Google Doodle: ಮಹಿಳಾ ದಿನಾಚರಣೆಗೆ ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್​!

ಗೂಗಲ್​​ ಡೂಡಲ್​

ಗೂಗಲ್​​ ಡೂಡಲ್​

ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೂಗಲ್​ ಡೂಡಲ್​ನಲ್ಲಿ ವಿಶೇಷವಾದ ಆ್ಯನಿಮೇಶನ್​ ಮಾಡುವ ಮೂಲಕ ಆಚರಿಸ್ತಾ ಇದೆ. ಈ ಮೂಲಕ ಪರಸ್ಪರ ಜೊತೆಯಾಗಿ, ಬೆಂಬಲ ನೀಡುವಂತೆ ಸೂಚಿಸಲಾಗಿದೆ.

  • Share this:

    ಮಾರ್ಚ್​​ 8 ಎಂದಾಗ ಮೊದಲು ನೆನಪಾಗೋದೇ ಅಂತರಾಷ್ಟ್ರೀಯ ಮಹಿಳಾ ದಿನಾಚರೆಣೆ (International Women's Day). ಈ ಸಂದರ್ಭದಲ್ಲಿ ನಾವೆಲ್ಲರೂ ಪ್ರಪಂಚದಲ್ಲಿರುವ ಪ್ರತಿಯೊಂದು ಮಹಿಳೆಯರಿಗೂ ಗೌರವ ಸಲ್ಲಿಸಲೇ ಬೇಕು. ಅದೇ ರೀತಿ ಇಂದು ಗೂಗಲ್​ ಸಹ ಮಹಿಳಾ ದಿನಾಚರಣೆಯನ್ನು ಆಚರಿಸ್ತಾ ಇದೆ. ಗೂಗಲ್​ ಯಾವುದೇ ಒಂದು ವಿಶೇಷ ದಿನಗಳು ಬಂದಾಗ, ಯಾರದ್ದಾದರು ಸಾಧಕರ ಹುಟ್ಟುಹಬ್ಬದ ಪ್ರಯುಕ್ತ ಫೋಟೋ, ಆ್ಯನಿಮೇಶನ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡ್ತದೆ.  ಅದೇ ರೀತಿ ಗೂಗಲ್​ ಡೂಡಲ್ (Google Doodle)​ ಇಂದು ಅಂದರೆ ಮಾರ್ಚ್​​ 8 ರಂದು ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಆ್ಯನಿಮೇಶನ್ (Animation)​ ಮಾಡುವ ಮೂಲಕ ಆಚರಣೆ ಮಾಡ್ತಾ ಇದೆ.


    ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೂಗಲ್​ ಡೂಡಲ್​ನಲ್ಲಿ ವಿಶೇಷವಾದ ಆ್ಯನಿಮೇಶನ್​ ಮಾಡುವ ಮೂಲಕ ಆಚರಿಸ್ತಾ ಇದೆ. ಈ ಮೂಲಕ ಪರಸ್ಪರ ಜೊತೆಯಾಗಿ, ಬೆಂಬಲ ನೀಡುವಂತೆ ಸೂಚಿಸಲಾಗಿದೆ.


    ಗೂಗಲ್​ ಡೂಡಲ್​ನಲ್ಲಿ ಏನಿದೆ?


    ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈ ಬಾರಿ ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಮಹಿಳೆಯರಿಗೆ ತಮ್ಮ ದೈನಂದಿನ ಬದುಕಿನಲ್ಲಿ ಪರಸ್ಪರ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ವಿಧಾನಕ್ಕೆ ಒತ್ತು ನೀಡಿದೆ. ಮಹಿಳೆಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವುದು, ಕೆಲವರು ಅವರ ಮಾತನ್ನು ಗಮನವಿಟ್ಟು ಆಲಿಸುತ್ತಿರುವುದು. ಅದೇ ಸಮಯದಲ್ಲಿ, ಇಬ್ಬರು ಮಹಿಳೆಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿರುವುದು, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಸೇವೆಯನ್ನು ಕೂಡ ಗೂಗಲ್ ಸ್ಮರಿಸಿದೆ.


    ಇದನ್ನೂ ಓದಿ: ಹೊಸ ರಿಚಾರ್ಜ್ ಪ್ಲಾನ್ ತಂದ ಜಿಯೋ, ಈ ಯೋಜನೆಯಲ್ಲಿ ಹೆಚ್ಚುವರಿ 87 ಜಿಬಿ ಡೇಟಾ, 23 ದಿನಗಳ ವ್ಯಾಲಿಡಿಟಿ!


    ಈ ಗೂಗಲ್​ ಡೂಡಲ್​ನಲ್ಲಿರುವ ಈ ಫೋಟೋ ಮೇಲೆ ಕ್ಲಿಕ್ ಮಾಡಿದಾಗ ಗೂಗಲ್ ಬಳಕೆದಾರರನ್ನು ಆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿ ಲಭ್ಯವಿರುತ್ತದೆ.


    ಫೋಟೋ, ಸುದ್ದಿಗಳು ಲಭ್ಯ


    ಇವುಗಳಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಫೋಟೋಗಳು, ಸುದ್ದಿಗಳು, ವಿಡಿಯೋಗಳು ಮತ್ತು ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಹೊಸ ಪುಟಕ್ಕೆ ಹೋಗುತ್ತಿದ್ದಂತೆಯೇ ಮಹಿಳೆಯರು ಕೈಗಳಲ್ಲಿ ಬಾವುಟವನ್ನು ಹಿಡಿದು ಸಾಗುವ ದೃಶ್ಯವನ್ನು ಸಹ ಕಾಣಬಹುದು.


    ಗೂಗಲ್​​ ಡೂಡಲ್​


    ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು?


    1909 ಫೆಬ್ರುವರಿ 28ರಂದು ಮೊದಲ ವರ್ಷದ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಆಚರಿಸಲಾಯಿತು. 1908ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಗಾರ್ಮೆಂಟ್‌ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸೋಷಿಯಲಿಸ್ಟ್‌ ಪಾರ್ಟಿ ಆಫ್‌ ಅಮೆರಿಕ ಈ ದಿನವನ್ನು ಮಹಿಳೆಯರಿಗೆ ಸಮರ್ಪಿಸಿತ್ತು. ಅಲ್ಲದೆ ಆಗ ತಮ್ಮ ಕೆಲಸದ ಕಠಿಣ ಪರಿಸ್ಥಿತಿಗಳ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು.


    1977ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ಅನ್ನು ಅಂತಾರಾರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲು ನಿರ್ಧರಿಸಲಾಯಿತು.


    1945ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಯ ತತ್ವವನ್ನು ದೃಢೀಕರಿಸುವ ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಯಿತು. ಆದರೆ 1975ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಅಂತಾರಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಿತ್ತು.




    ಮಹಿಳಾ ದಿನಾಚರಣೆಯ ಅರ್ಥ


    ಮಹಿಳಾ ದಿನವು ನಮ್ಮ ಸಮಾಜಕ್ಕೆ ಮಹಿಳೆಯರ ಕೊಡುಗೆ ಮತ್ತು ಅವರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ತಿಳಿಯುವಂತೆ ಮಾಡುತ್ತದೆ. ಲಿಂಗ ಸಮಾನತೆ, ಸಮಾನ ವೇತನ, ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ವೈವಿಧ್ಯಮಯ, ಸಮಾನ ಮತ್ತು ಅಂತರ್ಗತ ಜಗತ್ತನ್ನು ಆಶಿಸುತ್ತಿದೆ ಎಂದು ಬಿಂಬಿಸಲು ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯು ಭಿನ್ನಾಭಿಪ್ರಾಯಗಳನ್ನು ಸರಿದೂಗಿಸುವ ಮತ್ತು ಆಚರಿಸುವ ಸಮುದಾಯಕ್ಕೆ ಶುಭ ಹಾರೈಸುತ್ತದೆ.

    Published by:Prajwal B
    First published: