Google Live Transcribe: ಕಿವಿ ಕೇಳದವರಿಗಾಗಿಯೇ ಇದೆ ಈ ಆ್ಯಪ್​​, ಕನ್ನಡದಲ್ಲೂ ಬಳಸಬಹುದು!

ಗೂಗಲ್ ಲೈವ್ ಟ್ರಾನ್ಸ್‌ಕ್ರೈಬ್

ಗೂಗಲ್ ಲೈವ್ ಟ್ರಾನ್ಸ್‌ಕ್ರೈಬ್

ಗೂಗಲ್ ಲೈವ್ ಟ್ರಾನ್ಸ್‌ಕ್ರೈಬ್ ಆ್ಯಪ್ ಶ್ರವ್ಯ ದೋಷ ಇರುವವರಿಗೆ ಸಹಕಾರಿಯಾಗಿದ್ದು ತ್ವರಿತ ಟಿಪ್ಪಣಿ ಮಾಡುವವರಿಗೆ ಕೂಡ ಇದು ನೆರವಾಗಲಿದೆ.

  • Share this:

ಗೂಗಲ್ ಹೆಚ್ಚು ಉಪಯೋಗಕಾರಿ ಹಾಗೂ ಸರಳವಾದ ಆ್ಯಪ್ ಹೊಂದಿದ್ದು ಇದರ ಹೆಸರು ಲೈವ್ ಟ್ರಾನ್ಸ್‌ಕ್ರೈಬ್ ಎಂದಾಗಿದೆ. ಇದರ ಗಾತ್ರ 7MBಯಾಗಿದೆ. ಇದರ ಮೂಲಕ ನೀವು ಯಾರು ಮಾತನಾಡುತ್ತಿದ್ದಾರೆ ಎಂಬುದನ್ನು ಆಲಿಸಬಹುದು ಹಾಗೂ ನೈಜ ಸಮಯದಲ್ಲಿಯೇ ಸುಲಭವಾಗಿ ಓದಬಹುದಾದ ಪಠ್ಯಕ್ಕೆ ಅದನ್ನು ಲಿಪ್ಯಂತರಗೊಳಿಸಬಹುದು. ಗೂಗಲ್ ಲೈವ್ ಟ್ರಾನ್ಸ್‌ಕ್ರೈಬ್ ಆ್ಯಪ್ ಶ್ರವ್ಯ ದೋಷ ಇರುವವರಿಗೆ ಸಹಕಾರಿಯಾಗಿದ್ದು ತ್ವರಿತ ಟಿಪ್ಪಣಿ ಮಾಡುವವರಿಗೆ ಕೂಡ ಇದು ನೆರವಾಗಲಿದೆ. ಹೆಚ್ಚಿನ ಆ್ಯಂಡ್ರಾಯ್ಡ್ ಡಿವೈಸ್‌ಗಳಲ್ಲಿ ಈ ಆ್ಯಪ್ ಪ್ರಿ-ಲೋಡ್ ಆಗಿರುತ್ತದೆ ನಿಮ್ಮ ಡಿವೈಸ್ ಇಲ್ಲವೇ ಟ್ಯಾಬ್ಲೆಟ್‌ನಲ್ಲಿ ಈ ಆ್ಯಪ್ ಇಲ್ಲ ಎಂದಾದಲ್ಲಿ ನೀವದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.


ಆ್ಯಂಡ್ರಾಯ್ಡ್‌ನಲ್ಲಿ ಮಾತ್ರವೇ ಗೂಗಲ್ ಲೈವ್ ಟ್ರಾನ್ಸ್‌ಕ್ರೈಬ್ ಆ್ಯಪ್ ಲಭ್ಯವಿದ್ದು ಆ್ಯಂಡ್ರಾಯ್ಡ್ ಡಿವೈಸ್ ಅಥವಾ ಕ್ರೋಮ್‌ ಬುಕ್ ಡಿವೈಸ್‌ಗಳಲ್ಲಿ ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.


ಹಾಗಾದರೆ ಈ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


ಹಂತ 1:ಪ್ಲೇ ಸ್ಟೋರ್ ತೆರೆಯಿರಿ ಹಾಗೂ “ಲೈವ್ ಟ್ರಾನ್ಸ್‌ಕ್ರೈಬ್” ಆ್ಯಪ್ ಹುಡುಕಿ.


ಹಂತ 2:ನಿಮ್ಮ ಫೋನ್‌ನಲ್ಲಿ ಆ್ಯಪ್ ಅನ್ನು ಮೊದಲೇ ಇನ್‌ಸ್ಟಾಲ್ ಮಾಡಿದ್ದರೆ, ಇನ್‌ಸ್ಟಾಲ್ ಬಟನ್ ಸ್ಥಳದಲ್ಲಿ ತೆರೆದ ಬಟನ್ ಅನ್ನು ನೀವು ನೋಡುತ್ತೀರಿ. ಈಗಾಗಲೇ ಅಳವಡಿಸದಿದ್ದರೆ ಇನ್‌ಸ್ಟಾಲ್ ಕ್ಲಿಕ್ ಮಾಡಿ.


ಹಂತ 3:ಒಮ್ಮೆ ಆ್ಯಪ್ ಅಳವಡಿಕೆಯಾದ ನಂತರ, ಆ್ಯಪ್ ಲಾಂಚ್ ಮಾಡಲು ಓಪನ್ ಬಟನ್ ಆಯ್ಕೆಮಾಡಿ.


ಹಂತ 4:ಮೊದಲ ಬಾರಿಗೆ ನೀವು ಆ್ಯಪ್ ತೆರೆಯುತ್ತಿದ್ದರೆ, ಆಡಿಯೋ ರೆಕಾರ್ಡ್ ಮಾಡಲು ಅನುಮತಿ ಕೇಳುತ್ತದೆ. “ಅನುಮತಿಸಿ” ಅಥವಾ “ಅಪ್ಲಿಕೇಶನ್ ಬಳಸುವಾಗ” ಆಯ್ಕೆಮಾಡಿಕೊಂಡು ಅನುಮತಿಸಿ.


ಹಂತ 5:ನಿಮ್ಮ ಫೋನ್‌ನಲ್ಲಿ ಏನಾದರೂ ಮಾತನಾಡಿ ಅಥವಾ ನಿಮ್ಮ ಸುತ್ತಲಿರುವ ಯಾರನ್ನಾದರೂ ಮಾತನಾಡಲು ಹೇಳಿ. ನಿಮ್ಮ ಫೋನ್ ಸ್ಕ್ರೀನ್‌ನಲ್ಲಿ ಲಿಪ್ಯಂತರಗೊಳಿಸಿದ ಪಠ್ಯವನ್ನು ನೀವು ಕಾಣುತ್ತೀರಿ.


ಹಂತ 6:ಲಿಪ್ಯಂತರ ಪಠ್ಯದ ಭಾಷೆ ಅಥವಾ ಗೋಚರತೆಯನ್ನು ನೀವು ಬದಲಾಯಿಸಬೇಕು ಎಂದಾದಲ್ಲಿ ಎಡಭಾಗದ ಕೆಳಭಾಗದಲ್ಲಿರುವ ಗೇರ್ ಐಕಾನ್ ಕ್ಲಿಕ್ ಮಾಡಿ. ಇದೀಗ, ಆ್ಯಪ್ ನಿಮ್ಮ ಆ್ಯಪ್‌ಗಳ ಪಟ್ಟಿಯಲ್ಲಿ ಗೋಚರಿಸುತ್ತದೆ.


ಭಾರತೀಯ ಭಾಷೆಗಳಾದ ಹಿಂದಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತೆಲುಗು ಹಾಗೂ ಉರ್ದು ಭಾಷೆಗಳಿಗೆ ಈ ಆ್ಯಪ್ ಬೆಂಬಲ ನೀಡುತ್ತದೆ. ಸೆಟ್ಟಿಂಗ್‌ಗಳ ಮೆನುವಿನಿಂದ ಪ್ರತಿಗಳನ್ನು ಉಳಿಸುವ ಆಯ್ಕೆಯನ್ನು ಆನ್ ಮಾಡುವ ಮೂಲಕ ನಿಮ್ಮ ಲಿಪ್ಯಂತರಗಳನ್ನು ಮೂರು ದಿನಗಳವರೆಗೆ ಉಳಿಸಲು ನೀವು ಆಯ್ಕೆ ಮಾಡಬಹುದು. ಬೇರೆಲ್ಲಿಯಾದರೂ ಬಳಸಲು ನೀವು ಲಿಪ್ಯಂತರದ ಪಠ್ಯ ಆಯ್ಕೆ ಮಾಡಬಹುದು ಮತ್ತು ನಕಲಿಸಬಹುದು.


5.0 ಲಾಲಿಪಾಪ್ ಮತ್ತು ಉನ್ನತ ಅಪ್‌ಡೇಟ್ ಲಭ್ಯವಿರುವ ಡಿವೈಸ್‌ಗಳಲ್ಲಿ ಈ ಆ್ಯಪ್ ಅನ್ನು ನೀವು ಸುಲಭವಾಗಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.

First published: