Advertisementಗಾಗಿ ಅಡ್ಡದಾರಿ ಹಿಡೀತಾ ಗೂಗಲ್? Google ಮೇಲಿನ ಆರೋಪಗಳೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಗೂಗಲ್‍ನ ಆಂತರಿಕ ಚರ್ಚೆಯ ವೇಳೆ ಅಲ್ಲಿನ ಉದ್ಯೋಗಿಗಳು ಸ್ಥಳ ಮಾಹಿತಿ ಬಹಿರಂಗಗೊಳಿಸುವ ಪ್ರಕ್ರಿಯೆ ನಿಜಕ್ಕೂ ಗೊಂದಲಕಾರಿ ಎಂದು ಹೇಳಲಾಗಿದೆ

Google

Google

  • Share this:
ನಾವಿರುವ ಸ್ಥಳ, ಅಭಿರುಚಿ, ಹುಡುಕಾಟ ಮೊದಲಾದವುಗಳನ್ನು ಅವಲಂಬಿಸಿ ವೆಬ್‌ ಸರ್ಫಿಂಗ್‌  (Web surfing)  ಸಂಸ್ಥೆಗಳು ಗ್ರಾಹಕರಿಗೆ ಜಾಹೀರಾತು ಕಳುಹಿಸುತ್ತವೆ. ಆದರೆ, ಬಳಕೆದಾರರ ಆಯ್ಕೆಗೆ ವಿರುದ್ಧವಾಗಿ ಜಾಹೀರಾತುಗಳನ್ನು(Advertisements) ಬಲವಂತವಾಗಿ ನೀಡುತ್ತಿರುವ ಆರೋಪವನ್ನು ಈಗ ಜಾಗತಿಕ ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಸಂಸ್ಥೆ ಎದುರಿಸುತ್ತಿದೆ. ಆಲ್ಫಬೆಟ್ (Alphabet Inc) ಇಂಕ್ ಸಂಸ್ಥೆಯ ಗೂಗಲ್ ವಿರುದ್ಧ ಬಳಕೆದಾರರು ತಮ್ಮ ನಿರ್ದಿಷ್ಟ ಜಾಗದ ಕುರಿತು ದತ್ತಾಂಶ ಬಹಿರಂಗಪಡಿಸುವಂತಹ ವಂಚಕ ತಂತ್ರಗಳ ಮೂಲಕ ಅವರನ್ನು ಗುರಿಯಾಗಿಸಿಕೊಂಡು ಜಾಹೀರಾತು ಪ್ರದರ್ಶಿಸುವ ಕೆಲಸ ಮಾಡುತ್ತಿದೆಯೆಂದು ಆರೋಪಿಸಿ ಅಮೆರಿಕದ(United States) ಟೆಕ್ಸಾಸ್, ಇಂಡಿಯಾನಾ ಹಾಗೂ ವಾಷಿಂಗ್ಟನ್ ಡಿಸಿ ರಾಜ್ಯಗಳ ರಾಜ್ಯ ಅಟಾರ್ನಿ ಜನರಲ್‍ಗಳ ಗುಂಪು ಮೊಕದ್ದಮೆ(Lawsuit) ದಾಖಲಿಸಲು ಮುಂದಾಗಿದೆ.

ವೆಬ್ & ಆ್ಯಪ್ ಆ್ಯಕ್ಟಿವಿಟಿ
ಬಳಕೆದಾರರು ತಮ್ಮ ಮೊಬೈಲ್ ಪೋನ್‍ಗಳಲ್ಲಿ ಸ್ಥಳ ಪತ್ತೆಯನ್ನು ಬಂದ್‍ ಮಾಡಿದ್ದರೂ, ಗೂಗಲ್ ತನ್ನ ಪ್ರತ್ಯೇಕ ಕಾರ್ಯತಂತ್ರವಾದ “ವೆಬ್ & ಆ್ಯಪ್ ಆ್ಯಕ್ಟಿವಿಟಿ” ಮೂಲಕ ಬಳಕೆದಾರರ ಚಲನವಲನದ ಮೇಲೆ ನಿಗಾ ಇಟ್ಟಿರುತ್ತದೆ ಎಂದು ಅಟಾರ್ನಿ ಜನರಲ್‍ಗಳು ಆರೋಪಿಸಿದ್ದಾರೆ. ತಮ್ಮ ಆರೋಪಕ್ಕೆ ಪ್ರತಿಯಾಗಿ ಅವರು 2018ರಲ್ಲಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ಮಾಡಿರುವ ವರದಿ ಆಧಾರವೆಂದು ಹೇಳಿದ್ದಾರೆ.

ಈ ಕುರಿತು ಗ್ರಾಹಕರೊಬ್ಬರು ನೀಡಿದ್ದ ಸೂಚನೆಯನ್ನು ತೆಗೆದು ಹಾಕಿರುವ ಕಂಪನಿಯು, “ನೀವು ಪ್ರಯಾಣಿಸುವ ಸ್ಥಳಗಳನ್ನು ಇನ್ನು ಮುಂದೆ ಸಂಗ್ರಹಿಸಿಡಲಾಗುವುದಿಲ್ಲ” ಎಂದು ಉತ್ತರಿಸಿದೆ. ಮೊಕದ್ದಮೆ ಪ್ರತಿಗಳು ಲಭ್ಯವಾಗಿದ್ದು, ವಾಷಿಂಗ್ಟನ್ ಡಿಸಿ ದೂರನ್ನು ಮೊಹರಿನೊಂದಿಗೆ ಸಲ್ಲಿಸಲಾಗಿದೆ.

ವಾಷಿಂಗ್ಟನ್ ಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, “ವಾಸ್ತವವಾಗಿ ಗ್ರಾಹಕರು ತಾವು ಆಯ್ದುಕೊಳ್ಳುವ ಸೆಟ್ಟಿಂಗ್ಸ್ ಹೊರತಾಗಿಯೂ, ಗೂಗಲ್ ಉತ್ಪನ್ನಗಳನ್ನು ಬಳಸುವವರಿಗೆ ಕಂಪನಿಯು ತಮ್ಮ ಚಲನವಲನಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡು, ಅವುಗಳನ್ನು ಬಳಸಲು ಅವಕಾಶ ನೀಡುವುದಲ್ಲದೆ ಬೇರೆ ಆಯ್ಕೆಯೇ ಉಳಿದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Google Smartwatch: ಸದ್ಯದಲ್ಲೇ ಗೂಗಲ್​ ಪರಿಚಯಿಸಲಿದೆ ಹೊಸ ಸ್ಮಾರ್ಟ್​ವಾಚ್​! ಏನಿದರ ವಿಶೇಷತೆ?

ಗ್ರಾಹಕರ ವೆಬ್ ಬ್ರೌಸಿಂಗ್
ಈ ವಾದಗಳು ಮತ್ತೊಂದು ಸುತ್ತಿನ ಕಾನೂನು ಸವಾಲುಗಳಿಗೆ ಕಾರಣವಾಗಿದ್ದು, ನಿಯಂತ್ರಕರು ಹಾಗೂ ಗ್ರಾಹಕರ ವಕೀಲರಿಂದ ತೀವ್ರ ನಿಗಾವಣೆಗೆ ಒಳಪಟ್ಟಿರುವ ಗೂಗಲ್‍ನ ಮಾಹಿತಿ ಸಂಗ್ರಹವು ಗ್ರಾಹಕರು ಬಯಸಲಿ ಅಥವಾ ಬಯಸದಿರಲಿ ಹೆಚ್ಚು ಆಕ್ರಮಣಕಾರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗೂಗಲ್‍ನ ‘incognito mode’ ಅನ್ನು ನಂಬಿರುವ ಗ್ರಾಹಕರ ವೆಬ್ ಬ್ರೌಸಿಂಗ್ ಅನ್ನು ಗೂಗಲ್ ಅನುಸರಿಸಲಿದೆಯೆ ಎಂಬ ಬಗ್ಗೆ ಈಗಾಗಲೇ ದೊಡ್ಡ ಪ್ರಶ್ನೆ ಎದುರಿಸುತ್ತಿದೆ. ಈ ಮಾರ್ಗವು ಗ್ರಾಹಕರ ಗುರುತು ಹಾಗೂ ಬಳಕೆದಾರರು ಅದರ ಚಟುವಟಿಕೆಯನ್ನು ಹಿಂಬಾಲಿಸುವ ಕುಕೀಸ್ ಅನ್ನು ಯಶಸ್ವಿಯಾಗಿ ತಡೆ ಹಿಡಿಯುತ್ತದೆಯೇ ಎಂಬ ಕುರಿತೂ ಗೂಗಲ್ ಉತ್ತರಿಸಬೇಕಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್ ವಕ್ತಾರ ಜೋಸ್ ಕಾಸ್ಟನೀಡಾ, “ಈ ಮೊಕದ್ದಮೆಗಳು ಅಸಮರ್ಪಕ ವಾದಗಳನ್ನು ಆಧರಿಸಿದ್ದು, ನಮ್ಮ ಸೆಟ್ಟಿಂಗ್‍ಗಳ ಕುರಿತ ಪುರಾತನ ಗ್ರಹಿಕೆಯನ್ನು ಹೊಂದಿವೆ. ನಾವು ಯಾವಾಗಲೂ ನಮ್ಮ ಉತ್ಪನ್ನಗಳಲ್ಲಿ ಖಾಸಗಿ ವೈಶಿಷ್ಟ್ಯಗಳನ್ನು ಒದಗಿಸಿದ್ದು, ಸ್ಥಳ ದತ್ತಾಂಶ ಕುರಿತಂತೆ ಕ್ರಾಂತಿಕಾರಕ ನಿಯಂತ್ರಣವನ್ನು ಒದಗಿಸಿದೆ. ನಾವು ನಮ್ಮನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ ಹಾಗೂ ನಮ್ಮ ಸಮರ್ಥನೆಗೆ ಪೂರಕವಾಗಿ ನೇರವಾಗಿ ದಾಖಲೆಗಳನ್ನು ಒದಗಿಸುತ್ತೇವೆ” ಎಂದು ಹೇಳಿದ್ದಾರೆ.

ಗೂಗಲ್‍ನ ಆಂತರಿಕ ಚರ್ಚೆ
ಆದರೆ, ಅಟಾರ್ನಿ ಜನರಲ್‍ಗಳ ಪ್ರಕಾರ, ಕಂಪನಿಯು ಯೂಸರ್ ಸೆಟ್ಟಿಂಗ್ಸ್‌ ಅನ್ನು ಸಂಕೀರ್ಣ ಹಾಗೂ ಗೊಂದಲಮಯಗೊಳಿಸುತ್ತಿದ್ದು, ಗ್ರಾಹಕರು ತಮ್ಮ ಸ್ಥಳ ದತ್ತಾಂಶವನ್ನು ಗೂಗಲ್ ಸಂಗ್ರಹಿಸದಂತೆ ಮಾಡುವುದು ಬಹುತೇಕ ಅಸಂಭವವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mobile OS: ಭಾರತೀಯ ಓಎಸ್ ರಚಿಸಲು ಮೋದಿ ಸರ್ಕಾರ ಪ್ಲಾನ್​; Google, Apple iOSಗೆ ಪೈಪೋಟಿ ನೀಡುತ್ತಾ?

ಕೊಲಂಬಿಯಾ ಜಿಲ್ಲೆಯ ಮೊಕದ್ದಮೆ ಪ್ರಕಾರ, ಗೂಗಲ್‍ನ ಆಂತರಿಕ ಚರ್ಚೆಯ ವೇಳೆ ಅಲ್ಲಿನ ಉದ್ಯೋಗಿಗಳು ಸ್ಥಳ ಮಾಹಿತಿ ಬಹಿರಂಗಗೊಳಿಸುವ ಪ್ರಕ್ರಿಯೆ “ನಿಜಕ್ಕೂ ಗೊಂದಲಕಾರಿ” ಎಂದು ಹೇಳಿದ್ದಾರೆ. ಖಾತೆಯ ಸೆಟ್ಟಿಂಗ್‍ ಅನ್ನು ಬಳಕೆದಾರರು ನಿಯಂತ್ರಣ ಹೊಂದಿದ್ದಾರೆ ಎಂಬ ಭ್ರಮೆ ಹುಟ್ಟಿಸುವಂತೆ ವಿನ್ಯಾಸಗೊಳಿಸಲಾಗಿದ್ದರೂ, ಅದನ್ನು ಅನುಭವಿಸಲು ಬಳಕೆದಾರರ ಪಾಲಿಗೆ ಅಕ್ಷರಶಃ ತೊಂದರೆದಾಯಕವಾಗಿದೆ ಎಂದು ಮಾತನಾಡಿಕೊಂಡಿದ್ದಾರೆ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದ್ದರೂ, ಈ ಮಾಹಿತಿಯ ಮೂಲ ಯಾವುದು ಎಂಬುದನ್ನು ಮಾತ್ರ ಬಹಿರಂಗಗೊಳಿಸಿಲ್ಲ
Published by:vanithasanjevani vanithasanjevani
First published: