ಸ್ಪ್ಯಾಮ್​ ಕರೆಗಳನ್ನು ನಿಷೇಧಿಸಲು ಗೂಗಲ್​ ಫೋನ್​ ಆ್ಯಪ್​ ಸಹಕಾರಿ


Updated:July 16, 2018, 5:42 PM IST
ಸ್ಪ್ಯಾಮ್​ ಕರೆಗಳನ್ನು ನಿಷೇಧಿಸಲು ಗೂಗಲ್​ ಫೋನ್​ ಆ್ಯಪ್​ ಸಹಕಾರಿ

Updated: July 16, 2018, 5:42 PM IST
ಗೂಗಲ್​ ತನ್ನ 'ಫೋನ್​ ಆ್ಯಪ್​'ಗೆ ನೂತನ ಅಪ್​ಡೇಟ್ ಬಿಟ್ಟಿದ್ದು, ಇದರಲ್ಲಿ ಕರೆ ಮಾಡುವವರ ಹೆಸರು ಮತ್ತು ಇತರೇ ಮಾಹಿತಿಯನ್ನು ಒದಗಿಸುವ ಕಾಲರ್​ ಐಡಿ ಹಾಗೂ ಸ್ಪ್ಯಾಮ್​ ಪ್ರೊಟೆಕ್ಷನ್​ ಎಂಬ ಹೊಸ ಆಯ್ಕೆಯನ್ನು ನೀಡಿದೆ.

ಟ್ರೂಕಾಲರ್ ಮಾದರಿಯಲ್ಲೇ ನಿಮಗೆ ಬರುವ ಕರೆಗಳನ್ನು ಸ್ಕ್ಯಾನ್​ ಮಾಡುವ ಗೂಗಲ್​ ಇದರಲ್ಲಿ ಸ್ಪ್ಯಾಮ್​ ಕರೆಗಳನ್ನು ಗುರುತಿಸಿ ನಿಮಗೆ ಮಾಹಿತಿಯನ್ನು ನೀಡುತ್ತದೆ. ಅದಲ್ಲದೇ ಇಂತಹ ಕರೆಗಳನ್ನು ನಿಷೇಧಿಸುವ ಸಂಪೂರ್ಣ ಹಕ್ಕನ್ನೂ ನೀವು ಗೂಗಲ್​ಗೆ ನೀಡಿದರೆ ಅದು ಸ್ಪ್ಯಾಮ್​ ಕರೆಗಳು ಬರದಂತೆ ತಡೆಗಟ್ಟುತ್ತದೆ.

ಈ ವ್ಯವಸ್ಥೆ ಡಿಫಾಲ್ಟ್​ ಆಗಿಯೇ ಅಪ್​ಡೇಟ್​ಗಳಲ್ಲಿ ಬರುತ್ತಿದ್ದು, ಈ ಮೂಲಕ ಬರುವ ಎಲ್ಲಾ ಕರೆಗಳನ್ನು ಗೂಗಲ್​ ಸ್ಕ್ಯಾನ್​ ಮಾಡುತ್ತದೆ. ಆದರೆ ಗ್ರಾಹಕರು ಸ್ಪ್ಯಾಮ್​ಕರೆಗಳನ್ನು ಗೂಗಲ್​ಗೆ ಗುರುತಿಸಿ ಕೊಡಬೇಕಾಗುತ್ತದೆ.

ಕಾಲರ್​ ಐಡಿ ಸೇವೆಯನ್ನು ಬಳಕೇದಾರರು ಸ್ಥಗಿತಗೊಳಿಸುವ ಎಲ್ಲಾ ಆಯ್ಕೆಯನ್ನು ಗೂಗಲ್​ ಗ್ರಾಹಕರಿಗೆ ನೀಡಿದ್ದು, ನಿಮ್ಮ ಸೆಟ್ಟಿಂಗ್​ ಹಾಗೂ ಫೋನ್​ ಆ್ಯಪ್​ ಎಂಬ ಸೆಕ್ಷನ್​ ಒಳಗೆ ನಿಮಗೆ ದೊರೆಯುತ್ತದೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ