ಇನ್ಮೇಲೆ ನಿಮ್ಮ ವಾಹನದ ವೇಗದ ಮಿತಿಯ ಮಾಹಿತಿ ನೀಡಲಿದೆ ‘ಗೂಗಲ್​ ಮ್ಯಾಪ್​‘

Google Map: ಬಳಕೆದಾರರು ಚಾಲನೆ ಮಾಡುತ್ತಿರುವ ರಸ್ತೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅಂತೆಯೇ,  ಆ ರಸ್ತೆಯಲ್ಲಿ ಇರುವ ಬಂಕ್​ಗಳ ಇಂಧನ ಬೆಲೆ, ರಸ್ತೆ ಕುರಿತಾದ ಮಾಹಿತಿ, ಅಪಘಾತವಾದರೆ ವರದಿ ಮಾಡುವ ಆಯ್ಕೆಯು ಇರಲಿದೆ.

news18
Updated:May 31, 2019, 3:37 PM IST
ಇನ್ಮೇಲೆ ನಿಮ್ಮ ವಾಹನದ ವೇಗದ ಮಿತಿಯ ಮಾಹಿತಿ ನೀಡಲಿದೆ ‘ಗೂಗಲ್​ ಮ್ಯಾಪ್​‘
ಗೂಗಲ್​ ಮ್ಯಾಪ್
  • News18
  • Last Updated: May 31, 2019, 3:37 PM IST
  • Share this:
ಗೂಗಲ್​ ಮ್ಯಾಪ್ ತನ್ನ ಬಳಕೆದಾರರಿಗೆ​ ಮತ್ತೆರಡು ಅಪ್​ಡೇಟ್​ ಫೀಚರ್​ಗಳನ್ನು ಪರಿಚಯಿಸಲು ಮುಂದಾಗಿದೆ. 40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವೇಗದ ಮಿತಿ ಮತ್ತು ಮೊಬೈಲ್​ ರಾಡರ್​​ ಸ್ಥಳಗಳನ್ನು ಗುರುತಿಸುವಂತಹ ಫೀಚರ್ಸ್​ಗಳ ಕುರಿತು ಗೂಗಲ್​ ಸಂಸ್ಥೆ ದೃಢೀಕರಿಸಿದ್ದು, ಮುಂಬರುವ ದಿನಗಳಲ್ಲಿ ಈ ಫೀಚರ್ಸ್​​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಸಿಗಲಿದೆ. ಅಂತೆಯೇ,​ ಮೊಬೈಲ್​ ಸ್ಪೀಡ್​ ಕ್ಯಾಮೆರಾಗಳು ಕೂಡ ಮ್ಯಾಪ್​ನಲ್ಲಿ ಕಾಣಿಸಿಕೊಳ್ಳಲಿದೆ.

ವಾಹನ ಚಾಲಕರಿಗಾಗಿ ಗೂಗಲ್​ ಮ್ಯಾಪ್​ನಲ್ಲಿ ಎರಡು ಹೊಸ ಫೀಚರ್ ಸೇರ್ಪಡೆಯಾಗಲಿದ್ದು, ವಾಹನ ಚಲಾಣೆಯ ವೇಗದ ಮಿತಿಯ ಕುರಿತು ಮಾಹಿತಿ ಸಿಗಲಿದೆ. ಅಂತೆಯೇ, ಯಾವ ರಸ್ತೆಗಳಲ್ಲಿ ವೇಗದ ಮಿತಿ ಎಷ್ಟು ಎಂಬುದನ್ನು ಈ ಫೀಚರ್​ಗಳ ಸಹಾಯದಿಂದ ಗೂಗಲ್​ ಮ್ಯಾಪ್​​ ತೋರಿಸುತ್ತದೆ.​

ಇದನ್ನೂ ಓದಿ: ಮೊದಲ ಓವರ್​ನಲ್ಲೇ ಸ್ಪಿನ್​​; ವಿಶ್ವಕಪ್ ಇತಿಹಾಸದಲ್ಲೇ ಯಾರು ಮಾಡಿಲ್ಲ ಈ ದಾಖಲೆ!

ಬಳಕೆದಾರರು ಚಾಲನೆ ಮಾಡುತ್ತಿರುವ ರಸ್ತೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅಂತೆಯೇ,  ಆ ರಸ್ತೆಯಲ್ಲಿ ಇರುವ ಬಂಕ್​ಗಳ ಇಂಧನ ಬೆಲೆ, ರಸ್ತೆ ಕುರಿತಾದ ಮಾಹಿತಿ, ಅಪಘಾತವಾದರೆ ವರದಿ ಮಾಡುವ ಆಯ್ಕೆಯು ಇರಲಿದೆ.

ಇನ್ನು ಗೂಗಲ್​ ಅಸಿಸ್ಟೆಂಟ್​ ಸೌಲಭ್ಯವನ್ನು ಗೂಗಲ್​ ಶೀಘ್ರದಲ್ಲೇ ಸೇರಿಸಲಿದೆ. ಅಂತೆಯೇ, ಮ್ಯಾಪ್​ನಲ್ಲಿ ‘ ಆರ್ಡರ್​ ಆನ್​ಲೈನ್​‘ ಎಂಬ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ.
First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading