HOME » NEWS » Tech » GOOGLE PHOTOS WILL END FREE UNLIMITED STORAGE IN JUNE F1ST 2021 STG HG

ಗೂಗಲ್ ಫೋಟೋಸ್​​ನಲ್ಲಿ ಉಚಿತವಾಗಿ ಫೋಟೋ ಅಪ್ಲೋಡ್ ಮಾಡುವ ಸೌಲಭ್ಯ ಶೀಘ್ರದಲ್ಲೇ ಅಂತ್ಯ: ಅತ್ಯುತ್ತಮ ಪರ್ಯಾಯ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ

2021ರ ಜೂನ್ 1ರಿಂದ ಉಚಿತವಾಗಿ ಗೂಗಲ್ ಫೋಟೋಸ್ ನಲ್ಲಿ ಫೋಟೋ ಅಪ್ಲೋಡ್ ಮಾಡುವಂತಿಲ್ಲ. ಹೌದು, ಬಳಕೆದಾರರಿಗೆ ಉಚಿತವಾಗಿ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವಿಡಿಯೋಗಳ ಅಪ್ಲೋಡ್ ಮಾಡುವ ಸೌಲಭ್ಯವನ್ನು ಗೂಗಲ್ ಫೋಟೋಸ್ ಶೀಘ್ರದಲ್ಲಿಯೇ ತೆಗೆದುಹಾಕಲಿದೆ.

news18-kannada
Updated:March 1, 2021, 2:26 PM IST
ಗೂಗಲ್ ಫೋಟೋಸ್​​ನಲ್ಲಿ ಉಚಿತವಾಗಿ ಫೋಟೋ ಅಪ್ಲೋಡ್ ಮಾಡುವ ಸೌಲಭ್ಯ ಶೀಘ್ರದಲ್ಲೇ ಅಂತ್ಯ: ಅತ್ಯುತ್ತಮ ಪರ್ಯಾಯ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ
Google Photos
  • Share this:
ಗೂಗಲ್ ಫೋಟೋಸ್ ನಲ್ಲಿ ಉಚಿತವಾಗಿ ಫೋಟೋ ಅಪ್ಲೋಡ್ ಮಾಡುವ ಸೌಲಭ್ಯ ಕೊನೆಗೊಳ್ಳಲಿದೆ. ಗೂಗಲ್ ಫೋಟೋಸ್ ನೀತಿಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, 2021ರ ಜೂನ್ 1ರಿಂದ ಉಚಿತವಾಗಿ ಗೂಗಲ್ ಫೋಟೋಸ್ ನಲ್ಲಿ ಫೋಟೋ ಅಪ್ಲೋಡ್ ಮಾಡುವಂತಿಲ್ಲ. ಹೌದು, ಬಳಕೆದಾರರಿಗೆ ಉಚಿತವಾಗಿ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವಿಡಿಯೋಗಳ ಅಪ್ಲೋಡ್ ಮಾಡುವ ಸೌಲಭ್ಯವನ್ನು ಗೂಗಲ್ ಫೋಟೋಸ್ ಶೀಘ್ರದಲ್ಲಿಯೇ ತೆಗೆದುಹಾಕಲಿದೆ.

ನಿಗದಿತ ದಿನಾಂಕದ ನಂತರ ಅಪ್ಲೋಡ್ ಮಾಡಲಾಗುವ ಅಧಿಕ ಗುಣಮಟ್ಟದ ಫೋಟೋಗಳನ್ನು ಗೂಗಲ್ ಸ್ಟೋರೇಜ್ ಕೋಟಾದಡಿಯಲ್ಲಿ ಪರಿಗಣಿಸಿ, ಜಿ-ಮೇಲ್ ಅಥವಾ ಗೂಗಲ್ ಡ್ರೈವ್ ಮಾದರಿಯಲ್ಲೇ ಗೂಗಲ್ ಫೋಟೋಸ್ ಸಹ ನಿಗದಿತ ಸಂಗ್ರಹ ಮಿತಿಯ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡಲಿದೆ. ಈಗಿನ ನೀತಿಯ ಪ್ರಕಾರ ಅಧಿಕ ಗುಣಮಟ್ಟದ, 16 MPಗೆ ಕಂಪ್ರೆಸ್ ಮಾಡಲಾಗಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ಅನಿಯಮಿತವಾಗಿ ಬ್ಯಾಕ್ ಅಪ್ ಮಾಡಬಹುದಾಗಿದೆ. ಮೂಲ ಫೋಟೋಗಳನ್ನು ಬ್ಯಾಕ್ ಅಪ್ ಗೆ ಈಗಾಗಲೇ  ಆಯ್ಕೆ ಮಾಡಿದ್ದಲ್ಲಿ ಗೂಗಲ್ ಸ್ಟೋರೇಜ್ ಮಿತಿಯಲ್ಲೇ ಅದನ್ನು ಪರಿಗಣಿಸಲಾಗುತ್ತದೆ.

ಹೊಸ ನಿಯಮಗಳ ಪ್ರಕಾರ ಬಳಕೆದಾರರಿಗೆ 15GB ವರೆಗೆ ಸಂಗ್ರಹ ಮಿತಿಯನ್ನು ನೀಡಲಾಗುತ್ತದೆ. ಹೆಚ್ಚು ಸ್ಟೋರೇಜ್ ಮಿತಿ ಅಗತ್ಯವಿದ್ದಲ್ಲಿ ಬಳಕೆದಾರರು ಗೂಗಲ್ ಒನ್ ನಿಂದ ಚಂದಾದಾರ ಯೋಜನೆ ಖರೀದಿಸಬೇಕಾಗುತ್ತದೆ. ಜೂನ್ 2021 ರವರೆಗೆ ಪ್ರಸ್ತುತ ಗ್ರಾಹಕರಿಗೆ ಹೊಸ ನಿಯಮಗಳಿಂದ ವಿನಾಯಿತಿ ಸಿಗಲಿದೆ ಎಂದು ಗೂಗಲ್ ತಿಳಿಸಿದೆ. ಈ ದಿನಾಂಕದ ನಂತರ ಅಪ್ಲೋಡ್ ಆಗುವ ಫೋಟೋಗಳು ಹಾಗೂ ವಿಡಿಯೋಗಳನ್ನು 15 GB ಮಿತಿಯ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ. ಗೂಗಲ್ ಫೋಟೋಸ್ ಬಳಸಲು ಇನ್ನು ಕೇವಲ 3 ತಿಂಗಳು ಮಾತ್ರ ಬಾಕಿ ಇದೆ. ಅದರ ಬದಲು ಬಳಸಬಹುದಾದ ಪರ್ಯಾಯ ಆಯ್ಕೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಡಿಜಿಬಾಕ್ಸ್

ಭಾರತದ ಸ್ವಂತ ಕ್ಲೌಡ್ ಸ್ಟೋರೇಜ್ ಪ್ಲಾಟ್‌ಫಾರ್ಮ್ ಆಗಿರುವ ಡಿಜಿಬಾಕ್ಸ್ 20GB ಉಚಿತ ಕ್ಲೌಡ್ ಸ್ಟೋರೇಜ್ ನೀಡುತ್ತಿದೆ. ಈ ಉಚಿತ ಸೌಲಭ್ಯ ಜಿಮೇಲ್ ಜೊತೆಗೆ ಬಳಕೆದಾರರಿಗೆ ಅನಿಯಮಿತ ಇತರ ಸೌಲಭ್ಯಗಳನ್ನು ನೀಡುತ್ತದೆ. ಕಂಪನಿಯು ತನ್ನ ಸೇವೆಯು ಎಂಡ್-ಟು-ಎಂಡ್‌ ಎನ್‌ಕ್ರಿಪ್ಶನ್ ಬೆಂಬಲಿಸುತ್ತದೆ ಎಂದು ಹೇಳಿದೆ. ಡಿಜಿಬಾಕ್ಸ್ ತಿಂಗಳಿಗೆ ಕೇವಲ 30 ರೂ.ಗೆ 100GB ಸ್ಟೋರೇಜ್ ನೀಡುತ್ತಿದೆ. ಸಾಕಷ್ಟು ಫೋಟೋಗಳು ಅಥವಾ ವಿಡಿಯೋಗಳನ್ನು ಹೊಂದಿರುವವರಿಗೆ ಇದು ಸಹಕಾರಿಯಾಗಿದೆ. ನೀವು ವಾರ್ಷಿಕ ಯೋಜನೆ ಸಹ ಖರೀದಿಸಬಹುದು, ಇದರ ಬೆಲೆ 360 ರೂ. ಅದೇ ಬೆಲೆಗೆ ನೀವು 2TB ವರೆಗೆ ಸ್ಟೋರೇಜ್ ಪಡೆಯುತ್ತಿರುವಿರಿ. ಗೂಗಲ್ 100GB ಸ್ಟೋರೇಜ್ಗೆ ವಾರ್ಷಿಕವಾಗಿ 1,300 ರೂ. ಚಾರ್ಜ್ ಮಾಡುತ್ತದೆ.

ಡೆಗೂ(Degoo)

ನೀವು ಗೂಗಲ್ ಫೋಟೋಸ್ ಗೆ ಪರ್ಯಾಯವಾಗಿ ಡೆಗೂ ಬಳಸಬಹುದು. ಕಂಪನಿಯು ನಿಮಗೆ 100GB ಯಷ್ಟು ಉಚಿತ ಕ್ಲೌಡ್ ಸಂಗ್ರಹ ನೀಡುತ್ತದೆ ಮತ್ತು ಬಳಕೆ ಮಾಡುವಾಗ ಯಾವುದೇ ಜಾಹೀರಾತು ನಿಮಗೆ ಕಾಣಿಸುವುದಿಲ್ಲ. ಡೆಗೂ ಬಿಟ್ಟರೆ 100GB ಸ್ಟೋರೇಜ್ ಅನ್ನು ಉಚಿತವಾಗಿ ನೀಡುವ ಯಾವುದೇ ಕ್ಲೌಡ್ ಸ್ಟೋರೇಜ್ ಸೇವೆ ನಿಮಗೆ ಸಿಗುವುದಿಲ್ಲ. ಡಿಜಿಬಾಕ್ಸ್ ನಂತೆಯೇ ಇಲ್ಲಿಯೂ ಕೂಡ ಎಲ್ಲಾ ಫೈಲ್ ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿವೆ ಎಂದು ಡೆಗೂ ಹೇಳಿದೆ, ಹೀಗಾಗಿ ಬಳಕೆದಾರರು ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಇದರ ಬೇಸಿಕ್ ಪ್ಲಾನ್ 500 GB ಗೆ ಮಾಸಿಕ 2.99 ಡಾಲರ್ ಆಗಲಿದೆ.ಮೈಕ್ರೋಸಾಫ್ಟ್ ಒನ್‌ಡ್ರೈವ್

ಒನ್‌ಡ್ರೈವ್ ಮೈಕ್ರೋಸಾಫ್ಟ್‌ ನ ಕ್ಲೌಡ್ ಸ್ಟೋರೇಜ್ ಸೇವೆಯಾಗಿದ್ದು, ಇದು ಗೂಗಲ್‌ನಂತೆಯೇ ನಿಮಗೆ ಉತ್ತಮ ಸೇವೆ ನೀಡುತ್ತದೆ. ಫೈಲ್ ಗಳನ್ನು ಸಂಗ್ರಹಿಸಿಡಲು ಮತ್ತು ಸುಲಭವಾಗಿ ಹಂಚಿಕೊಳ್ಳಲು ಮೈಕ್ರೋಸಾಫ್ಟ್‌ ಒನ್‌ಡ್ರೈವ್ ಸೇವೆಯಲ್ಲಿ ಸಾಧ್ಯ. ಒನ್‌ಡ್ರೈವ್ ಆನ್ ಲೈನ್ ಸ್ಟೋರೇಜ್ ನಲ್ಲಿ ಫೈಲ್ ಅಥವಾ ಡಾಕ್ಯುಮೆಂಟ್ ಕ್ರಿಯೇಟ್ ಮಾಡುವುದು, ಅಪ್ ಲೋಡ್ ಮತ್ತು ಶೇರ್ ಮಾಡುವುದು ಸುಲಭ. ಮೈಕ್ರೋಸಾಫ್ಟ್‌ ಅಕೌಂಟ್ ಕ್ರಿಯೇಟ್ ಮಾಡಿಕೊಂಡವರಿಗೆ 5GB ಉಚಿತ ಸ್ಟೋರೇಜ್ ಸ್ಪೇಸ್ ಸಿಗುತ್ತದೆ. ಮೈಕ್ರೋಸಾಫ್ಟ್ 365 ಚಂದಾದಾರರಿಗೆ 1TB ವರೆಗಿನ ಸ್ಟೋರೇಜ್ ಸ್ಪೇಸ್ ಸಿಗುತ್ತದೆ. ಮೈಕ್ರೋಸಾಫ್ಟ್ ಸೇವೆಗಳನ್ನು ಬಳಸುವವರಿಗೆ ಒನ್‌ಡ್ರೈವ್ ಚಂದಾದಾರಿಕೆ ಅತ್ಯುತ್ತಮ ಆಯ್ಕೆಯಾಗಿದೆ.

ಅಮೆಜಾನ್ ಫೋಟೋಸ್

ಅಮೆಜಾನ್ ಪ್ರೈಮ್ ಸದಸ್ಯರಿಗೆ ಅನಿಯಮಿತ ಫೋಟೋ ಸಂಗ್ರಹಿಸಲಿಡುವ ಅವಕಾಶವಿದ್ದರೂ ವಿಡಿಯೋಗಳ ಸಂಗ್ರಹ ಸಾಮರ್ಥ್ಯ 5 GB ಮಾತ್ರ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಮೆಜಾನ್ ಫೋಟೋಗಳ ಬಳಕೆ ಉಚಿತವಿರುತ್ತದೆ. ಅಮೆಜಾನ್ ಪ್ರೈಮ್ ಅಲ್ಲದ ಸದಸ್ಯರು ಕೇವಲ 5GB ಫೋಟೋ ಮತ್ತು ವಿಡಿಯೋ ಸ್ಟೋರೇಜ್ ಪಡೆಯುತ್ತಾರೆ. ಆದರೆ ಇದು ಪ್ರಸ್ತುತ ಆಯ್ದ ದೇಶಗಳಲ್ಲಿ ಲಭ್ಯವಿದೆ. ಕೆಲ ವರದಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಅಮೆಜಾನ್ ಫೋಟೋಸ್ ಭಾರತದಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಿವೆ. ನಿಮಗೆ ಕಾಯಲು ಸಾಧ್ಯವಾಗದಿದ್ದರೆ ನೀವು APK ಆವೃತ್ತಿಯನ್ನು ಡೌನ್‌ಲೋಡ್ ಮಾಡಬಹುದಾಗಿದೆ.
Published by: Harshith AS
First published: March 1, 2021, 2:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories