ಲಾಕ್​ಡೌನ್​ ಸಮಯದಲ್ಲಿ ಭಾರತೀಯರು ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಿದ್ದೇನು ಗೊತ್ತಾ?

Google: ಲಾಕ್​ಡೌನ್​ ಸಮಯದಲ್ಲಿ ಜನರು ಮನೆಯಲ್ಲಿ ಕುಳಿತು ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಅನೇಕರು ಇಂಟರ್​ನೆಟ್​ ಮೊರೆ ಹೋಗಿದ್ದಾರೆ. ಗೂಗಲ್​ ಮೂಲಕ ತಮಗೆ ಬೇಕೆನಿಸುವ ಮತ್ತು ಅವಶ್ಯಕತೆ ಇರುವ ವಸ್ತು,  ವಿಚಾರಗಳನ್ನು ಸರ್ಚ್​ ಮಾಡುತ್ತಿದ್ದಾರೆ . ಇದೀಗ ಗೂಗಲ್​ ಸಂಸ್ಥೆ ಭಾರತೀಯರು ಅತಿ ಹೆಚ್ಚ ಸರ್ಚ್​ ಮಾಡಿರುವ ಟಾಪ್​ 5 ಟ್ರೆಂಡಿಂಗ್​ ವಿಚಾರವನ್ನು ಬಹಿರಂಗ ಪಡಿಸಿದೆ.

ಗೂಗಲ್

ಗೂಗಲ್

 • Share this:
  ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಭಾರತೀಯರು ಅತಿ ಹೆಚ್ಚು ಸರ್ಜ್​ ಮಾಡಿರುವ ಸಂಗತಿಯನ್ನು ಗೂಗಲ್​ ಬಹಿರಂಗ ಪಡಿಸಿದೆ.

  ಲಾಕ್​ಡೌನ್​ ಸಮಯದಲ್ಲಿ ಜನರು ಮನೆಯಲ್ಲಿ ಕುಳಿತು ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಅನೇಕರು ಇಂಟರ್​ನೆಟ್​ ಮೊರೆ ಹೋಗಿದ್ದಾರೆ. ಗೂಗಲ್​ ಮೂಲಕ ತಮಗೆ ಬೇಕೆನಿಸುವ ಮತ್ತು ಅವಶ್ಯಕತೆ ಇರುವ ವಸ್ತು,  ವಿಚಾರಗಳನ್ನು ಸರ್ಚ್​ ಮಾಡುತ್ತಿದ್ದಾರೆ . ಇದೀಗ ಗೂಗಲ್​ ಸಂಸ್ಥೆ ಭಾರತೀಯರು ಅತಿ ಹೆಚ್ಚ ಸರ್ಚ್​ ಮಾಡಿರುವ ಟಾಪ್​ 5 ಟ್ರೆಂಡಿಂಗ್​ ವಿಚಾರವನ್ನು ಬಹಿರಂಗ ಪಡಿಸಿದೆ.

  ಅನೇಕರು ಗೂಗಲ್​ನಲ್ಲಿ ‘ಹತ್ತಿರದ ರೇಷನ್​ ಅಂಗಡಿ‘​ ಎಂದು ಸರ್ಚ್​ ಮಾಡಿದ್ದಾರೆ. ಇದರ ಜೊತೆಗೆ ‘ಪ್ರಾಣಿ ವೈದ್ಯರು​​​‘, ‘ಫ್ಯಾರಮಸಿಸ್‘​, ‘ಕಿರಾಣಿ ವಿತರಕರು‘ ಎಂದು ಸರ್ಚ್​ ಮಾಡಿದ್ದಾರೆ. ಮಾರ್ಚ್​ ತಿಂಗಳಿನಲ್ಲಿ ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ವಿಷಯ ಇದಾಗಿದೆ.

  ಶೇ. 300ರಷ್ಟು ಜನರು ಗೂಗಲ್​ನಲ್ಲಿ ‘ರೇಷನ್​ ಅಂಗಡಿ‘ ಎಂದು ಸರ್ಚ್​ ಮಾಡಿದ್ದಾರೆ. ಇದರ ಜೊತೆಗೆ ಕೆಲವು ಪ್ರಾಡೆಕ್ಟ್​ಗಳನ್ನು ಹುಡುಕಾಡಿದ್ದಾರೆ. 'ಹೆಡ್​ಸೆಟ್'​, '2W ಇನ್ಸೂರೆನ್ಸ್'​, ‘ಮ್ಯಾಟ್ರೆಸ್​', ಯ್ಯೂಟೂಬ್​ನಲ್ಲಿ ಸಿಗುವ ಸಿನಿಮಾಗಳ ಬಗ್ಗೆ ಹುಡುಕಾಡಿದ್ದಾರೆ.

  ಇನ್ನು 'ಜಿಮ್ ಅಟ್​ ಹೋಮ್​'​​, '5 ಮಿನುಟ್​​​ ರೆಸಿಪಿ', ' ಲರ್ನ್​ ಆನ್​ಲೈನ್​', ' ಟೀಚ್​​ ಆನ್​ಲೈನ್​ ‘ ಅಟ್​ ಹೋಮ್​ ಲರ್ನಿಂಗ್​​​‘ ಬಗ್ಗೆ ಹುಡುಕಾಡಿದ್ದಾರೆ. ಶೇ. 500ರಷ್ಟು ಜನರು ಗೂಗಲ್​ನಲ್ಲಿ ‘ಇಮ್ಯುನಿಟಿ‘ ಪದವನ್ನು ಹೆಚ್ಚು ಸರ್ಚ್​ ಮಾಡಿದ್ದಾರೆ. ‘ವಿಟಮಿನ್​ ಸಿ‘ ಎಂಬ ಪದವನ್ನು ಶೇ 150ರಷ್ಟು ಜನರು ಹುಡುಕಾಡಿದರೆ. ಶೇ. 60ರಷ್ಟು ಜನರು  ‘ಕನ್ಸಲ್ಟ್​​ ಡಾಕ್ಟರ್​​ ಆನ್​ಲೈನ್​‘ ಎಂಬ ಪದವನ್ನು ಹುಡುಕಾಡಿದ್ದಾರೆ.

  ಲಾಕ್​​ಡೌನ್​ ಅವಧಿಯಲ್ಲಿ ಯುಪಿಐ ಪೇಮೆಂಟ್​​ ಸರ್ವಿಸ್​ಗಳ ಹುಡುಕಾಟವು ಹೆಚ್ಚಾಗಿದೆ. ಶೇ. 200ರಷ್ಟು ಜನರು ಯುಪಿಐ ಪಿನ್​ ಬದಲಿಸುವು ಹೇಗೆ? ಎಂದು ಸರ್ಚ್ ಮಾಡಿದ್ದಾರೆ. ಇನ್ನು ಕೆಲವರು ಆನ್​ಲೈನ್​​ನಲ್ಲಿ ಇಲೆಕ್ಟ್ರಿಕ್​​ ಬಿಲ್​ ಪಾವತಿಸುವುದು ಹೇಗೆ?, ಇಲೆಕ್ಟ್ರಿಕ್​ ಬಿಲ್​​ ಹುಡುಕುವುದು ಹೇಗೆ? ಎಂದು ಸರ್ಚ್​ ಮಾಡಿದ್ದಾರೆ.

  ಇದಲ್ಲದೆ ವರ್ಕ್ ಫ್ರಂಮ್​ ಹೋಮ್​, ಹೌ ಟು ಹೋಮ್​ ಸ್ಕೂಲ್​ ಕಿಡ್ಸ್​​, ಸಾಫ್ಟ್​​ವೇರ್​​, ಫ್ರೀ ವಿಡಿಯೋ ಡೇಟಿಂಗ್​ ಎಂದು ಹುಡುಕಾಟ ನಡೆಸಿದ್ದಾರೆ.

  ರಿಷಿ ಕಪೂರ್​ಗೆ ಸಾಮಾಜಿಕ ಜಾಲತಾಣದಲ್ಲಿ ಗೌರವ ಸಲ್ಲಿಸಿದ WWF ಸೂಪರ್​ ಸ್ಟಾರ್​​ ಜಾನ್​ ಸೀನ
  First published: