ಆನ್ಲೈನ್ ಪೇಮೆಂಟ್ ಸೇವೆಯನ್ನು ಒದಗಿಸುತ್ತಿದ್ದ ಗೂಗಲ್ ಪೇ ಸುರಕ್ಷಿತವಲ್ಲ ಎಂಬ ಮಾತುಗಳು ಈ ಹಿಂದೆಯಿಂದಲೂ ಕೇಳಿ ಬರುತ್ತಿತ್ತು. ಆದರೀಗ ಈ ವಿಚಾರ ಕುರಿತಂತೆ ಗೂಗಲ್ ಸ್ಪಷ್ಟತೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಗೂಗಲ್ ಪೇ ಸುರಕ್ಷಿತವಲ್ಲ ಎಂಬ ಸುದ್ದಿ ಹರಿದಾಡಿತ್ತು. ಆದರೀಗ ಗೂಗಲ್ ಪೇ ಸುರಕ್ಷಿತವಾದ ಆ್ಯಪ್ ಎಂದು ಸ್ಪಷ್ಟತೆ ನೀಡಿದೆ. ಜೊತೆಗೆ ಎನ್ಪಿಸಿಐ ಕೂಡ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ.
ಗೂಗಲ್ ಪೇ ಆರ್ಬಿಐ ಸೂಚನೆಯನ್ನು ಪಾಲಿಸುತ್ತಿಲ್ಲ. ನಕಲಿ ಆರ್ಬಿಐ ಟ್ಯಾಗ್ ಹೊಂದಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೆಳೆದೆರಡು ದಿನಗಳಿಂದ ಹರಿದಾಡಿತ್ತು. ಆದರೆ ಗೂಗಲ್ ಪೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಳಕೆದಾರರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಇಂತಹ ಯಾವುದೇ ಸಮಸ್ಯೆ ಗೂಗಲ್ ಪೇನಲ್ಲಿ ಇಲ್ಲ. ಯಾವುದೇ ಭದ್ರತಾ ಸಮಸ್ಯೆ ಕೂಡ ಇದರಲಿಲ್ಲ ಎಂದು ಗೂಗಲ್ ಪೇ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಯನ್ನು ಅಲ್ಲಗೆಳೆದಿರುವ ಗೂಗಲ್ ಪೇ ಆರ್ಬಿಐ ಮತ್ತು ಎನ್ಸಿಐಯ ಎಲ್ಲಾ ನಿಯಮವನ್ನು ಅನುಸರಿಸುತ್ತಿದೆ ಎಂದು ಹೇಳಿದೆ. ಎನ್ಪಿಸಿಐ ಕೂಡ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ಹೇಳಿಕೊಂಡಿದೆ. ಜನರು ಆತಂಕ ಪಡಬೇಕಿಲ್ಲ. ಗೂಗಲ್ ಪೇ ಅಧಿಕೃತವಾಗಿದ್ದು, ಎಲ್ಲಾ ಸುರಕ್ಷತೆ ಮತ್ತು ಭದ್ರತೆಯನ್ನು ಹೊಂದಿದೆ ಎಂದು ತಿಳಿಸಿದೆ.
ದುಡ್ಡಿಲ್ಲದೆ ಹೇಗೆ ಪ್ರಚಾರ ಮಾಡ್ತೀರಾ ಎಂಬವರಿಗೆ ಉಪ್ಪಿ ತೋರಿಸಿದ್ರು ಉದಾಹರಣೆ
ನಾಳೆ ವಿಶಾಲ್ ‘ಚಕ್ರ‘ ಸಿನಿಮಾದ ಟ್ರೇಲರ್ ಲಾಂಚ್; ಕನ್ನಡದಲ್ಲಿ ಯಾರು ಬಿಡುಗಡೆ ಮಾಡಲಿದ್ದಾರೆ ಗೊತ್ತಾ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ