ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಮ್ಯಾಪ್ವೊಂದಿದ್ದರೆ ಸಾಕು ಯಾವ ಸ್ಥಳಕ್ಕೆ ಬೇಕಾದರು ತೆರಳಬಹುದು. ಅಷ್ಟೇ ಅಲ್ಲದೆ, ಇದರ ಮೂಲಕ ಪೆಟ್ರೋಲ್ ಬಂಕ್, ದೇವಸ್ಥಾನ, ಮಾಲ್, ಹೊಟೇಲ್, ಪಾರ್ಕಿಂಗ್ ಹೀಗೆ ಹತ್ತಿರದ ಅಥವಾ ದೂರದ ನಾನಾ ಸ್ಥಳಗಳನ್ನು ಗುರುತಿಸಬಹುದು. ಅದರ ಜೊತೆಗೀಗ ಗೂಗಲ್ ತನ್ನ ಮ್ಯಾಪ್ನಲ್ಲಿ 23 ಸಿಟಿಗಳಲ್ಲಿನ 57 ಸಾವಿರ ಸಾರ್ವಜನಿಕ ಶೌಚಾಲಯವನ್ನು ಗುರುತಿಸಿದೆ. ಆ ಮೂಲಕ ಗೂಗಲ್ ಮ್ಯಾಪ್ ಮೂಲಕ ಪ್ರಯಾಣಿಸುವವರಿಗೆ ಸುಲಭವಾಗಿ ಸಾರ್ವಜನಿಕ ಶೌಚಾಲಯದ ಬಗ್ಗೆ ಮಾಹಿತಿ ನೀಡಲಿದೆ.
ಪ್ರಯಾಣಿಕರು ಇನ್ಮುಂದೆ ಪ್ರಯಾಣಿಸುವಾಗ ಶೌಚಾಲಯ ಎಲ್ಲಿದೆ? ಎಂದು ಕೇಳಿಕೊಂಡು ಹೋಗುವ ಪ್ರಸಂಗವಿಲ್ಲ. ಸ್ಮಾರ್ಟ್ಫೊನ್ನಲ್ಲಿ ಗೂಗಲ್ ಮ್ಯಾಪ್ ಇನ್ಸ್ಟಾಲ್ ಮಾಡಿದರೆ ಸಾಕು. ನಂತರ ಹತ್ತಿರದ ಸಾರ್ವಜನಿಕ ಶೌಚಾಲಯ ಎಂದು ಟೈಪ್ ಮಾಡಿದರೆ ಸಾಕು. ನಿಮಿಷಾರ್ಧದಲ್ಲೇ ಫಲಿತಾಂಶದಲ್ಲಿ ಹತ್ತಿರವಿರುವ ಶೌಚಾಲಯ ಕಾಣಿಸುತ್ತದೆ.
2016ರಲ್ಲಿ ಸ್ವಚ್ಛ ಭಾರತ್ ಮಿಷನ್, ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಸಹಭಾಗಿತ್ವದಲ್ಲಿ ನವದೆಹಲಿ, ಭೋಪಾಲ್ ಮತ್ತು ಇಂಧೋರ್ ಮೂರು ನಗರದಲ್ಲಿ ಪ್ರಾರಂಭಿಸಲಾಯಿತು. ಸದ್ಯ ಗೂಗಲ್ ಮ್ಯಾಪ್ ಭಾರತದಾದ್ಯಂತ 2,300ಕ್ಕೂ ಹೆಚ್ಚು 57 ಸಾವಿರ ಸಾರ್ವಜನಿಕ ಶೌಚಾಲಯವನ್ನು ಪಟ್ಟಿಮಾಡಿದೆ.
ಗೂಗಲ್ ಮ್ಯಾಪ್ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅನಲ್ ಘೋಷ್, ‘ಸಾರ್ವಜನಿಕ ನೈರ್ಮಲ್ಯ ಸೌಲಭ್ಯಗಳ ಬಗ್ಗೆ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಪ್ರಮುಖ ಅಂಶವಾಗಿದೆ ಎಂದು ನಾವು ನಂಬುತ್ತೇವೆ. ಇದು ಸ್ವಚ್ಛ ಭಾರತ್ ಅಭಿಯಾನದ ಮೂಲಾಧಾರವಾಗಿದೆ ಎಂದರು.
ನಂತರ ಮಾತು ಮುಂದುವರಿಸಿದ ಅವರು "ಭಾರತದಾದ್ಯಂತದ ಸಾರ್ವಜನಿಕ ಶೌಚಾಲದ ಬಗ್ಗೆ ಪ್ರಮುಖ ಮಾಹಿತಿ ಇಟ್ಟುಕೊಂಡು ನಕ್ಷೆಗಳನ್ನು ನವೀಕರಿಸಲು ನಾವು ಸಚಿವಾಲಯದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ, ಆದರೆ ಈ ಶೌಚಾಲಯಗಳನ್ನು ವಿವಿಧ ಬಳಕೆದಾರರ ಪ್ರಶ್ನೆಗಳ ಮೂಲಕ ನಿಖರವಾಗಿ ಮೇಲ್ಮೈಗೆ ತರಲು ನಮ್ಮ ವ್ಯವಸ್ಥೆಗಳನ್ನು ಪರಿಷ್ಕರಿಸುತ್ತೇವೆ – ಮ್ಯಾಪ್ ಮೂಲಕ 2.5 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈಗ ಪ್ರತಿ ತಿಂಗಳು ಸಾರ್ವಜನಿಕ ಶೌಚಾಲಯಗಳನ್ನು ಹುಡುಕುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ