾಗದಲ್ಲಿ ಡ್ಯುಯಲ್​ ಕ್ಯಾಮೆರಾವನ್ನು ನಿರೀಕ್ಷಿಸುವವರಿಗೆ ಮಾತ್ರಾ ಪಿಕ್ಸೆಲ್​ 3 ಹಾಗೂ 3 XL ಭಾರೀ ನಿರಾಶೆಯನ್ನು ಮೂಡಿಸುವುದರಲ್ಲಿ ಏನೂ ಸಂಶಯವಿಲ್ಲ. ಏಕೆಂದರೆ ಈ ಮೊಬೈಲ್​ಗಳಿಗೆ ಹಿಂಭಾಗದಲ್ಲಿ ಡೀಪ್​ ಡೆಪ್ತ್​​ ಆಯ್ಕೆಯ ಯಾವುದೇ ಸೆಕೆಂಡರ್​ ಕ್ಯಾಮೆರಾ ಬಳಕೆ ಮಾಡಿಲ್ಲ.

ಇನ್ನು ದಿ ಪೋಸ್ಟ್​ ವರದಿಯೂ ಕೂಡಾ ಇದೇ ಮಾದರಿಯ ಚಿತ್ರವನ್ನು ಹೊಂದಿದ್ದು, ಪೋಸ್ಟ್​ ವರದಿ ಪ್ರಕಾರ ಪಿಕ್ಸೆಲ್​ 3 XL ಸ್ಮಾರ್ಟ್​ಫೋನ್​ 5.5 ಫುಲ್​ಹೆಚ್​ಡಿ ಪ್ಲಸ್​ ಡಿಸ್​ಪ್ಲೇ ಸ್ನಾಪ್​ಡ್ರಾಗನ್​ 845 ಎಸ್​ಒಸಿ ಪ್ರೊಸೆಸರ್​ 4ಜಿಬಿ RAM ಹೊಂದಿದೆ. ಅಲ್ಲದೇ ಈ ಮೊಬೈಲ್​ ಆ್ಯಂಡ್ರಾಯ್ಡ್​ ಪಿ ಆಪರೇಟಿಂಗ್​ ಸಿಸ್ಟಂ ಮೂಲಕ ಕಾರ್ಯನಿರ್ವಹಿಸಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ