Read Along App: ಮಕ್ಕಳ ಓದುವ ಕೌಶಲ್ಯ ಅಭಿವೃದ್ಧಿ ಪಡಿಸಬೇಕೆ?; ರೀಡ್​ ಅಲಾಂಗ್​​ ಆ್ಯಪ್ ​ಬಳಸಿ!

Google Read Along App: ‘ರೀಡ್​ ಅಲಾಂಗ್‘​​ ಆ್ಯಪ್​​​ ಮಕ್ಕಳ ಕಲಿಕೆಯ ಮೇಲೆ ದೃಷ್ಠಿ ಇರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಆ್ಯಂಡ್ರಾಯ್ಡ್​ ಆ್ಯಪ್​​ ಇದಾಗಿದ್ದು, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಲಿದೆ.

news18-kannada
Updated:May 8, 2020, 5:23 PM IST
Read Along App: ಮಕ್ಕಳ ಓದುವ ಕೌಶಲ್ಯ ಅಭಿವೃದ್ಧಿ ಪಡಿಸಬೇಕೆ?; ರೀಡ್​ ಅಲಾಂಗ್​​ ಆ್ಯಪ್ ​ಬಳಸಿ!
‘ಬೋಲೊ‘ ಆ್ಯಪ್​​
  • Share this:
ತಂತ್ರಜ್ಞಾನದ ದೈತ್ಯ ಗೂಗಲ್​ ಈವರೆಗೆ ಜನರ ಬಳಕೆಗೆ ಯೋಗ್ಯವಾಗುವಂತಹ ಸಾಕಷ್ಟು ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದೆ. ಇದೀಗ ಮಕ್ಕಳ ಕಲಿಕೆಗೆ ನೆರವಾಗಲು ‘ರೀಡ್​ ಅಲಾಂಗ್‘​ ಆ್ಯಪ್​ ಅನ್ನು ಪರಿಚಯಿಸಿದೆ. ಈ ಆ್ಯಪ್​​ ಭಾರತದಲ್ಲಿ ‘ಬೋಲೊ‘ ಹೆಸರಿನಲ್ಲಿ ಬಿಡುಗಡೆ ಆಗಿದೆ. ‘ರೀಡ್​ ಅಲಾಂಗ್‘​​ ಆ್ಯಪ್​​​ ಮಕ್ಕಳ ಕಲಿಕೆಯ ಮೇಲೆ ದೃಷ್ಠಿ ಇರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಆ್ಯಂಡ್ರಾಯ್ಡ್​ ಆ್ಯಪ್​​ ಇದಾಗಿದ್ದು, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಸಾಕ್ಷರತೆ ಕೌಶಲ್ಯ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಲಿದೆ.

ಭಾರತದಲ್ಲಿ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡ ನಂತರವೇ ‘ರೀಡ್​​ ಅಲಾಂಗ್​‘ ಆ್ಯಪ್ ಅನ್ನು ಪರಿಚಯಿಸಿದೆ. ಸದ್ಯ 180ಕ್ಕೂ ಹೆಚ್ಚು ದೇಶದಲ್ಲಿ  ‘ರೀಡ್​ ಅಲಾಂಗ್​‘ ಆ್ಯಪ್​ ಬಳಕೆಯಲ್ಲಿದೆ. ಇಂಗ್ಲೀಷ್​​, ಸ್ಪ್ಯಾನಿಷ್​​, ಪೋರ್ಚುಗೀಸ್​​ ಮತ್ತು ಹಿಂದಿ ಭಾಷೆಯಲ್ಲಿ ಸಿಗುತ್ತಿದೆ.

‘ಬೋಲೊ‘ ಆ್ಯಪ್​​

‘ಬೋಲೊ​‘​​ ಆ್ಯಪ್​​ ದಿಯಾ ಫೀಚರ್​ ಸಹಾಯವನ್ನು ಪಡೆದುಕೊಂಡು ಮಕ್ಕಳ ಸ್ವತಂತ್ರ ಕಲಿಕೆಗೆ ಮತ್ತು ಓದುವ ಕೌಶಲ್ಯವನ್ನು ಅಭಿವೃದ್ಧಿ  ಪಡಿಸಲು ನೆರವು ಮಾಡುತ್ತದೆ. ಜೊತೆಗೆ ಮಕ್ಕಳು ಜೋರಾಗಿ ಓದಲು ದಿಯಾ ಗೂಗಲ್​ನ ಟೆಕ್ಟ್​​-ಟು-ಸ್ಪೀಚ್​ ಮತ್ತು ಸ್ಚೀಚ್​​ ರೆಕಗ್ನಿಷನ್​​​​ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಮಕ್ಕಳು ಪದಗಳ ಉಚ್ಚಾರಣೆ ಮತ್ತು  ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಲು ಸಹಾಯ ಮಾಡುತ್ತದೆ.

‘ರೀಡ್​ ಅಲಾಂಗ್​‘ ಆ್ಯಪ್​  ಪ್ರಪಂಚದಾದ್ಯಂತ ವೈವಿಧ್ಯಮಯ ಮತ್ತು ಆಸಕ್ತಿದಾಯಕ ಕಥೆಗಳನ್ನು ತೊಡಗಿಸಿಕೊಂಡಿದೆ. ಜೊತೆಗೆ ಮಕ್ಕಳಿಗಾಗಿ ಆಟವನ್ನು ಇದರಲ್ಲಿ ನೀಡಲಾಗಿದೆ. ಮಕ್ಕಳು ಓದುತ್ತಾ, ಆಡುತ್ತಾ ಬ್ಯಾಡ್ಜ್​ಗಳನ್ನು ಸಂಗ್ರಹಿಸಬಹುದು. ಇದು ಮಕ್ಕಳನ್ನು ಓದಲು ಪ್ರೇರೆಪಿಸುತ್ತದೆ ಎಂದು ಗೂಗಲ್​ ತಿಳಿಸಿದೆ.

ಇನ್ನು ರೀಡ್​ ಅಲಾಂಗ್​ ಆ್ಯಪ್​ ಜಾಹೀರಾತು ರಹಿತವಾಗಿದ್ದು,​ ಮಕ್ಕಳು ಇಂಟರ್​ನೆಟ್​ ಇಲ್ಲದೆ ಸಹಃ ಬಳಸಬಹುದಾಗಿದೆ. ಹೆಚ್ಚಿನ ಕಥೆಗಳಿಗಾಗಿ ಪೋಷಕರು ಇಂಟರ್​ನೆಟ್​ ಬಳಸಬೇಕಾಗುತ್ತದೆ.

Xiaomi Mi 10: ದೇಶಿಯ ಮಾರುಕಟ್ಟೆಗೆ Mi 10 ಸ್ಮಾರ್ಟ್​ಫೋನ್​; 12GB ರ‍್ಯಾಮ್​ 256GB ಸ್ಟೊರೇಜ್!​
First published: May 8, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading