ಗೂಗಲ್ ತನ್ನ ಹಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಪ್ರಮುಖ ಘೋಷಣೆಯೊಂದನ್ನು ಹೊರಡಿಸಿದೆ. ಅದೇನೆಂದರೆ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ ಹಳೆಯ ಆವೃತ್ತಿಗಳಿಂದ ತನ್ನದೇ ಆದ ಅಪ್ಲಿಕೇಶನ್ಗಳ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿರುವ ವಿಚಾರವಾಗಿ ಗೂಗಲ್ ಬಹಿರಂಗಪಡಿಸಿದೆ.
ಇದೀಗ ಗೂಗಲ್ ಆ್ಯಂಡ್ರಾಯ್ಡ್ ಹಳೆಯ ಆವೃತ್ತಿಯಲ್ಲಿ ಕೆಲವು ಆ್ಯಪ್ಗಳ ನಿಷೇಧವು ಸೋಮವಾರದಿಂದ ಅನ್ವಯವಾಗುತ್ತದೆ ಮತ್ತು ಅನೇಕ ಬಳಕೆದಾರರು ತಮ್ಮ ಖಾತೆಗಳನ್ನು ಬಳಸಲು ಅನುಮತಿಸಲಾಗುವುದಿಲ್ಲ. ಗೂಗಲ್ ಈ ಬಗ್ಗೆ ಹಳೆಯ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಈಗಾಗಲೇ ಸಂದೇಶಗಳನ್ನು ಕಳುಹಿಸಿದ್ದು ವಿಷಯ ತಿಳಿಸಿದೆ. ನಿಷೇಧಿತ ಆಪ್ಗಳ ಗೂಗಲ್ ಪಟ್ಟಿಯಲ್ಲಿ ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಕ್ಯಾಲೆಂಡರ್, ಗೂಗಲ್ ಡ್ರೈವ್ ಸೇರಿವೆ.
ಸೆಪ್ಟೆಂಬರ್ 27, 2021 ರಿಂದ ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಕೆಳಗಿನ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಇನ್ನು ಮುಂದೆ ಗೂಗಲ್ ಸೂಟ್ ಬಳಸಲು ಸಾಧ್ಯವಿಲ್ಲ ಎಂದಿದೆ. ಆಂಡ್ರಾಯ್ಡ್ 2.3.7 ಅನ್ನು ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಎಂದು ಕರೆಯಲಾಗುತ್ತದೆ. ಸೆಪ್ಟೆಂಬರ್ 2011 ರಲ್ಲಿ ಬಿಡುಗಡೆ ಮಾಡಲಾಯಿತು.
ಗೂಗಲ್ನ ಇತ್ತೀಚಿನ ನಿರ್ಧಾರಕ್ಕೆ ಸಂಬಂಧಿಸಿದಂತೆ, ಗೂಗಲ್ ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. "ನಮ್ಮ ಪ್ರಯತ್ನಗಳ ಭಾಗವಾಗಿ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಆಂಡ್ರಾಯ್ಡ್ 2.3.7 ಸಾಧನಗಳಲ್ಲಿ ಅಥವಾ ಸೆಪ್ಟೆಂಬರ್ 27 ರಿಂದ ಇನ್ನಿತರ ಆವೃತ್ತಿಗಳಲ್ಲಿ ಗೂಗಲ್ ಸೈನ್ ಇನ್ ಮಾಡಲು ಅನುಮತಿಸುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಜೊತೆಗೆ "ಬಳಕೆದಾರರು Google ಉತ್ಪನ್ನಗಳು ಮತ್ತು Gmail, YouTube ಮತ್ತು ನಕ್ಷೆಗಳಂತಹ ಸೇವೆಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ದೋಷಗಳನ್ನು ಪಡೆಯಬಹುದು" ಎಂದು Google ತನ್ನ ಹೇಳಿಕೆಯಲ್ಲಿ ಸೇರಿಸಿದೆ.
ಆದರೆ ಈ ಸಮಸ್ಯೆಗೆ ಪರುಣಾಮ ಎಂಬಂತೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಆಂಡ್ರಾಯ್ಡ್ 3.0 ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಅಪ್ ಗ್ರೇಡ್ ಮಾಡುವಂತೆ ಗೂಗಲ್ ಒತ್ತಾಯಿಸಿದೆ. ಹಾಗೆ ಮಾಡಲು ವಿಫಲವಾದರೆ ಇರೋಸ್ಗೆ ಕಾರಣವಾಗುತ್ತದೆ ಮತ್ತು ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಈ ಆಪ್ಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ.
ಯಾವ Google ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ?
ಜಿಮೇಲ್
YouTube
Google Map
ಗೂಗಲ್ ಪ್ಲೇ ಸ್ಟೋರ್
ಗೂಗಲ್ ಕ್ಯಾಲೆಂಡರ್
ಇದರ ಜೊತೆಗೆ, ಈ ಬದಲಾವಣೆಯಿಂದ ಪರಿಣಾಮ ಬೀರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನೂ ಗೂಗಲ್ ಹಂಚಿಕೊಂಡಿದೆ. ನಿಷೇಧಿತ ಆಪ್ಗಳ ಸಂಪೂರ್ಣ Google ಪಟ್ಟಿಯನ್ನು ಕೆಳಗೆ ಪರಿಶೀಲಿಸಿ:
ಯಾವ ಮೊಬೈಲ್ ಫೋನ್ಗಳು ಇನ್ನು ಮುಂದೆ Google ಅಪ್ಲಿಕೇಶನ್ಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ?
- ಸೋನಿ ಎಕ್ಸ್ಪೀರಿಯಾ ಅಡ್ವಾನ್ಸ್
- ಲೆನೊವೊ ಕೆ 800
- ಸೋನಿ ಎಕ್ಸ್ಪೀರಿಯಾ ಗೋ
- ವೊಡಾಫೋನ್ ಸ್ಮಾರ್ಟ್ II
- ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 2
- ಸೋನಿ ಎಕ್ಸ್ಪೀರಿಯಾ ಪಿ
- LG ಸ್ಪೆಕ್ಟ್ರಮ್
- ಸೋನಿ ಎಕ್ಸ್ಪೀರಿಯಾ ಎಸ್
- LG ಪ್ರಾಡಾ 3.0
-HTC Velocity
-- HTC Evo 4G
- ಮೊಟೊರೊಲಾ ಫೈರ್
- ಮೊಟೊರೊಲಾ XT532.
Read Also: Youtube: ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿದರೆ ಬ್ಲಾಕ್ ಆಗುತ್ತೆ ನಿಮ್ಮ ಖಾತೆ!
ಒಟ್ಟಿನಲ್ಲಿ ಗೂಗಲ್ನಿಂದಾದ ಈ ಸಮಸ್ಯೆಯಿಂದ ಪಾರಾಗಲು ಮೊದಲು ಅಪ್ಗ್ರೇಡ್ ಮಾಡುವ ಅವಶ್ಯಕತೆ ಎದುರಾಗಿದೆ. ಹೀಗೆ ಮಾಡಿದ್ದಲ್ಲಿ ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಕ್ಯಾಲೆಂಡರ್, ಗೂಗಲ್ ಡ್ರೈವ್ ಸರಿಯಾಗಿ ಕಾರ್ಯನರ್ನಿಹಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ