HOME » NEWS » Tech » GOOGLE PAY WONT CHARGE USERS MONEY TRANSFER FEE IN INDIA KNOW DETAILS HG

Google Pay: ಏನಿದು ಪಿ-ಟು-ಪಿ ಸೇವೆ? ಹಣ ವರ್ಗಾವಣೆ ವೇಳೆ ಶುಲ್ಕ ವಿಧಿಸಬೇಕಾ? ಭಾರತೀಯರಿಗೆ ಅನ್ವಯಿಸುತ್ತಾ?

ಅಮೆರಿಕದಲ್ಲಿ ಗೂಗಲ್​ ಪೇ ಬಳಕೆದಾರರು ಹಣ ವರ್ಗಾವಣೆ ವೇಳೆ ಶುಲ್ಕ ವಿಧಿಸಬೇಕಾಗುತ್ತದೆ. ಆದರೆ ಭಾರತೀಯರು ಮಾತ್ರ ತನ್ನ ಪಾವತಿ ಸೇವೆಯಲ್ಲಿ ಹಣ ವರ್ಗಾವಣೆ ಮಾಡಲು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಗೂಗಲ್​ ಪೇ ಸ್ಪಷ್ಟಪಡಿಸಿದೆ.

news18-kannada
Updated:November 25, 2020, 10:22 PM IST
Google Pay: ಏನಿದು ಪಿ-ಟು-ಪಿ ಸೇವೆ? ಹಣ ವರ್ಗಾವಣೆ ವೇಳೆ ಶುಲ್ಕ ವಿಧಿಸಬೇಕಾ? ಭಾರತೀಯರಿಗೆ ಅನ್ವಯಿಸುತ್ತಾ?
ಗೂಗಲ್​ ಪೇ
  • Share this:
ಜನಪ್ರಿಯ ಗೂಗಲ್​ ಪೇ ಉಚಿತವಾಗಿ ಬಳಸಲಾಗುವುದಿಲ್ಲ, ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಭಾರತೀಯರಿಗೆ ಈ ವಿಚಾರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಈ ಸುದ್ದಿ ನಿಜವಾದರು ಭಾರತೀಯರಿಗೆ ಮಾತ್ರ ಅನ್ವಯಿಸುವುದಿಲ್ಲ ಎಂದು ಗೂಗಲ್​ ಪೇ ಸ್ಪಷ್ಟಪಡಿಸಿದೆ.

ಹೌದು. ಅಮೆರಿಕದಲ್ಲಿ ಗೂಗಲ್​ ಪೇ ಬಳಕೆದಾರರು ಹಣ ವರ್ಗಾವಣೆ ವೇಳೆ ಶುಲ್ಕ ವಿಧಿಸಬೇಕಾಗುತ್ತದೆ. ಆದರೆ ಭಾರತೀಯರು ಮಾತ್ರ ತನ್ನ ಪಾವತಿ ಸೇವೆಯಲ್ಲಿ ಹಣ ವರ್ಗಾವಣೆ ಮಾಡಲು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಗೂಗಲ್​ ಪೇ ಸ್ಪಷ್ಟಪಡಿಸಿದೆ.

ಕಳೆದ ವಾರ ಗೂಗಲ್​ ಪೇ ಮುಂದಿನ ವರ್ಷ ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಆ್ಯಪ್​ ಅನ್ನು ಮರುವಿನ್ಯಾಸಗೊಳಿಸಿ ಹೊಸ ಗೂಗಲ್ ಪೇ ಅಪ್ಲಿಕೇಷನ್​ ಪ್ರಾರಂಭಿಸುವುದಾಗಿ ಹೇಳಿತ್ತು. ಇದೀಗ ಮುಂದಿನ ವರ್ಷ ಬಿಡುಗಡೆಗೊಳಿಸುವ ಮೂಲಕ ಶುಲ್ಕ ವಿಧಿಸಲು ಮುಂದಾಗಿದೆ. ಹೀಗಾಗಿ ಪೀರ್-​ ಟು- ಪೀರ್​ ಪಾವತಿ ಸೌಲಭ್ಯವನ್ನು ಜನವರಿಯಲ್ಲಿ ಹಿಂತೆಗೆದುಕೊಳ್ಳಲಿದೆ. 2021ರ ವೇಳೆಗೆ ವೆಬ್​ ಅಪ್ಲಿಕೇಷನ್​ ಸೈಟ್​ ಮೂಲಕ ಸೇವೆ ದೊರಕುವುದಿಲ್ಲ ಎಂದು ಬಳಕೆದಾರರಿಗೆ ತಿಳಿಸಿದೆ.
Youtube Video

ಇನ್ನು ಗೂಗಲ್​ ಪೇ ಅಮೆರಿಕ ಬಳಕೆದಾರರಿಗೆ ಮಾತ್ರ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಿದೆ. ಆದರೆ ಭಾರತೀಯರಿಗೆ ಯಾವುದೇ ತೊಂದರೆ ಇಲ್ಲ. ಭಾರತದಲ್ಲಿ ಗೂಗಲ್​ ಪೇ 67 ಮಿಲಿಯನ್​ ಬಳಕೆದಾರರನ್ನು ಹೊಂದಿದೆ. ಪೇಟಿಯಂ, ವಾಲ್​ಮಾರ್ಟ್​, ಫೋನ್​ ಮುಂತಾದ ಆನ್​ಲೈನ್ ಪೇಮೆಂಟ್​ ಆ್ಯಪ್​ಗೆ ಪೈಪೋಟಿ ನೀಡುತ್ತಿದೆ.
Published by: Harshith AS
First published: November 25, 2020, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories