HOME » NEWS » Tech » GOOGLE PAYS LOSS IS PAYTM AND PHONEPES GAIN ON UPI STG VB

ಯುಪಿಐ ಪೇಮೆಂಟ್​​ನಲ್ಲಿ Paytm ಮತ್ತು Phonepe ಯಿಂದ ಅಧಿಕ ಗಳಿಕೆ: ಮೂರನೇ ಸ್ಥಾನಕ್ಕೆ ಕುಸಿದ Google Pay

ಗೂಗಲ್ ಪೇ ಎದುರಿಸುತ್ತಿರುವ ಕೆಲವು ಬ್ಯಾಂಕಿಂಗ್ ಸಮಸ್ಯೆಗಳು ಬಳಕೆದಾರರಿಗೆ ಕಿರಿಕಿರಿ ಆಗಿರಬಹುದು. ಇದರಿಂದಾಗಿ ಬೇರೆ ಯುಪಿಐ ಪೇಮೆಂಟ್ ಅಪ್ಲಿಕೇಶನ್ ಮೊರೆ ಹೋಗಿರುವ ಸಾಧ್ಯತೆಯಿದೆ.

news18-kannada
Updated:February 10, 2021, 12:41 PM IST
ಯುಪಿಐ ಪೇಮೆಂಟ್​​ನಲ್ಲಿ Paytm ಮತ್ತು Phonepe ಯಿಂದ ಅಧಿಕ ಗಳಿಕೆ: ಮೂರನೇ ಸ್ಥಾನಕ್ಕೆ ಕುಸಿದ Google Pay
ಸಾಂದರ್ಭಿಕ ಚಿತ್ರ
  • Share this:
ತಂತ್ರಜ್ಞಾನ ಬೆಳೆದಂತೆ ದೇಶವು ಅಭಿವೃದ್ಧಿಯತ್ತ ಸಾಗುತ್ತದೆ. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡುತ್ತಿದ್ದಂತೆ ಆನ್ಲೈನ್ ಮೂಲಕ ಹಣಕಾಸಿನ ವ್ಯವಹಾರವು ಹೆಚ್ಚಾಗ ತೊಡಗಿದೆ. ಇನ್ನು, ಆನ್ಲೈನ್ ವ್ಯವಹಾರ ಹೆಚ್ಚಾದಂತೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬಳಸುವವರ ಸಂಖ್ಯೆ ಕೂಡ ಅಧಿಕವಾಗಿದೆ. ಆದರೆ, ಗೂಗಲ್ ಪೇ ತನ್ನ ವ್ಯವಹಾರದಲ್ಲಿ ಪೇಟಿಎಂ ಮತ್ತು ಪೋನ್ ಪೇ ಗಿಂತ ಹಿಂದಕ್ಕೆ ಸರಿದಿದೆ. ಹೌದು, ಗೂಗಲ್ ಪೇ ವ್ಯವಹಾರ ಕುಸಿದಿದ್ದು, ನವೆಂಬರ್ ತಿಂಗಳಿನಲ್ಲಿ 960 ಮಿಲಿಯನ್ ವ್ಯವಹಾರ ಕಂಡರೆ,  ಜನವರಿ ಅಂತ್ಯದ ವೇಳೆಗೆ 855 ಮಿಲಿಯನ್ ವ್ಯವಹಾರವನ್ನು ಕಂಡಿದೆ. ಇದರಿಂದಾಗಿ ಗೂಗಲ್ ಪೇ ತನ್ನ ವ್ಯವಹಾರದಲ್ಲಿ 100 ಮಿಲಿಯನ್​ಗಿಂತಲೂ ಕುಸಿತ ಕಂಡಿದೆ.

ಇನ್ನೂ ಇದೇ ಅವಧಿಯಲ್ಲಿ ಪೋನ್ ಪೇ ಮತ್ತು ಪೇಟಿಎಂ 100 ಮಿಲಿಯನ್ ಮತ್ತು 72 ಮಿಲಿಯನ್ ಹೆಚ್ಚುವರಿ ವಹಿವಾಟನ್ನು ಕಂಡಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಡೇಟಾ ಅಂಕಿ ಅಂಶ ಬಿಡುಗಡೆ ಮಾಡಿದೆ.

Facebook: ನಿಮ್ಮ ಫೇಸ್​ಬುಕ್​ ಖಾತೆಯನ್ನು ಯಾರಾದರೂ ಕದ್ದು ನೋಡುತ್ತಿದ್ದಾರೆಯೇ? ಪತ್ತೆಹಚ್ಚಲು ಇಲ್ಲಿದೆ ಸುಲಭ ವಿಧಾನ

ಈ ಬಗ್ಗೆ ಫೋನ್ ಪೇ ಸಹ ಸಂಸ್ಥಾಪಕ ಸಮೀರ್ ನಿಗಮ್ ಅವರು ಮಾತನಾಡಿ, ಎನ್‌ಪಿಸಿಐ ದತ್ತಾಂಶದ ಪ್ರಕಾರ, ಯುಪಿಐ ಪಾವತಿಗಳಲ್ಲಿ ನಾವು ಆರಂಭದಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಬಳಕೆದಾರರ ಪ್ರಾಮುಖ್ಯತೆಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.

ಕ್ಯಾಶ್​ಬ್ಯಾಕ್ ನಿಲ್ಲಿಸಿದ ಗೂಗಲ್ ಪೇ!

ಖಾಸಗಿ ಬ್ಯಾಂಕಿನಲ್ಲಿ ಡಿಜಿಟಲ್ ಪಾವತಿಗಳ ಉಸ್ತುವಾರಿ ಹಿರಿಯ ಕಾರ್ಯನಿರ್ವಾಹಕರೊಬ್ಬರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಗೂಗಲ್ ಪೇ ಮೊದಲು ತನ್ನ ಗ್ರಾಹಕರಿಗೆ ವಹಿವಾಟು ನಡೆಸಿದರೆ ಕ್ಯಾಶ್​ಬ್ಯಾಕ್ ನೀಡುತ್ತಿತ್ತು. ಇದೀಗ ಕ್ಯಾಶ್​ಬ್ಯಾಕ್ ನೀಡುವುದನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ವಹಿವಾಟು ನಡೆಸಲು ಬ್ಯಾಂಕಿಂಗ್​ನ ತಾಂತ್ರಿಕ ಸಮಸ್ಯೆಯನ್ನು ಗೂಗಲ್ ಪೇ ಎದುರಿಸುತ್ತಿದೆ. ಇದು ಕೂಡ ವಹಿವಾಟು ಕುಸಿಯಲು ಕಾರಣವಾಗಿದೆ.

Vodafone: ವೊಡಾಫೋನ್​​ ಈ ಪ್ರಿಪೇಯ್ಡ್​ ಪ್ಲಾನ್ ಮೂಲಕ ನೀಡುತ್ತಿದೆ 50GB ಹೆಚ್ಚುವರಿ ಡೇಟಾ!ಆನ್ಲೈನ್ ಮೂಲಕ ಪೇಮೆಂಟ್ ಮಾಡುವವರು ಎರಡರಿಂದ ಮೂರು ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್​ಗಳು ಹೊಂದಿರುತ್ತಾರೆ. ಗೂಗಲ್ ಪೇ ಎದುರಿಸುತ್ತಿರುವ ಕೆಲವು ಬ್ಯಾಂಕಿಂಗ್ ಸಮಸ್ಯೆಗಳು ಬಳಕೆದಾರರಿಗೆ ಕಿರಿಕಿರಿ ಆಗಿರಬಹುದು. ಇದರಿಂದಾಗಿ ಬೇರೆ ಯುಪಿಐ ಪೇಮೆಂಟ್ ಅಪ್ಲಿಕೇಶನ್ ಮೊರೆ ಹೋಗಿರುವ ಸಾಧ್ಯತೆಯಿದೆ.
Youtube Video

ಪೋನ್ ಪೇ ಮತ್ತು ಪೇಟಿಎಂ ತನ್ನ ವ್ಯವಹಾರನ್ನು ಯುಪಿಐ ಪೇಮೆಂಟ್ ಮೂಲಕ ಉತ್ತಮ ಲಾಭವನ್ನು ಕಂಡುಕೊಂಡಿದೆ. ಅಷ್ಟೇ ಅಲ್ಲದೇ ತಮ್ಮ ಪಾಲುದಾರರಿಗೆ ಕ್ರೆಡಿಟ್ ಸೇರಿದಂತೆ ಹಣಕಾಸು ಸೇವೆಗಳನ್ನು ವಿತರಿಸಲು ಹೂಡಿಕೆ ಮಾಡುವ ಮೂಲಕ ಮುಂದೆ ಸಾಗುತ್ತಿದೆ.
Published by: Vinay Bhat
First published: February 10, 2021, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories