ಗೂಗಲ್ ಮ್ಯಾಪ್ ಸಾಕಷ್ಟು ಜನರಿಗೆ ಅವಲಂಬನೆಯಾಗಿಬಿಟ್ಟಿದೆ. ಸುಲಭ ಸಂಚಾರ ಹಾಗೂ ತಿಳಿಯದೆ ಇರುವ ದಾರಿಯಲ್ಲಿ ಸಾಗಲು ಜನರು ಗೂಗಲ್ ಮ್ಯಾಪ್ನ ಸಹಾಯವನ್ನು ಪಡೆಯುತ್ತಿದ್ದಾರೆ. ಆದರೆ ಗೂಗಲ್ ಮ್ಯಾಪ್ನಿಂದಾಗಿ ಗೋವಾದಲ್ಲಿ ಅವಾಂತರ ಸೃಷ್ಠಿಯಾಗಿದ್ದು, ಬಾಗಾ ಬೀಚ್ಗೆ ತೆರಳುವ ಪ್ರವಾಸಿಗರು ಇನ್ನಾವುದೋ ಪ್ರದೇಶಕ್ಕೆ ತೆರಳಿ ಮೂರ್ಖರಾಗುತ್ತಿದ್ದಾರೆ.
ಗೂಗಲ್ ಮ್ಯಾಪ್ ಆದರಿಸಿ ಬಾಗಾ ಬೀಚ್ಗೆಂದು ದಾರಿ ತಪ್ಪಿ ಬರುವ ಪ್ರವಾಸಿಗರಿಗೆ ಅಲ್ಲಿನ ಜನರು ದೊಡ್ಡ ಪ್ರಕಟನೆಯ ಫಲಕವನ್ನು ಹಾಕಿದ್ದಾರೆ, ಫಲಕದಲ್ಲಿ ‘ ನೀವು ಗೂಗಲ್ ಮ್ಯಾಪ್ನಿಂದ ಮೂರ್ಖರಾಗಿದ್ದಾರೆ. ಇದು ತಪ್ಪುದಾರಿಯಾಗಿದೆ. ಪುನಃ ಹಿಂದಕ್ಕೆ ಚಲಿಸಿ ಎಡಕ್ಕೆ ಚಾಚಿದ ದಾರಿಯಲ್ಲಿ 1 ಕಿ.ಮೀ ಸಂಚರಿಸಿ‘ ಎಂದು ಬರೆದಿದ್ದಾರೆ.
ಈ ಕುರಿತಂತೆ ಪ್ರವಾಸಿಗಳು ಅಲ್ಲಿನ ಫಲಕದಲ್ಲಿರುವ ಪ್ರಕಟನೆಯನ್ನು ಟ್ವಿಟ್ಟರ್ ಖಾತೆಯ ಮೂಲಕ ಹರಿಯ ಬಿಟ್ಟಿದ್ದಾನೆ.
Hahaha. @googlemaps what's the route to Baga beach? 😀
Photo credits: masud. pic.twitter.com/0K2wK2TQD2
— Sumanth Raj Urs (@tweesumz) February 16, 2019
Same misleading route given today by Google. Place was hardly 700mtrs away whereas Google showed 1.5 km away
— R Kush (@Hariomsuttsutt) February 17, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ