• Home
 • »
 • News
 • »
 • tech
 • »
 • Google Maps: ಇನ್ಮುಂದೆ ಗೂಗಲ್​​ ಮ್ಯಾಪ್​​​ನಲ್ಲಿ ಕೇಳಲಿದೆ ಅಮಿತಾಭ್​ ಬಚ್ಚನ್​ ವಾಯ್ಸ್​​​!

Google Maps: ಇನ್ಮುಂದೆ ಗೂಗಲ್​​ ಮ್ಯಾಪ್​​​ನಲ್ಲಿ ಕೇಳಲಿದೆ ಅಮಿತಾಭ್​ ಬಚ್ಚನ್​ ವಾಯ್ಸ್​​​!

ಅಮಿತಾಭ್​​​​​​ ಬಚ್ಚನ್​​

ಅಮಿತಾಭ್​​​​​​ ಬಚ್ಚನ್​​

Amitabh Bachchan: ಅಮಿತಾಭ್​​ ನಟನೆ ಮಾತ್ರವಲ್ಲದೆ, ಅವರ ಧ್ವನಿ ಕೂಡ ಅಷ್ಟೇ ಜನಪ್ರಿಯ. ಖಾಸಗಿ ಜಾಹೀರಾತು, ಸರ್ಕಾರಿ ಜಾಹೀರಾತು, ಸಿನಿಮಾ ಹೀಗೆ ಅನೇಕ ಸಂಸ್ಥೆಗಳು ಅಮಿತಾಭ್ ಅವರ​​ ಧ್ವನಿಗಾಗಿ ಹಿಂದೆ ಬೀಳುತ್ತಾರೆ. ಇದೀಗ ಟೈಕ್​ ದೈತ್ಯ ಗೂಗಲ್​ ಕೂಡ ಅಮಿತಾಬ್​ ಧ್ವನಿಯ ಹಿಂದೆ ಬಿದ್ದಿದೆ.

ಮುಂದೆ ಓದಿ ...
 • Share this:

  ಬಾಲಿವುಡ್​ ಬಿಗ್​ ಬಿ ಅಮಿತಾಭ್​​​​​​ ಬಚ್ಚನ್​​ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ಅನೇಕ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಅಮಿತಾಭ್​​ ನಟನೆ ಮಾತ್ರವಲ್ಲದೆ, ಅವರ ಧ್ವನಿ ಕೂಡ ಅಷ್ಟೇ ಜನಪ್ರಿಯ. ಖಾಸಗಿ ಜಾಹೀರಾತು, ಸರ್ಕಾರಿ ಜಾಹೀರಾತು, ಸಿನಿಮಾ ಹೀಗೆ ಅನೇಕ ಸಂಸ್ಥೆಗಳು ಅಮಿತಾಭ್ ಅವರ​​ ಧ್ವನಿಗಾಗಿ ಹಿಂದೆ ಬೀಳುತ್ತಾರೆ. ಇದೀಗ ಟೈಕ್​ ದೈತ್ಯ ಗೂಗಲ್​ ಕೂಡ ಅಮಿತಾಭ್​ ಧ್ವನಿಯ ಹಿಂದೆ ಬಿದ್ದಿದೆ.


  ಹೌದು, ಗೂಗಲ್​ ಅಮಿತಾಭ್​ ಬಚ್ಚನ್​ ಅವರನ್ನು ಸಂಪರ್ಕಿಸಿದೆ. ಗೂಗಲ್​ ಮ್ಯಾಪ್​ನಲ್ಲಿ ಧ್ವನಿ ನೀಡಲು ಬಿಗ್​ಬಿ ಅವರನ್ನು ಸಂಪರ್ಕಿಸಿದ್ದು, ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಹೇಳಿದೆಯಂತೆ.


  ಈ ಬಗ್ಗೆ ಮಿಡ್​​ ಡೇ ವರದಿ ಮಾಡಿದ್ದು, ಅಮಿತಾಭ್​ ಅವರು ಗೂಗಲ್​ ಜೊತೆಗೆ ಮಾತನಾಡಿದ್ದಾರೆ. 77 ವರ್ಷದ ಅಮಿತಾಭ್​ ಅವರು ಮನೆಯಿಂದಲೇ ಗೂಗಲ್​ಗೆ ಮ್ಯಾಪ್​ಗೆ ಧ್ವನಿ ನೀಡಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.


  2018ರಲ್ಲಿ ಗೂಗಲ್​​​ ಯಶ್​ ರಾಜ್​​ ಫಿಲ್ಮ್​​​ ಪ್ರೊಡಕ್ಷನ್​ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. 'ಥಗ್ಸ್​ ಆಫ್​​​ ಹಿಂದೂಸ್ತಾನ್‘​​ ಸಿನಿಮಾದಲ್ಲಿ ಅಮೀರ್​​​​ ಖಾನ್ ನಟಿಸಿದ ಫಿರಂಗಿ ಪಾತ್ರದ ಸಂಭಾಷಣೆಗಾಗಿ ಗೂಗಲ್​​ ಇವರನ್ನು ಸಂಪರ್ಕ ಮಾಡಿತ್ತು. ಇದು ಬಾಲಿವುಡ್​ ಫಿಲ್ಮ್​ ಪ್ರೊಡಕ್ಷನ್​ ಜೊತೆ ಗೂಗಲ್​ ಮಾಡಿದ ಮೊದಲ ಒಪ್ಪಂದವಾಗಿದೆ.


  ಗೂಗಲ್​ ಭಾರತೀಯರಿಗೆ ಹತ್ತಿರವಾಗಲು ನಾನಾ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಗೂಗಲ್​ ಮ್ಯಾಪ್​​​​ ಜನರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವ ಸಲುವಾಗಿ ಕೆಲವು ಫೀಚರ್​ಗಳನ್ನು ನೀಡಿದೆ. ಇದೀಗ ಗೂಗಲ್​ ಮ್ಯಾಪ್​ನಲ್ಲಿ ಖ್ಯಾತ ನಟ ಅಮಿತಾಭ್​ ಬಚ್ಚನ್​ ಅವರ ಧ್ವನಿಯನ್ನು ಸಂಯೋಜಿಸಲು ಮುಂದಾಗಿದೆ.


  Published by:Harshith AS
  First published: