Google Pay Rangoli: ರಂಗೋಲಿ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಗೂಗಲ್ ಪೇ

ರಂಗೋಲಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗುತ್ತಿದೆ. ರಂಗೋಲಿ ಯಾರಿಗೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿದೆ.

Rajesh Duggumane | news18-kannada
Updated:November 1, 2019, 11:46 AM IST
Google Pay Rangoli: ರಂಗೋಲಿ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಗೂಗಲ್ ಪೇ
ರಂಗೋಲಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗುತ್ತಿದೆ. ರಂಗೋಲಿ ಯಾರಿಗೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿದೆ.
  • Share this:
ದೀಪಾವಳಿ ಆರಂಭವಾದಾಗಿನಿಂದಲೂ ರಂಗೋಲಿ ವಿಚಾರ ಭಾರೀ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಆನ್​ಲೈನ್​ ಪೇಮೆಂಟ್​ ಆ್ಯಪ್​ ಗೂಗಲ್​ ಪೇ ನೀಡಿರುವ ಆಫರ್​. ಐದು ಸ್ಟಾಂಪ್​ ಕಲೆ ಹಾಕಿ 251 ರೂಪಾಯಿ ಗಳಿಸಿ ಎಂದು ಸಂಸ್ಥೆ ಹೇಳಿತ್ತು. ಆದರೆ, ರಂಗೋಲಿ ಸ್ಟಾಂಪ್​ ಬಹುತೇಕರಿಗೆ ಸಿಕ್ಕಿರಲಿಲ್ಲ. ಈಗ ಗೂಗಲ್​ ಪೇ ರಂಗೋಲಿ ಸ್ಟಾಂಪ್​ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ದೀಪಾವಳಿ ಸಮಯದಂದು ಗೂಗಲ್​ ಪೇ ಈ ಆಫರ್​ ಪರಿಚಯಿಸಿದೆ. ಜುಮ್ಕಾ, ಹೂವು, ದೀಪ, ಆಕಾಶ ಬುಟ್ಟಿ ಹಾಗೂ ರಂಗೋಲಿ ಈ ಸ್ಟಾಂಪ್​ಗಳನ್ನು ಕಲೆ ಹಾಕಿದರೆ ನಿಮಗೆ ಖಚಿತವಾಗಿ 251 ರೂಪಾಯಿ ಸಿಗಲಿದೆ. ವಿವಿಧ ಬಿಲ್​ಗಳನ್ನು ಪೇ ಮಾಡಿ ಈ ಸ್ಟಾಂಪ್​ಗಳನ್ನು ಪಡೆಯಬಹುದು.

ಆದರೆ, ಎಷ್ಟೇ ಬಿಲ್​ ಪೇ ಮಾಡಿದರೂ ಅನೇಕರಿಗೆ ರಂಗೋಲಿ ಸ್ಟಾಂಪ್​ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ, ಈ ವಿಚಾರ ಭಾರೀ ಟ್ರೋಲ್​ ಆಗುತ್ತಿದೆ. ಅ.31ರಂದೇ ಈ ಆಫರ್​ ಮುಗಿಯಲಿದೆ ಎಂದು ಗೂಗಲ್​ ಪೇ ಹೇಳಿತ್ತು. ಹೀಗಾಗಿ ರಂಗೋಲಿ ಸ್ಟಾಂಪ್​ ಸಿಗುವ ಮೊದಲೇ ಆಫರ್​ ಮುಗಿದು ಹೋಯಿತಲ್ಲ ಎಂದು ಅನೇಕರು ಮರುಗಿದ್ದರು.

ಅಚ್ಚರಿ ಎಂಬಂತೆ ಗೂಗಲ್ ಪೇ ಈ ಆಫರ್​ಅನ್ನು ನ.11ರವರೆಗೆ ವಿಸ್ತರಣೆ ಮಾಡಿದೆ. ಹೀಗಾಗಿ, ರಂಗೋಲಿ ಸಿಕ್ಕಿಲ್ಲ ಇಲ್ಲ ಎಂದು ಬೇಸರ ಮಾಡಿಕೊಂಡವರು ಇನ್ನೂ 11 ದಿನ ರಂಗೋಲಿ ಸ್ಟಾಂಪ್​ ಪಡೆಯಲು ಪ್ರಯತ್ನ ನಡೆಸಬಹುದು.

ಇದನ್ನೂ ಓದಿ:  ಎಟಿಎಂ ಕಾರ್ಡ್​ ಬಳಸುತ್ತಿದ್ದೀರಾ? ನಿಮ್ಮ ಖಾತೆಯ ಮಾಹಿತಿ ಮಾರಾಟಕ್ಕಿದೆ ಎಚ್ಚರ..!

ಇನ್ನು, ರಂಗೋಲಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗಿದೆ. ರಂಗೋಲಿ ಯಾರಿಗೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿದೆ.

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading