ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲ ರಾಷ್ಟ್ರಗಳು ತಮ್ಮ ಕೈಲಾದ ರೀತಿಯಲ್ಲಿ ಹೋರಾಟ ಮಾಡುತ್ತಲೇ ಇವೆ. ಕೆಲವರು ಇದರಲ್ಲಿ ಯಶಸ್ವಿಯಾದರೆ, ಇನ್ನೂ ಕೆಲವರು ಹೋರಾಟ ಮುಂದುವರಿಸುತ್ತಲೇ ಇದ್ದಾರೆ. ಈ ಮಧ್ಯೆ ಕೊರೋನಾ ವಿರುದ್ಧ ಹೋರಾಟ ಮಾಡಲು ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದೆ.
ದಿನದ ಯಾವ ಯಾವ ಸಮಯದಲ್ಲಿ ರೈಲು ನಿಲ್ದಾಣಗಳಲ್ಲಿ ಎಷ್ಟು ಪ್ರಮಾಣದಲ್ಲಿ ಜನ ಸಂದಣಿ ಉಂಟಾಗಬಹಹುದು, ಬೇರೆ ಬೇರೆ ಊರುಗಳಿಗೆ ಬಸ್ಗಳ ಓಡಾಟ ಎಷ್ಟೆಷ್ಟು ಗಂಟೆಗೆ ಇದೆ, ಪ್ರವಾಸ ಕೈಗೊಳ್ಳುತ್ತೀರಿ ಎಂದಾದರೆ ಯಾವ ಯಾವ ಭಾಗದಲ್ಲಿ ಓಡಾಟಕ್ಕೆ ನಿಷೇಧ ಇದೆ ಎಂಬಿತ್ಯಾದಿ ಮಾಹಿತಿ ಗೂಗಲ್ ಮ್ಯಾಪ್ನಲ್ಲಿ ಸಿಗಲಿದೆ. ಭಾರತ, ಅರ್ಜೆಂಟೈನಾ, ಫ್ರಾನ್ಸ್, ನೆದರ್ಲೆಂಡ್, ಅಮೆರಿಕ ಸೇರಿ ಅನೇಕ ರಾಷ್ಟ್ರಗಳಲ್ಲಿ ಗೂಗಲ್ ಮ್ಯಾಪ್ನ ಹೊಸ ಫೀಚರ್ ಸಿಗಲಿದೆ.
ಇದನ್ನೂ ಓದಿ: ಸಣ್ಣ-ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಘೋಷಿಸಿರುವ 3 ಲಕ್ಷ ಕೋಟಿ ಪರಿಹಾರ ಇನ್ನೂ ತಲುಪಿಲ್ಲ; ಆರ್‌ಎಸ್‌ಎಸ್ ಘಟಕ ಆರೋಪ
ಇತ್ತೀಚಿಗೆ ಗೂಗಲ್ 131 ರಾಷ್ಟ್ರಗಳ ಕೋಟ್ಯಾಂತರ ಗೂಗಲ್ ಮ್ಯಾಪ್ ಬಳಕೆದಾರರ ಮಾಹಿತಿಯನ್ನು ವಿಮರ್ಷಿಸುವ ಕೆಲಸ ಮಾಡಿತ್ತು. ಲಾಕ್ಡೌನ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲು ಈ ಮಾಹಿತಿ ಸಹಕಾರಿಯಾಗಿತ್ತು.
ಮ್ಯಾಪ್ ಡಿಜಿಟಲೀಕರಣ ಮಾಡಲು ಗೂಗಲ್ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಪ್ರತಿ ತಿಂಗಳು 100 ಕೋಟಿಗೂ ಅಧಿಕ ಗೂಗಲ್ ಮ್ಯಾಪ್ ಬಳಕೆದಾರರು ವಿಶ್ವದಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ