ಇನ್ಮುಂದೆ ಗೂಗಲ್​ ಮ್ಯಾಪ್​ನಲ್ಲಿ ಶೌಚಾಲಯವನ್ನು ಹುಡುಕಬಹುದು!

ಕೇಂದ್ರ ಸರ್ಕಾರದ ‘ಲೈ ರಿವೀಸ್​‘ ಅಭಿಯಾನದಿಂದ ಸುಮಾರು 45 ಸಾವಿರ ಶೌಚಾಲಯಗಳ ಲೊಕೇಶನ್​​ಗಳನ್ನು ಗುರುತಿಸುವಂತೆ ಗೂಗಲ್​ ಮ್ಯಾಪ್​​ ಅನ್ನು ಸಿದ್ಧಪಡಿಸಿದೆ. ಇದರಿಂದ ನಗರ ಪ್ರದೇಶದಲ್ಲಿ ಗೂಗಲ್​ ಮ್ಯಾಪ್​ ಬಳಸಿ ಹತ್ತಿರದ ಶೌಚಾಲಯವನ್ನು ಬಳಸಬಹುದಾಗಿದೆ.

Harshith AS | news18
Updated:July 18, 2019, 6:21 PM IST
ಇನ್ಮುಂದೆ ಗೂಗಲ್​ ಮ್ಯಾಪ್​ನಲ್ಲಿ ಶೌಚಾಲಯವನ್ನು ಹುಡುಕಬಹುದು!
ಗೂಗಲ್​ ಮ್ಯಾಪ್
Harshith AS | news18
Updated: July 18, 2019, 6:21 PM IST
ಪ್ರಯಾಣದ ವೇಳೆ ಪ್ರಕೃತಿ ಕರೆಗೆ ಓಗೊಡುವ ಅನಿವಾರ್ಯತೆ ಸೃಷ್ಠಿಯಾದರೆ ನಿಭಾಯೊಸೋದು ತುಂಬಾನೇ ಕಷ್ಟ. ನಗರ ಪ್ರದೇಶದಲ್ಲಿ, ಟ್ರಾಫಿಕ್​ ಮಧ್ಯೆ ಇಂತಹ ಸಮಸ್ಯೆ ಬಂದಾಗ ಶೌಚಾಲಯ ಹುಡುಕಾಡುವ  ಸ್ಥಿತಿ ಬರುತ್ತದೆ. ಹಾಗಾಗೀ ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಗೂಗಲ್ ಮ್ಯಾಪ್​​ ಶೌಚಾಲಯಗಳನ್ನು ಗುರುತಿಸುವ ಹೊಸ ಆಯ್ಕೆಯೊಂದನ್ನು ನೀಡಿದೆ.

ಕೇಂದ್ರ ಸರ್ಕಾರದ ‘ಲೈ ರಿವೀಸ್​‘ ಅಭಿಯಾನದಿಂದ ಸುಮಾರು 45 ಸಾವಿರ ಶೌಚಾಲಯಗಳ ಲೊಕೇಶನ್​​ಗಳನ್ನು ಗುರುತಿಸುವಂತೆ ಗೂಗಲ್​ ಮ್ಯಾಪ್​​ ಅನ್ನು ಸಿದ್ಧಪಡಿಸಿದೆ. ಇದರಿಂದ ನಗರ ಪ್ರದೇಶದಲ್ಲಿ ಗೂಗಲ್​ ಮ್ಯಾಪ್​ ಬಳಸಿ ಹತ್ತಿರದ ಶೌಚಾಲಯವನ್ನು ಬಳಸಬಹುದಾಗಿದೆ.

ಇದನ್ನೂ ಓದಿ: ಅತೃಪ್ತರಿಗೆ ಅನರ್ಹತೆಯ ಭಯ ನಿವಾರಿಸಲು ಬಿಜೆಪಿಯಿಂದ ಸುಪ್ರೀಂ ರಕ್ಷಣೆಯ ಭರವಸೆ

ಕಳೆದ ವರ್ಷ ಸೆಪ್ಟೆಂಬರ್ ​ತಿಂಗಳಿನಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಇಲಾಖೆ ಶೌಚಾಲಯದ ಸಮಸ್ಯೆ ಗಹನವಾಗಿ ಪರಿಶೀಲಿಸಲು ಆಯೋಜನೆಯನ್ನು ಹಾಕಿಕೊಂಡಿತ್ತು. ಹಾಗಾಗೀ ಸ್ಥಳೀಯ ಶೌಚಾಲಯಗಳನ್ನು ರೇಟ್​ ಮತ್ತು ರಿವ್ಯೂ ಮಾಡಲು ಅಭಿಯಾನವೊಂದನ್ನು ಎರ್ಪಡಿಸಿತ್ತು.

ಇನ್ನು ಕಳೆದ ಬಜೆಟ್​ನಲ್ಲೂ ಶೌಚಾಲಯ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್​ ಈ ಬಗ್ಗೆ ಉಲ್ಲೇಖಿಸಿದ್ದರು. ದೇಶದಲ್ಲಿ 1700 ನಗರ ಪ್ರದೇಶಗಳಲ್ಲಿ 45,000ಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವಲ್ಲಿ ಯೋಜನೆ ಹಾಕಿಕೊಂಡಿದ್ದರು.

ಇದೀಗ ಗೂಗಲ್​ ಹೊಸದಾದ ಕಾರ್ಯಕ್ಕೆ ಮುಂದಾಗಿದ್ದು, ನಗರ ಪ್ರದೇಶದಲ್ಲಿ ಶೌಚಾಲಯವನ್ನು ಹುಡುಕುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಗೂಗಲ್​ ಮ್ಯಾಪ್ ಬಳಸಿ ಶೌಚಾಲಯವನ್ನು ಸುಲಭವಾಗಿ ಹುಡುಕಬಹುದಾಗಿದೆ.
Loading...

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...